ರಾಜಕೀಯ ಉದ್ದೇಶಗಳ ಈಡೇರಿಕೆಗೆ ಗಲಭೆಯ ತಂತ್ರ

Mangalore-riot
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಕೋಮು ಗಲಭೆಗಳು ಮತ್ತು ಧರ್ಮದ ಹಿನ್ನೆಲೆಯ ಹಲ್ಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳಲು ಆರಂಬವಾಗಿವೆ. ಜನ ಇದನ್ನು ಅನ್ಯ ಕೋಮುಗಳ ನಡುವಿನ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಗಲಭೆ ಎಂಬ ದೃಷ್ಟಿಯಲ್ಲಿ ನೋಡುವುದು ಸಹಜ. ಹೆಚ್ಚಿನವರಿಗೆ ಇದರ ಹಿಂದೆ ರಾಜಕೀಯ ಉದ್ದೇಶಗಳ ಈಡೇರಿಕೆಯ ಕುತಂತ್ರ ಇರುವುದು ಅಷ್ಟು ಸುಲಭದಲ್ಲಿ ಅರಿವಾಗಲಾರದು. ಹಲವು ವರ್ಷಗಳಿಂದ ಶಾಂತವಾಗಿದ್ದ ದಕ್ಷಿಣ ಕನ್ನಡ ಒಮ್ಮೆಲೆ ಹತ್ತಿ ಉರಿಯುವುದಕ್ಕೆ ಪ್ರಾರಂಭಿಸಿದೆ, ಗಲಭೆಯಲ್ಲಿ ನಿರತವಾಗಿದ್ದ ಎರಡೂ ಕೋಮಿನ ತಲಾ ಒಂದೊಂದು ಅಮಾಯಕ ಜೀವಗಳು ಬಲಿಯಾಗಿವೆ. ಸದ್ಯ ಪರಿಸ್ಥಿತಿ ತಿಳಿಗೊಂಡಿದೆ, ಹಾಗೆಂದು ಇಲ್ಲಿಗೆ ಮುಗೀತು ಎಂದು ಪೊಲೀಸ್ ಇಲಾಖೆಯೇನಾದರೂ ಸ್ವಲ್ಪ ಗಮನ ಬೇರೆಡೆಗೆ ಹರಿಸಿದರೂ ಮತ್ತೊಂದು ಸುತ್ತಿನ ಗಲಭೆಯೆಬ್ಬಿಸಲು ನರಹಂತಕರು ಕೈಯಲ್ಲಿ ಕತ್ತಿ ಹಿಡಿದು ಹವಣಿಸುತ್ತಿದ್ದಾರೆ. ಹಾಗಾದರೆ ಗಲಭೆ ಸೃಷ್ಟಿಯ ಹಿಂದಿನ ನಿಜವಾದ ಕಾರಣ ಏನು? ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೂ, ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಗೂ ಸಂಬಂಧವಿದೆಯೇ ಎಂದು ಒಮ್ಮೆ ಅತ್ತ ನಮ್ಮ ಯೋಚನೆಯನ್ನು ಹೊರಳಿಸಿದರೆ ತಕ್ಷಣಕ್ಕೆ ನಮ್ಮ ಕಣ್ಣ ಮುಂದೆ ಬರುವುದು ಉತ್ತರ ಪ್ರದೇಶದ ಉಪಚುನಾವಣಾ ಪೂರ್ವ ಗಲಭೆಗಳು ಹಾಗೂ ಅಮಿತ್ ಷಾರ ರಣತಂತ್ರ. ಹೌದು ಉತ್ತರ ಪ್ರದೇಶ ವರ್ಷದ ಹಿಂದೆ ಕೋಮು ದಳ್ಳೂರಿಯಲ್ಲಿ ಹೊತ್ತಿ ಉರಿದಿತ್ತು. ನಿಜಕ್ಕೂ ಅದೊಂದು ಭೀಕರ ಸಮಯ.

ಕಳೆದ ವರ್ಷ ಆಗಸ್ಟ್ 05ರಂದು ಇಂಡಿಯನ್ ಎಕ್ಸ್‍ಪ್ರೆಸ್ (ಇಂಟರ್ನೆಟ್) ಆವೃತ್ತಿಯಲ್ಲಿ ಪ್ರಕಟವಾದ ತನಿಖಾ ವರದಿಯಲ್ಲಿ ಪ್ರಸ್ತಾಪಿಸಿರುವ ಘಟನೆಯೊಂದರ ವಿವರ ಇಂತಿದೆ. ಉತ್ತರ ಪ್ರದೇಶದ ಬಿಜ್ನೋರ್-ಹರಿದ್ವಾರ ಹೆದ್ದಾರಿಯಲ್ಲೊಂದು ಮಂದಿರ, ಅಲ್ಲಿಂದ ಹತ್ತು ಮೀಟರ್‍ಗಳ ದೂರದಲ್ಲಿ ಒಂದು ಗೆಟ್ ನಿರ್ಮಿಸುತ್ತಿದ್ದರು. ಅದು ಮಸೀದಿಯ ಮಿನಾರ್ ರೂಪ ಪಡೆಯುತ್ತಿದೆ ಎಂದು ಜಿಲ್ಲಾಡಳಿತಕ್ಕೆ ದೂರು ಹೋಯಿತು. ಗೆಟ್ ಕೆಲಸ ನಿಲ್ಲಿಸಲಾಯಿತು. ಈ ಘಟನೆ ಕುರಿತು ಅಲ್ಲೆ ಸಮೀಪದಲ್ಲಿದ್ದ ಅಂಗಡಿಯ ಮಾಲೀಕ 70ರ ಆಸುಪಾಸಿನ ಜಕೀರ್ ಅಹ್ಮದ್‍ರ ಮಾತು ಹೀಗಿದೆ ‘ಬಹಳ ತಿಂಗಳುಗಳಿಂದ ಗೆಟ್ ನಿರ್ಮಾಣ ನಡೆಯುತ್ತಿತ್ತು, ಆಗ ಯಾರ ವಿರೋಧವೂ ಇರಲಿಲ್ಲ, ಕಳೆದ ವಾರದಿಂದ ಇದ್ದಕ್ಕಿದ್ದಂತೆ ಪ್ರತಿಭಟನಾಕಾರರು ಬಂದು ಅದನ್ನು ಕೆಡವಬೇಕೆಂದು ಆಗ್ರಹಿಸುತ್ತಿದ್ದಾರೆ’. ಇದು ಅಲ್ಲಿನ ಚುನಾವಣೆಗೆ ಪೂರ್ವ ತಯಾರಿಯಾಗಿ ಬಿಜೆಪಿ ಮತ್ತು ಸಂಘ ಪರಿವಾರ ಧರ್ಮ ರಾಜಕಾರಣವನ್ನು ಬಳಸಿಕೊಂಡದ್ದರ ಬಗ್ಗೆ ಸಣ್ಣ ಉದಾಹರಣೆಯಷ್ಟೆ.

ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಪ್ರಕಾರ ಒಟ್ಟು 10 ವಾರಗಳಲ್ಲಿ ಪೊಲೀಸ್ ಕಡತಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ ಎಂತಹವರನ್ನು ಬೆಚ್ಚಿಬೀಳಿಸುತ್ತದೆ. ಅವುಗಳ ಒಟ್ಟು ಸಂಖ್ಯೆ ಬರೋಬ್ಬರಿ 605, ಅಂದರೆ ದಿನಕ್ಕೆ ಕನಿಷ್ಟ 9 ರಂತೆ ಚಿಕ್ಕ ಮತ್ತು ದೊಡ್ಡ ಕೋಮು ಗಲಭೆಗಳು ನಡೆದಿವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಈ ಗಲಭೆಗಳಲ್ಲಿ ಮೂರನೆ ಒಂದರಷ್ಟು ಅಂದರೆ ಸುಮಾರು 200 ಗಲಭೆಗಳು ಉಪಚುನಾವಣೆ ನಡೆಯಬೇಕಾದ 12 ಕ್ಷೇತ್ರಗಳಲ್ಲಿ ನಡೆದಿವೆ, ಇನ್ನು 200 ರಷ್ಟು ಇವೇ ಜಿಲ್ಲಾ ಪ್ರದೇಶಗಳಿಗೆ ಸೇರಿದ ಅಕ್ಕ ಪಕ್ಕದ ಸ್ಥಳಗಳಲ್ಲಿ ನಡೆದಿವೆ. ಅದ್ಯಾವ ಮಟ್ಟಿಗೆ ಕೋಮು ವೈಷಮ್ಯವನ್ನು ಬಿತ್ತುವ ಪ್ರಯತ್ನ ನಡೆದಿತ್ತು ಎಂದರೆ ಒಂದು ಗುಂಪು ಪ್ರಶ್ನೆಗಳನ್ನು ಜ್ವಲಂತವಾಗಿಡಲು ಸತತ ಒತ್ತಡಗಳನ್ನು ಹಾಕುತ್ತಲೇ ಇದೆ. ನಮಗೆ ಪ್ರತಿದಿನ ದೂರು ಬರುತ್ತಿವೆ, ಅವುಗಳಲ್ಲಿ ಹೆಚ್ಚಿನವು ಹಳೆಯವು, ಆದರೆ ಅವನ್ನು ಪ್ರತಿದಿನವೆಂಬಂತೆ ಎತ್ತಿಕೊಳ್ಳಲಾಗುತ್ತಿದೆ, ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ರಾಜಕೀಯವನ್ನು ತರಲಾಗುತ್ತಿದೆ’ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಪತ್ರಿಕೆಯ ತನಿಖಾ ತಂಡದೆದುರು ಅಳಲು ತೋಡಿಕೊಂಡಿದ್ದರು.

ಮಂಗಳೂರು ಗಲಭೆ ಮುಂದೆ ಕರ್ನಾಟಕದಲ್ಲಿ ನಿರ್ಮಾಣವಾಗಬಹುದಾದ ಗಲಭೆಗಳಿಗೆ ಮುನ್ಸೂಚನೆಯಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ, ಇದಕ್ಕೆ ಮುಖ್ಯ ಕಾರಣ ದಕ್ಷಿಣ ಕನ್ನಡ ಕೋಮು ಗಲಭೆ ಆರಂಭವಾದುದ್ದು ಕಲ್ಲಡ್ಕದಿಂದ, ಈ ಸ್ಥಳ ಆರ್‍ಎಸ್‍ಎಸ್ ಮುಖಂಡ ಪ್ರಭಾಕರ ಭಟ್‍ರವರ ಭದ್ರ ಕೋಟೆ. ಅಂದರೆ ಗಲಭೆ ಹಿಂದೆ ಬಿಜೆಪಿ ಕೈವಾಡ ಇದೆ ಎಂಬುದು ಸಾಬೀತಾಗಿದೆ. ಒಂದು ವೇಳೆ ಬಿಜೆಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅನುಸರಿಸಿದ ತಂತ್ರವನ್ನೆ ಉಪಯೋಗಿಸಿದರೆ ನಮ್ಮ ರಾಜ್ಯದಲ್ಲಿಯೂ ನಾವು ಇಂತಹ ಕೋಮು ಗಲಭೆಗಳನ್ನು ಎದುರಿಸಲು ಸಿದ್ಧವಾಗಬೇಕಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s