
ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ವಿದೇಶಗಳಿಗೆ ಹೆಚ್ಚು ಹೆಚ್ಚು ಭೇಟಿ ನೀಡುವ ಮೂಲಕ ದೇಶದ ಜನರಲ್ಲಿ ನಿರೀಕ್ಷೆಗಳ ಬೆಟ್ಟವೇ ಹುಟ್ಟುವಂತೆ ಮಾಡಿದರು. ಇದರಿಂದ ದೇಶದಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಾಗುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ನುಡಿದಿದ್ದ ಅವರ ಮಾತುಗಳು ಕಾಲಕ್ರಮೇಣ ಹುಸಿಯಾಗುತ್ತ ಬಂದವು. ಇದು ಅವರÀ ವಿದೇಶ ಪ್ರವಾಸದಿಂದ ದೇಶಕ್ಕೇನು ಲಾಭ ಎಂಬ ಜಿಜ್ಞಾಸೆ ಮೂಡಲು ಕಾರಣವಾಯಿತು. ಮೋದಿಯವರ ವಿದೇಶ ಪ್ರವಾಸ ಮತ್ತು ಅದ ಹಿಂದಿನ ಉದ್ದೇಶಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ನೋಡೋಣ.
ಮೋದಿ ರಷ್ಯಾ ಭೇಟಿ
ಮೋದಿಯವರ ಆಪ್ತ ಮಿತ್ರ ಹಾಗೆ ಉದ್ಯಮಿಯಾಗಿರುವ ಅನಿಲ್ ಅಂಬಾನಿಯವರ ರಿಲಾಯನ್ಸ್ ಕಂಪೆನಿ ರಷ್ಯಾದ ಶಸ್ತ್ರಾಸ್ತ್ರ ಕಂಪೆನಿಯೊಂದಿಗೆ 6000 ಬಿಲಿಯನ್ ಡಾಲರ್ಗಳ ಒಪ್ಪಂದಕ್ಕೆ ಸಹಿ ಮಾಡಲು ಅನುಕೂಲ
ಮೋದಿ ಫ್ರಾನ್ಸ್ ಭೇಟಿ
ಅನಿಲ್ ಅಂಬಾನಿಯ ರಿಲಾಯನ್ಸ್ ಕಂಪೆನಿಯು ರೈಫಲ್ ಫೈಟರ್ ಜೆಟ್ ಡೀಲನ್ನು ಮಾಡಿಕೊಳ್ಳಲು ಅನುಕೂಲ
ಮೋದಿ ಆಸ್ಟ್ರೇಲಿಯಾ ಭೇಟಿ
ಮೋದಿಯವರ ಆಸ್ಟ್ರೇಲಿಯಾ ಭೇಟಿಯಿಂದ ಅವರ ಆಪ್ತ ಗೌತಮ್ ಅದಾನಿಯ ಆಸ್ಟ್ರೇಲಿಯಾ ಕಲ್ಲಿದ್ದಲು ಗಣಿ ಯೋಜನೆಗೆ ಅಂತಿಮ ಒಪ್ಪಿಗೆ ಸಿಗುತ್ತದೆ.
ಮೋದಿ ಬಾಂಗ್ಲಾ ಭೇಟಿ
ರಾಷ್ಟ್ರೀಯ ಉಷ್ಣೋತ್ಪನ್ನ ಇಂಧನ ಸಂಸ್ಥೆ, ಅದಾನಿ ಸಂಸ್ಥೆ ಆರ್.ಪವರ್ ಮತ್ತು ಪೆಟ್ರೋನೆಟ್ ಯೋಜನೆಗಳಿಗೆ ಬಾಂಗ್ಲಾ ದೇಶದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಹಾಯವಾಗುತ್ತದೆ.
ಮೋದಿ ಅಮೇರಿಕಾ ಭೇಟಿ
ಮೋದಿ ಆಪ್ತ ಅಂಬಾನಿಯ ರಿಲಾಯನ್ಸ್ ರಕ್ಷಣಾ ಶಾಖೆಯು ಯು.ಎಸ್.ಎ ನೆರವಿನೊಂದಿಗೆ ಯುದ್ಧನೌಕೆಗಳ ದುರಸ್ತಿ ಒಪ್ಪಂದಕ್ಕೆ ಸಹಿ ಹಾಕುತ್ತದೆ. ಈ ಒಪ್ಪಂದದಿಂದ ಅಂಬಾನಿ ಕಂಪೆನಿಗೆ 5 ವರ್ಷಗಳಲ್ಲಿ ರೂ.15 ಸಾವಿರ ಕೋಟಿ ಲಾಭ ನಿರೀಕ್ಷಿಸಲಾಗಿದೆ.
ಮೋದಿ ಇಸ್ರೇಲ್ ಭೇಟಿ
ಮೋದಿಯ ಪರಮಾಪ್ತ ಉದ್ಯಮಿ ಗೌತಮ್ ಅದಾನಿ ಮತ್ತು ಇಸ್ರೇಲಿನ ಎಲ್ಟಿಜ್ ಕಂಪೆನಿಗಳು ಮಾನವ ರಹಿತ ಆಕಾಶ ನೌಕೆಗಳ ಉದ್ಯಮದಲ್ಲಿ ಜಂಟಿ ಒಪ್ಪಂದ ಮಾಡಿಕೊಂಡಿವೆ. ಇದಕ್ಕೆ ಮೋದಿಯವರ ಭೇಟಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದೆ ಎಂಬುದು ಮಾಧ್ಯಮಗಳ ಅಭಿಪ್ರಾಯ.
ಒಟ್ಟಿನಲ್ಲಿ ಮೋದಿಯವರ ವಿದೇಶ ಪ್ರವಾಸದಿಂದ ದೇಶಕ್ಕೆಷ್ಟು ಲಾಭವಾಗಿದೆ ಎಂದು ಈಗಲೇ ತಿಳಿದು ಬರದೇ ಹೋದರು, ಅವರ ಆಪ್ತ ಉದ್ಯಮಿ ವಲಯಕ್ಕೆ ಮಾತ್ರ ಕೋಟ್ಯಾಂತರ ರೂ. ಲಾಭವಾಗಿರುವುದು ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ಮೋದಿಯವರ ಚುನಾವಣಾ ಖರ್ಚು ವೆಚ್ಚಗಳನ್ನುಖೀ ಉದ್ಯಮಿ ವಲಯದವರು ನೋಡಿಕೊಳ್ಳುತ್ತಾರೆ ಎಂಬ ಬಗ್ಗೆಯೂ ಹಲವಾರು ಕಡೆ ಪ್ರಸ್ತಾಪವಾಗಿದೆ. ಹಾಗಾದರೆ ತನ್ನ ಆಪ್ತ ವಲಯದ ಲಾಭಕ್ಕಾಗಿ ದೇಶದ ಬಡ ಜನರು ಕಟ್ಟಿದ ತೆರಿಗೆ ಹಣದಲ್ಲಿ ವಿದೇಶ ಪ್ರವಾಸ ಮಾಡುವುದು ಎಷ್ಟು ಸೂಕ್ತ ಎಂಬುದೆ ಸದ್ಯದ ಪ್ರಶ್ನೆ.
Advertisements