ಭಾಷಣದಿಂದ ದೇಶ ರಕ್ಷಣೆ ಅಸಾಧ್ಯ..!

Modi speeh
ಶ್ರೀಯುತ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಪೂರ್ವದಿಂದಲೂ ಬಲಪಂಥೀಯ ವಿಚಾರಧಾರೆಗಳನ್ನು ಉಗ್ರವಾಗಿ ಪ್ರತಿಪಾದಿಸಿದ ನಾಯಕ, ಅವರ ಆಡಳಿತದ ಅವಧಿಯಲ್ಲಿಯೇ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿಗಳು ನಡೆದಿರುವುದು ನಿಜಕ್ಕೂ ದುರಂತ. ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಯಾವ ವಿಚಾರಗಳ ಬಗ್ಗೆ ಅವರು ಆವೇಶಭರಿತ ಮಾತುಗಳನ್ನು ಆಡಿದ್ದರೋ, ಇಂದು ಅದೇ ವಿಚಾರಗಳಲ್ಲಿ ಅವರು ವಿಫಲತೆಯನ್ನು ಅನುಭವಿಸುತ್ತಿದ್ದಾರೆ. ಈ ಘಟನೆ ಇದಕ್ಕೊಂದು ಸ್ಪಷ್ಟ ಉದಾಹರಣೆ ಅಷ್ಟೆ.

ಭಯೋತ್ಪಾದನೆ ನಿಮೂರ್ಲನೆಯ ಪಣತೊಟ್ಟು, ಅಧಿಕಾರದ ಚುಕ್ಕಾಣಿ ಹಿಡಿದ ಮೋದಿಯವರು ಇಂದು ಭಯೋತ್ಪಾದಕ ಕೃತ್ಯಗಳನ್ನು ನಿಗ್ರಹಿಸಲಾಗದೆ ದಾರಿ ಕಾಣದಂತಾಗಿದ್ದಾರೆ. ಒಂದು ವ್ಯವಸ್ಥೆಯನ್ನು ಬದಲಾಯಿಸಲು ಕೇವಲ ಭಾಷಣಗಳಿಂದ ಮಾತ್ರ ಸಾಧ್ಯವಿಲ್ಲ, ಅದಕ್ಕೆ ತಕ್ಕ ಅನುಭವವೂ ಬೇಕು ಎಂಬುದು ಸರ್ವಸಮ್ಮತವಾದ ಅಂಶ. ಆ ಅನುಭವದ ಕೊರತೆ ಮೋದಿಯವರನ್ನು ಈ ಸಂದರ್ಭದಲ್ಲಿ ಕಾಡುತ್ತಿದೆ. ಅಧಿಕಾರಕ್ಕೆ ಬಂದ ದಿನದಿಂದ ಭಯೋತ್ಪಾದಕರ ದಾಳಿಗಳು ನಿರಂತರವಾಗಿ ಏರುತ್ತಾ ಸಾಗಿವೆ. ಭಯೋತ್ಪಾದಕರನ್ನು ಮಟ್ಟಹಾಕಲು ನಡೆಸಲಾಗಿದೆ ಎನ್ನಲಾದ ಸರ್ಜಿಕಲ್ ಸ್ಟ್ರೈಕ್‍ನ ಬಗ್ಗೆ ಮಾಹಿತಿ ಇದುವರೆಗೂ ದೇಶದ ಜನತೆಗೆ ಲಭ್ಯವಾಗದೆ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅದನ್ನು ಹೊರತುಪಡಿಸಿದರೆ ಭಯೋತ್ಪಾದನೆ ನಿಯಂತ್ರಿಸುವಲ್ಲಿ ಕೈಗೊಂಡಿರುವ ಗಮನಾರ್ಹ ರಾಜಕೀಯ ನಿರ್ಧಾರಗಳಾವುವು ಇಲ್ಲ ಎಂದೇ ಹೇಳಬಹುದು.

ದೇಶದ ಭದ್ರತೆಯನ್ನು ಅತ್ಯಂತ ಲಘುವಾಗಿ ಪರಿಗಣಿಸಿದ್ದೆ ಇಂತಹ ದಾಳಿಗಳು ಹೆಚ್ಚಾಗಲು ಮುಖ್ಯ ಕಾರಣ. ಒಂದು ದೇಶದ ಭದ್ರತೆಯ ನಿಯಮಗಳನ್ನು ರೂಪಿಸಲು ಚಾಣಾಕ್ಷತೆ ಮತ್ತು ದೃಢ ಸಂಕಲ್ಪ ಎರಡೂ ಅತ್ಯಗತ್ಯ. ಇವೆರಡರಲ್ಲಿ ಯಾವುದೇ ಒಂದು ಅಂಶ ಕೊರತೆ ಆದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಭಯೋತ್ಪಾದನೆ ಎಂಬುದು ಇಂದು ನೆನ್ನೆಯ ಸಮಸ್ಯೆಯಲ್ಲದಿದ್ದರೂ ಅದನ್ನು ಎದುರಿಸಲು ಸೂಕ್ತ ತಂತ್ರಗಳನ್ನಾದರೂ ರೂಪಿಸುವ ಅಗತ್ಯವಿದೆ. ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ಇದೇ ಮೊದಲಲ್ಲ. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ 2000ನೇ ಇಸವಿಯಲ್ಲಿ ದಾಳಿ ನಡೆದಿತ್ತು. ಆ ದಾಳಿಯಲ್ಲಿ 30 ಯಾತ್ರಿಕರು ಸಾವನ್ನಪ್ಪಿ, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಕೇವಲ ಮಾತುಗಳ ಮೂಲಕ ಜನರಿಗೆ ಬೆಟ್ಟದಷ್ಟು ಭರವಸೆಯನ್ನು ನೀಡುವ ಬದಲು, ವ್ಯವಸ್ಥೆಯಲ್ಲಿ ಬದಲಾವಣೆ ತಂದು ಅದು ಜನರ ಅನುಭವಕ್ಕೆ ಬರುವಂತೆ ಮಾಡುವುದು ಉತ್ತಮ. ದೊಡ್ಡ ದೊಡ್ಡ ಭಾಷಣಗಳಿಂದ ಹುಟ್ಟಿದ ನಿರೀಕ್ಷೆಗಳು ಕೂಡ ಭಾಷಣದ ಪ್ರಮಾಣದಷ್ಟೇ ದೊಡ್ಡದಾಗಿರುತ್ತವೆ ಎಂಬುದನ್ನು ಮರೆಯಬಾರದು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s