ದೂರದ ಬೆಟ್ಟ ಕಣ್ಣಿಗೆ ಸುಂದರ

Aityanath.png
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‍ರವರ ಸರ್ಕಾರ ಅಧಿಕಾರಕ್ಕೆ ಬಂದ ಕೆಲವಾರು ದಿನಗಳ ಕಾಲ ಅಲ್ಲಿ ದೊಡ್ಡ ಪವಾಡವೇ ನಡೆಯುತ್ತಿದೆ, ಉತ್ತರ ಪ್ರದೇಶ ಸಂಪೂರ್ಣ ಬದಲಾಗುತ್ತಿದೆ, ಬೆರಳೆಣಿಕೆಯ ದಿನಗಳಲ್ಲಿ ಅಲ್ಲಿನ ಚಿತ್ರಣವೇ ಬದಲಾಗಲಿದೆ ಎಂಬಂತೆ ಮಾಧ್ಯಮಗಳು ನಿತ್ಯ ಗಂಟೆಗಟ್ಟಲೆ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತ, ಯೋಗಿಯವರನ್ನು ಪವಾಡ ಪುರುಷ ಎಂಬಂತೆ ಬಿಂಬಿಸಿದ ಪರಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಯೋಗಿಯವರ ಹೆಜ್ಜೆಗಳು ಮೊದಮೊದಲು ಕ್ರಾಂತಿಕಾರಕ ಎನಿಸಿದರೂ ಬರುಬರುತ್ತಾ ಅರ್ಥಹೀನವಾಗುತ್ತಾ ಹೋದದ್ದು ದುರದೃಷ್ಟಕರ. ಉದಾಹರಣೆಗೆ ಆ್ಯಂಟಿ ರೋಮಿಯೋ ಸ್ಕ್ವಾಡ್. ಮಹಿಳೆಯೊಬ್ಬಳನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಇದೇ ಆ್ಯಂಟಿ ರೋಮಿಯೋ ಸ್ಕ್ವಾಡ್‍ನಿಂದ ಬಂಧಿಸಲ್ಪಟ್ಟ ಬೀದಿ ಕಾಮಣ್ಣನೊಬ್ಬನನ್ನು ಅಲ್ಲಿನ ಬಿಜೆಪಿ ನಾಯಕರೇ ಬಲವಂತವಾಗಿ ಪೊಲೀಸರ ಬಂಧನದಿಂದ ಬಿಡಿಸಿಕೊಂಡು ಹೋದರು. ಅಲ್ಲಿಗೆ ಆ್ಯಂಟಿ ರೋಮಿಯೋ ಸ್ಕ್ವಾಡ್ ಹೊಳೆಯಲ್ಲಿ ಹುಳಿ ಕದಡಿದಂತಾಯಿತು. ಇನ್ನುಳಿದಂತೆ ಆದಿತ್ಯನಾಥ್‍ರವರು ಅಧಿಕಾರಕ್ಕೆ ಬಂದ ದಿನದಿಂದ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ನಿರಂತರವಾಗಿ ಏರಿಕೆಯಾಗುತ್ತ ಬಂದಿವೆ, ಕೋಮು ಗಲಭೆಗಳು ಮೇಲಿಂದ ಮೇಲೆ ಮರುಕಳಿಸಿದರೂ ಸರ್ಕಾರ ಕೈಕಟ್ಟಿ ಕುಳಿತಿದೆ.
ಈ ಮೇಲಿನವು ಹಳೆಯ ಘಟನೆಗಳಾದರೆ ಕಳೆದ ಶನಿವಾರ ಬುಲಂದ್‍ಶಹರ್ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್‍ರವರನ್ನು ಎತ್ತಂಗಡಿ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ್ದು ಮಾತ್ರವಲ್ಲದೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎನ್ನುವ ಕಾರಣಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಸೇರಿ ಐವರು ಕಾರ್ಯಕರ್ತರನ್ನು ಜೈಲಿಗಟ್ಟಿದ್ದರು. ಈ ಪ್ರಕರಣ ನಡೆದು ಒಂದೇ ವಾರದಲ್ಲಿ ಶ್ರೇಷ್ಠಾರವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಮಾಮೂಲಿ ವರ್ಗಾವಣೆ ಎಂಬ ಬಣ್ಣ ಹಚ್ಚಲು ಸರ್ಕಾರ ಯತ್ನಿಸಿ ವಿಫಲವಾಗಿ ತಲೆ ತಗ್ಗಿಸುವಂತಾಗಿದೆ.

ಈ ಮುಜುಗರದಿಂದ ಹೊರ ಬರುವ ಮುನ್ನವೇ ಇಂತಹುದೆ ಇನ್ನೊಂದು ಪ್ರಕರಣ ನಡೆದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ರಾಜ್ಯದ ಭ್ರಷ್ಟಾಚಾರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ ತಾವು ಸರ್ಕಾರ ತ್ಯಜಿಸುವುದಾಗಿ ಬಿಜೆಪಿ ಮಿತ್ರ ಪಕ್ಷ ಸುಹೇಲ್‍ದೇವ್ ಭಾರತ ಸಮಾಜ ಪಕ್ಷ (ಸಿಬಿಎಸ್ಸಿ)ದ ಅಧ್ಯಕ್ಷ ಓಂಪ್ರಕಾಶ್ ರಾಜ್‍ಭರ್‍ರವರು ಯೋಗಿ ಆದಿತ್ಯನಾಥ್‍ರವರಿಗೆ ಹೇಳಿದ್ದಾರೆ. ಇದು ಅಲ್ಲಿನ ಸರ್ಕಾರದ ಕಾರ್ಯವೈಖರಿಯನ್ನೇ ಅಣಕಿಸುವಂತಿದೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿನ ಯೋಗಿಯವರ ಭಕ್ತರು ಯೋಗಿ ಆದಿತ್ಯನಾಥ್‍ರವರ ಸರ್ಕಾರವನ್ನು ಹೊಗಳುತ್ತಿದ್ದ ಪರಿ ಕಂಡು ನಿಜಕ್ಕೂ ಉತ್ತರ ಪ್ರದೇಶದಲ್ಲಿ ಕ್ರಾಂತಿಯೇ ನಡೆಯುತ್ತಿದೆ ಎಂಬ ಭ್ರಮೆಯಲ್ಲಿದ್ದ ಹಲವಾರು ಮಂದಿಗೆ ವಾಸ್ತವ ಈಗ ಅರಿವಿಗೆ ಬರುತ್ತಿದೆ. ಸುಳ್ಳು ಪ್ರಚಾರಕ್ಕೆ ಹೆಸರುವಾಸಿಯಾದ ಭಕ್ತರು ಇಂತಹ ಕಠೋರ ಸತ್ಯಗಳನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s