ದಲಿತರು ಅನ್ಯಗ್ರಹ ಜೀವಿಗಳೆ?

Yeddyurappa
ಕಳೆದ ಕೆಲವು ದಿನಗಳಿಂದ ದಲಿತರ ಮನೆಗಳಿಗೆ ಭೇಟಿ ನೀಡುತ್ತಿರುವ ಯಡಿಯೂರಪ್ಪನವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗ ದಲಿತರನ್ನು ತಮ್ಮ ಮನೆಗೆ ಕರೆಸಿ ಸತ್ಕರಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ದಲಿತರನ್ನು ತಮ್ಮ ಮನೆಗೆ ಕರೆಸುವುದನ್ನೇ ಅನ್ಯಗ್ರಹ ಜೀವಿಯೊಂದನ್ನು ಮನೆಗೆ ಕರೆಸಿಕೊಂಡು ಸತ್ಕರಿಸಿದಷ್ಟು ಪ್ರಚಾರ ಪಡೆದುಕೊಳ್ಳುತ್ತಿರುವುದು ಸರಿಯೇ? ದಲಿತರು ನಮ್ಮಂತೆ ಸಾಮಾನ್ಯ ಮನುಷ್ಯರು ಅಂದಮೇಲೆ ಅವರನ್ನು ನಮ್ಮ ಮನೆ ಒಳಗೆ ಬಿಟ್ಟುಕೊಂಡೆ ಎಂದು ಹೇಳುವ ಮೂಲಕ ಸಮಾಜಕ್ಕೆ ಅವರ ಬಗ್ಗೆ ಇನ್ನಷ್ಟು ಋಣಾತ್ಮಕ ಸಂದೇಶ ರವಾನೆಯಾಗುವುದಿಲ್ಲವೆ? ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಇದುವರೆಗೂ ಬಿಜೆಪಿ ದಲಿತರನ್ನು ರಾಜಕೀಯದಲ್ಲೂ ಅಸ್ಪøಷ್ಯರಂತೆ ಕಂಡ ಪಕ್ಷ, ತನ್ನ ರಾಜಕೀಯ ನಿಲುವಿಗೆ ವಿರುದ್ಧವಾಗಿ ದಲಿತರನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿ ದಲಿತರ ಸಂಖ್ಯೆ ಹೆಚ್ಚಿರುವುದು.
ದಲಿತರ ಮನೆಗೆ ಹೋಗುವುದು, ಅವರ ಮನೆಯಲ್ಲಿ ಊಟ ಮಾಡುವುದನ್ನೆ ಯಾಕೆ ಮಾನವ ಕುಲವೇ ಒಪ್ಪದ ಕಾರ್ಯವೊಂದನ್ನು ಮಾಡಿದ್ದೇನೆ ಎಂಬಂತೆ ಬಿಂಬಿಸುತ್ತಿರುವುದು? ಹಾಗಾದರೆ ಬಿಜೆಪಿ ಇದುವರೆಗೂ ದಲಿತರು ನಮ್ಮಂತೆ ಮನುಷ್ಯರು ಎಂಬ ದೃಷ್ಟಿಕೋನವನ್ನು ಹೊಂದಿರಲಿಲ್ಲವೇ ಎಂದು ಯೋಚಿಸಿದಾಗ ಇಂದಿನ ಅವರ ದಲಿತರ ಮನೆಗಳ ಭೇಟಿಗೂ, ದಲಿತರ ಬಗ್ಗೆ ಅವರಿಗಿರುವ ಆಲೋಚನೆಗಳ ನಡುವಿನ ವಾಸ್ತವತೆ ತಿಳಿದುಬರುತ್ತದೆ. ಬಿಜೆಪಿ ಕೇವಲ ಹಿಂದುತ್ವದ ತಳಹದಿಯ ಮೇಲೆ ಭಾವನಾತ್ಮಕವಾಗಿ ಜನರ ಮತಗಳನ್ನು ತನ್ನತ್ತ ಸೆಳೆಯುತ್ತಾ, ಅಧಿಕಾರಕ್ಕೆ ಬರುತ್ತಿದ್ದ ಪಕ್ಷ. ಅವರು ಎಂದಿಗೂ ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿ ಚಿಂತನೆಯನ್ನು ತಮ್ಮ ಸಿದ್ದಾಂತವಾಗಿ ಸ್ವೀಕರಿಸಿದವರಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ದಲಿತರು ಬಹುಸಂಖ್ಯೆಯಲ್ಲಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕೇವಲ ಹಿಂದುತ್ವ ಸಿದ್ದಾಂತವೊಂದನ್ನೆ ಮುಖ್ಯವಾಗಿಟ್ಟುಕೊಂಡು ರಾಜ್ಯದಲ್ಲಿ ಅಧಿಕಾರ ಪಡೆಯುವುದು ಅಸಾಧ್ಯ ಎಂಬ ವಿಚಾರ ಬಿಜೆಪಿಯನ್ನು ಬಹುವಾಗಿ ಕಾಡಿತು, ಇದೇ ಉದ್ದೇಶಕ್ಕಾಗಿ ದಲಿತರ ಓಲೈಕೆಗೆ ಬಿಜೆಪಿ ಟೊಂಕ ಕಟ್ಟಿ ನಿಂತಿದೆ.

ಕಡೆ ಪಕ್ಷ ದಲಿತರ ಮನೆಯ ಊಟವನ್ನಾದರೂ ಪ್ರಾಮಾಣಿಕ ಮಾಡುತ್ತಾರೊ, ಅದು ಇಲ್ಲ. ಹೋಟೆಲ್‍ಗಳಿಂದ ತರಿಸಿಕೊಂಡು ದಲಿತರ ಮನೆಯಲ್ಲಿ ತಿನ್ನುವುದು, ಕುಡಿಯಲು ಬಿಸ್ಲೆರಿ ನೀರನ್ನು ತರಿಸಿಕೊಳ್ಳುವುದು ಇಂತಹ ತೋರುಗಾಣಿಕೆಯ ಕಾಳಜಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ಅವರ ನಿಜ ಬಣ್ಣ ಬಯಲಾಯಿತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರ ಹಿಡಿಯಲು ಇದೇ ರೀತಿ ತಂತ್ರ ಉಪಯೋಗಿಸಿ ಯಶಸ್ವಿಯಾಗಿತ್ತು, ಆದರೆ ಈಗ ನಿತ್ಯ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ, ಸರ್ಕಾರವೇ ಇಂತಹ ದಾಳಿಗಳಿಗೆ ಬೆನ್ನೆಲುಬಾಗಿ ನಿಂತಿದೆ. ಕರ್ನಾಟಕದ ದಲಿತರಿಗೆ ಈ ವಿಚಾರ ಚೆನ್ನಾಗಿಯೇ ತಿಳಿದಿದೆ. ಇದುವರೆಗೂ ತಮ್ಮ ಏಳಿಗೆಗೆ ದುಡಿಯುತ್ತಿರುವವರನ್ನು ಮರೆತು ಬಣ್ಣದ ಮಾತುಗಳಿಗೆ ಮರುಳಾಗಿ ಮತ ನೀಡುವಷ್ಟು ಮೂರ್ಖರಂತೂ ಖಂಡಿತಾ ಅಲ್ಲ.
ಮಾನ್ಯ ಯಡಿಯೂರಪ್ಪನವರೇ, ನೀವು ದಲಿತರ ಮನೆಗಳಿಗೆ ಭೇಟಿ ನೀಡುವ ಮುಂಚೆಯೇ ಸರ್ಕಾರದ ಯೋಜನೆಗಳು ಅವರನ್ನು ತಲುಪಿವೆ, ಕೇವಲ ದಲಿತರು ಮಾತ್ರವಲ್ಲ ರಾಜ್ಯದ ಬಡ ಜನರು ಸಂತೃಪ್ತ ಭಾವನೆಯಿಂದ ಊಟ ಮಾಡುತ್ತಿರುವ ಅಕ್ಕಿ ಕೂಡ ಅನ್ನಭಾಗ್ಯ ಯೋಜನೆಯ ಮೂಲಕ ನೀಡಿದ್ದು. ಅಧಿಕಾರದಲ್ಲಿದ್ದಾಗ ಬಡವರನ್ನು ಮರೆತು ಈಗ ನಾಟಕದ ಕಾಳಜಿ ತೋರುವುದಕ್ಕಿಂತ, ಬಡ ರೈತರ ಸಾಲ ಮನ್ನಾದ ಬಗ್ಗೆ ಮಾನ್ಯ ಪ್ರಧಾನ ಸೇವಕ ನರೇಂದ್ರ ಮೋದಿಯವರ ಬಳಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿ, ಕಡೇ ಪಕ್ಷ ಈ ರೀತಿಯಾದರೂ ಹಿಂದೆ ಅಧಿಕಾರ ನೀಡಿದ್ದ ನಾಡಿನ ಜನರ ಋಣ ತೀರಿಸಿ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s