ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರದ ಕ್ರಮಗಳು

Water-and-feed-supply-by-Govt
ರಾಜ್ಯದಲ್ಲಿ ನೀರಿಗಾಗಿ ಈಗಾಗಲೇ ಹಾಹಾಕಾರ ಉಂಟಾಗಿದೆ. ಕಳೆದ 6 ವರ್ಷಗಳಿಂದ ಬರ ಬೆಂಬಿಡದೆ ಕಾಡುತ್ತಿದೆ. ರಾಜ್ಯದ ಒಟ್ಟು 177 ತಾಲೂಕುಗಳ ಪೈಕಿ 160 ತಾಲೂಕುಗಳು ಬರಪೀಡಿತ ಎಂದು ಈಗಾಗಲೇ ಘೋಷಿಸಿದ್ದು, ಬರ ಪರಿಸ್ಥಿತಿಯನ್ನು ನಿರ್ವಹಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೂ ಕೂಡ ನೀರಿನ ಮೂಲಗಳ ಕೊರತೆ ಹಾಗೂ ನದಿ ವಿವಾದಗಳಿಂದ ರಾಜ್ಯಕ್ಕಾದ ಅನ್ಯಾಯ ಈ ಹಂತದಲ್ಲಿ ಸರ್ಕಾರವನ್ನು ಬೆಂಬಿಡದೆ ಕಾಡುತ್ತಿದೆ. ಇದೇ ಸಂದರ್ಭವನ್ನು ವಿರೋಧ ಪಕ್ಷಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಆಡಳಿತ ಪಕ್ಷದಂತೆ ವಿರೋಧ ಪಕ್ಷದವರು ಕೂಡ ರಾಜಕೀಯ ಹಿತಾಸಕ್ತಿ ಬದಿಗೊತ್ತಿ, ಸರ್ಕಾರದ ಜೊತೆ ಕೈಜೋಡಿಸಿ ಜನರ ನಂಬಿಕೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ರಾಜ್ಯದ ಕಷ್ಟದಲ್ಲಿ ಸರ್ಕಾರದ ಜೊತೆ ನೆರವಿಗೆ ಬರುವುದು ರಾಜ್ಯದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಕೂಡ.
ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ವಾಸ್ತವ ಬರ ಪರಿಸ್ಥಿತಿಯ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ
• ನೀರು ಪೂರೈಕೆ ಯೋಜನೆಗಾಗಿ ವಿನಿಯೋಗಿಸುತ್ತಿರುವ ಹಣ
• ಕಾರ್ಯನಿರ್ವಹಿಸುತ್ತಿರುವ ನೀರಿನ ಟ್ಯಾಂಕರ್‍ಗಳ ಸಂಖ್ಯೆ
• ಮಳೆ ಕೊರತೆಯ ಪ್ರಮಾಣ
• ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ

ನೀರಿನ ಪೂರೈಕೆಗಾಗಿ ಕೈಗೊಂಡ ಕ್ರಮಗಳು
ಸದ್ಯದ ಮಾಹಿತಿಯಂತೆ ರಾಜ್ಯದಲ್ಲಿ 4.22 ಲಕ್ಷ ಜನರು ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ರಾಜ್ಯದ 20 ಜಿಲ್ಲೆಗಳಲ್ಲಿನ 576 ಜನವಸತಿ ಪ್ರದೇಶಗಳಿಗೆ 1,047 ಟ್ಯಾಂಕರ್‍ಗಳಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಪೈಕಿ ಹಾಸನದಲ್ಲಿ 140, ಮಂಡ್ಯ 90, ಚಿತ್ರದುರ್ಗ 67, ಕೋಲಾರ 45, ತುಮಕೂರು 37, ವಿಜಯಪುರ 26, ಚಿಕ್ಕಬಳ್ಳಾಪುರ 22, ಚಿಕ್ಕಮಗಳೂರು ಮತ್ತು ಮೈಸೂರು 22 ಮತ್ತು ಧಾರವಾಡದ 17 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆಮಾಡಲಾಗುತ್ತಿದೆ.

ಯೋಜನೆಗೆ ಅಗತ್ಯವಿರುವ ಹಣದ ಪ್ರಮಾಣ
ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಕುಡಿಯುವ ನೀರನ್ನು ಪೂರೈಸಲು ಹಾಗೂ ಚಾಲ್ತಿಯಲ್ಲಿರುವ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲು ಒಟ್ಟು ರೂ. 2,164 ಕೋಟಿ ಅಗತ್ಯವಿದೆ. 160 ಬರಪೀಡಿತ ತಾಲೂಕುಗಳ ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ರೂ. 80.64 ಕೋಟಿ ಹಾಗೂ ನಗರ-ಪಟ್ಟಣ ಪ್ರದೇಶಗಳಿಗೆ ರೂ. 34.56 ಕೋಟಿ ಅವಶ್ಯಕತೆ ಇದೆ.
ನೀರಿನ ಪೂರೈಕೆ ಯೋಜನೆಯನ್ನು ಪೂರ್ಣಗೊಳಿಸಿ ಗ್ರಾಮೀಣ ಭಾಗದ ನೀರಿನ ಸಮಸ್ಯೆಯನ್ನು ಬಗೆಹರಿಸಲು ರೂ. 1772.25 ಕೋಟಿ ಅಗತ್ಯವಿದೆ ಹಾಗೂ ನಗರ ಪ್ರದೇಶಕ್ಕೆ ರೂ. 276.75 ಕೋಟಿ ಅಗತ್ಯವಿದೆ. ಈ ಹಣಕ್ಕಾಗಿ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಲಾಗಿದ್ದು, ಕೇಂದ್ರದಿಂದ ಹಣ ಬಿಡುಗಡೆ ಶೀಘ್ರವಾಗಿ ಆದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಮಳೆ ಕೊರತೆಯ ಪ್ರಮಾಣ
ವಾಡಿಕೆಯಂತೆ ರಾಜ್ಯದಲ್ಲಿ ಆಗಬೇಕಿದ್ದ ಮುಂಗಾರು ಮಳೆಯ ಪ್ರಮಾಣದಲ್ಲಿ ಈ ಬಾರಿ ಶೇ. 18 ರಷ್ಟು ಕೊರತೆ ಉಂಟಾಗಿದೆ. ಸರಾಸರಿ ವಾರ್ಷಿಕ 839 ಮಿ.ಮೀ ಆಗಬೇಕಿದ್ದ ಮಳೆ ಈ ಬಾರಿ 688 ಮಿ.ಮೀ ಗಳಷ್ಟು ಆಗಿದೆ. ಇದೇ ರೀತಿ ಹಿಂಗಾರು ಮಳೆ ಕೂಡ ಕೈಕೊಟ್ಟಿದ್ದು, ವಾಡಿಕೆಯಂತೆ 188 ಮಿ.ಮೀ ಆಗಬೇಕಿದ್ದ ಮಳೆ 54 ಮಿ.ಮೀ ಆಗಿದ್ದು ಶೇ.71 ರಷ್ಟು ಕೊರತೆ ಉಂಟಾಗಿದೆ. ಬರ ಸ್ಥಿತಿ ಸತತ 6ನೇ ವರ್ಷಕ್ಕೆ ಕಾಲಿಟ್ಟಿರುವ ಕಾರಣಕ್ಕೆ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಜಾನುವಾರುಗಳಿಗೆ ಮೇವು ಹಾಗೂ ನೀರಿನ ನಿರ್ವಹಣೆ
ನೀರಿನ ಸಮಸ್ಯೆ ಕೇವಲ ಜನರಿಗಷ್ಟೆ ಅಲ್ಲದೆ ಪಶು, ಪಕ್ಷಿ ಹಾಗೂ ಜಾನುವಾರುಗಳಿಗೂ ತೀವ್ರವಾಗಿ ತಟ್ಟಿದೆ. ರಾಜ್ಯ ಸರ್ಕಾರ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡುವ ದೃಷ್ಟಿಯಿಂದ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದೆ, ಈ ಬಾರಿ ಬರದ ತೀವ್ರತೆ ಹೆಚ್ಚಿರುವುದರಿಂದ 3 ರೂ.ಗೆ ನೀಡಲಾಗುತ್ತಿದ್ದ ಒಂದು ಕೆ.ಜಿ ಮೇವನ್ನು 2 ರೂ.ಗೆ  ನೀಡಲಾಗುತ್ತಿದೆ. ಇದರಿಂದ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ.
ಈಗಾಲೇ ರಾಜ್ಯದಲ್ಲಿ 95 ಮೇವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಇದರಿಂದ 27 ಟನ್ ಮೇವನ್ನು ರೈತರು ಈಗಾಗಲೇ ಖರೀದಿಸಿದ್ದು, ದಿನದಿನಕ್ಕೂ ಮೇವಿನ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ 3000 ಟನ್‍ಗಳ ಮೇವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಜೊತೆಯಲ್ಲಿ 45 ಗೋ ಶಾಲೆಗಳನ್ನು ಕೂಡ ತೆರೆಯಲಾಗಿದೆ. ಲಕ್ಷಾಂತರ ಮಂದಿ ರೈತರು ಇದರಿಂದ ಉಪಯೋಗವನ್ನು ಪಡೆಯುತ್ತಿದ್ದಾರೆ.
ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರೂ ಸಂಪನ್ಮೂಲದ ಕೊರತೆ ಎದುರಿಸುತ್ತಿದೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಅನುದಾನಕ್ಕೆ ಮನವಿ ಮಾಡಿದರೂ ಈವರೆಗೆ ಸ್ಪಂದಿಸಿಲ್ಲ. ಈ ಸಮಯದಲ್ಲಿ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೇ ಇರುವುದು ದುರಂತ. ಕೇಂದ್ರ ಸರ್ಕಾರದಲ್ಲಿರುವ ರಾಜ್ಯದ ಸಚಿವರು ಹಾಗೂ ಸಂಸದರು ಒಕ್ಕೊರಲಿನಿಂದ ದನಿ ಎತ್ತಿ, ಪಕ್ಷಭೇದ ಮರೆತು ರಾಜ್ಯ ಸರ್ಕಾರದ ಜೊತೆ ಕೈಜೋಡಿಸುವ ಅಗತ್ಯವಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s