ಪರಿಕ್ಕರ್ ಆಡಳಿತ ಮತ್ತು ರಕ್ಷಣಾ ವೈಫಲ್ಯ

mohan-parekar
ಕಳೆದ ಕೆಲವಾರು ದಶಕಗಳ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಎಂದು ಕರೆಯಲ್ಪಡುವ ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರು ದಾಳಿ ಮಾಡಿದ ನಂತರದಲ್ಲಿ ರಕ್ಷಣಾ ವಿಫಲತೆಗಳನ್ನು ಜನರ ಮನಸ್ಸಿಂದ ದೂರಮಾಡಲು, 2016 ಸೆಪ್ಟಂಬರ್ 29 ರಂದು ಭಾರತೀಯ ಸೈನ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೆಲವು ಪ್ರದೇಶಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ದೇಶದ ಜನತೆಯ ಗಮನವನ್ನು ಅತ್ತ ಕಡೆ ಸೆಳೆಯುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಯಿತು.
ಸರ್ಜಿಕಲ್ ಸ್ಟ್ರೈಕ್‍ನ ಬಗ್ಗೆ ಹೊಗಳಿಕೆ ಬೇಡ ಇದು ಪಾಕಿಸ್ತಾನದ ದೋರಣೆಗೆ ಪ್ರತೀಕಾರವಷ್ಟೆ ಎಂದು ಹೇಳುತ್ತಲೇ ಬಿಜೆಪಿ ಎದೆ ತಟ್ಟಿಕೊಂಡು ಆದನ್ನೆ ಕೊಂಡಾಡಿತು. ಕೇಂದ್ರ ಸರ್ಕಾರದ ರಕ್ಷಣಾ ಸಚಿವರಾದ ಮನೋಹರ್ ಪರಿಕ್ಕರ್‍ರವರನ್ನು ಬಿಜೆಪಿ ಪಕ್ಷದ ನಾಯಕರು ಅತ್ಯಂತ ಸಮರ್ಥ ಮತ್ತು ಚಾಣಾಕ್ಷ ಮಂತ್ರಿ ಎಂದು ಹೊಗಳಿದರು. ಮೋದಿಯಂತೂ ಇವರನ್ನು ತಮ್ಮ ಸಂಪುಟದ ಅನಘ್ರ್ಯ ರತ್ನ ಎಂದು ಬಣ್ಣಿಸಿದರು. ಅವರ ಮಾತಿನಂತೆ ಈ ರೀತಿ ಹೊಗಳುವ ಅಗತ್ಯವಿತ್ತೇ ಎಂಬ ಪ್ರಶ್ನೆ ಸಾಕಷ್ಟು ಜನರನ್ನು ಕಾಡಿತು.
‘ಮೇಕ್ ಇನ್ ಇಂಡಿಯಾ’ ಎಂಬ ಹೆಸರಿನಲ್ಲಿ ಮೋದಿ ದೇಶದ ಜನತೆಗೆ ಕರೆ ನೀಡಿರುವ ಬೆನ್ನಲ್ಲೇ, ಹಲವಾರು ವರ್ಷಗಳಿಂದ ಅರ್ಜುನ್ ಎಂಬ ಹೆಸರಿನ ಯುದ್ಧ ಟ್ಯಾಂಕರನ್ನು ತಯಾರಿಸಿ, ಸೇನೆಗೆ ಒದಗಿಸುತ್ತಿದ್ದ ದೇಶದ ಸಂಸ್ಥೆಯನ್ನು ಕಡೆಗಾಣಿಸುವಂತಹಾ ಹೆಜ್ಜೆಯನ್ನು ಕೇಂದ್ರ ಸರ್ಕಾರ ಅನುಸರಿಸಿತು. ಆ ಮೂಲಕ ವಿದೇಶಿ ಕಂಪೆನಿಗೆ ಭಾರತದಲ್ಲಿ ಯುದ್ಧ ಟ್ಯಾಂಕರನ್ನು ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನು ನೀಡಿದರು. ಮೇಕ್ ಇನ್ ಇಂಡಿಯಾ ಯೋಜನೆಗೆ ಅರ್ಥ ಬರುವಂತೆ ಅರ್ಜುನ್ ಹೆಸರಿನ ಯುದ್ಧ ಟ್ಯಾಂಕರನ್ನು ಸಾಕಷ್ಟು ಪರಿಶ್ರಮದಿಂದ ನಿರ್ಮಾಣ ಮಾಡಿದ ಶ್ರಮ ಅಲ್ಲಿಗೆ ವ್ಯರ್ಥವಾಯಿತು.
ಸೈನ್ಯಕ್ಕೆ ಅಗತ್ಯವಿರುವ ಸುಧಾರಿತ ಶಸ್ತ್ರಾಸ್ತ್ರಗಳನ್ನು, ಗುಣಮಟ್ಟದ ಆಹಾರವನ್ನು ಪೂರೈಸುವ ವ್ಯವಸ್ಥೆಯನ್ನು ಕೂಡ ನಿರ್ವಹಿಸಲು ಇವರಿಂದ ಸಾಧ್ಯವಾಗಿಲ್ಲ. ಖಾಲಿ ಹೊಟ್ಟೆ ಯೋಧನೊಬ್ಬ ದೇಶ ಕಾಯಬೇಕಾಗಿರುವುದು ನಿಜಕ್ಕೂ ದುರಂತವೇ ಸರಿ. ಇಂತಹಾ ಕಾರಣಗಳೇ ದೇಶದ ಭದ್ರತಾ ಲೋಪಗಳಿಗೆ ಕಾರಣವಾಗುತ್ತವೆ.
ಮೊನ್ನೆ ಮೊನ್ನೆ ಬಿಎಸ್‍ಎಫ್ ಯೋಧನೊಬ್ಬ ತಮಗೆ ಸೈನ್ಯದಲ್ಲಿ ಕಳಪೆ ಆಹಾರವನ್ನು ಪೂರೈಸಲಾಗುತ್ತಿದೆ ಎಂದು ಆರೋಪಿಸಿ, ಅದನ್ನು ವಿಡಿಯೋ ಮೂಲಕ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ, ಕಾಶ್ಮೀರದ ಸೈನಿಕರ ಕ್ಯಾಂಪ್‍ಗಳ ಬಳಿ ಇಂಧನ ಮತ್ತು ಆಹಾರ ಸಾಮಾಗ್ರಿಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಅಲ್ಲಿನ ಜನರೇ ಆರೋಪಿಸಿದರೂ ಕೂಡ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದೆ ಆರೋಪ ಮಾಡಿದ ಸೈನಿಕನಿಗೆ ಕುಡಿತದ ಅಭ್ಯಾಸವಿತ್ತು ಮತ್ತು ಹಲವಾರು ಬಾರಿ ಆತ ಸೈನ್ಯದ ನಿಯಮ ಉಲ್ಲಂಘನೆ ಮಾಡಿದ್ದನೆಂಬ ಪಟ್ಟ ಕಟ್ಟಿ ತಮ್ಮ ದೋಷವನ್ನು ಆತನ ಮೇಲೆ ಹೊರಿಸಲಾಯಿತು.
ಜಮ್ಮು-ಕಾಶ್ಮೀರದ ಉರಿ ಸೇನಾ ನೆಲೆಯ ಮೇಲಿನ ದಾಳಿ ಇವರ ಆಡಳಿತದ ವಿಫಲತೆಗೆ ಸ್ಪಷ್ಟ ಉದಾಹರಣೆಯಾಗಿದೆ. ಸಾಕಷ್ಟು ಸಾವು-ನೋವುಗಳು ಸಂಭವಿಸಿದ ನಂತರ ಅದರ ವೈಫಲ್ಯವನ್ನು ರಕ್ಷಣಾ ಸಚಿವರು ಒಪ್ಪಿಕೊಂಡರು.
ಈ ಘಟನೆಯ ನಂತರ ಕೂಡ ಅಕ್ಟೋಬರ್ ತಿಂಗಳಿನಲ್ಲಿ ಬಾರಾಮುಲ್ಲಾ ಮತ್ತು ಹಂದ್ವಾರದ ಸೇನಾ ನೆಲೆಯ ಮೇಲೆ ಭಯೋತ್ಪಾದಕ ದಾಳಿಗಳು ನಡೆದಿವೆ. ಅದಕ್ಕೂ ಹಿಂದೆ ಪಠಾನ್‍ಕೋಟ್ ಮತ್ತು ಪಂಪೋರ್‍ನ ಮೇಲೆ ದಾಳಿಗಳು ನಡೆದಿತ್ತು. ಇಷ್ಟೆಲ್ಲಾ ನಡೆದರೂ ಇನ್ನೂ ಕೂಡ ಭಯೋತ್ಪಾದಕ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ವಿಫಲವಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತದ ಮೇಲೆ ಅತೀ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿವೆ ಎಂಬುದು ವರದಿಗಳಿಂದ ಕೂಡ ಸಾಬೀತಾಗಿದೆ.
ದೇಶ ರಕ್ಷಣೆ ಮಾಡುವ ಸೈನಿಕರ ಸ್ಥಿತಿಗತಿಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅದನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿದೆ. ಬರಿಯ ಹೇಳಿಕೆಗಳಿಂದ ಸುಧಾರಣೆ ಸಾಧ್ಯವಿಲ್ಲ ಎಂಬುದನ್ನು ಇನ್ನಾದರೂ ಅರಿತು ಅದನ್ನು ಕಾರ್ಯರೂಪಕ್ಕೆ ತರಬೇಕಾದ ಅಗತ್ಯವಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s