ಪತನದ ಹಾದಿಯಲ್ಲಿ ರಾಜ್ಯ ಬಿಜೆಪಿ

bjp-state-leadres_1
ಶಿಸ್ತು ಪಾಲನೆಗೆ ಹೆಸರುವಾಸಿಯಾಗಿದ್ದ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷ ಕಾಲ ಕ್ರಮೇಣ ತನ್ನ ಸಿದ್ದಾಂತಗಳನ್ನು ಬದಿಗಿಟ್ಟು, ಸಮಾಜದಲ್ಲಿ ತಲೆ ತಗ್ಗಿಸುವಂತಹಾ ಕಾರ್ಯಗಳಲ್ಲಿ ತೊಡಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿಯಾಗಿವೆ.
ಆರ್‍ಎಸ್‍ಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಂಬಿಸಲಾಗುತ್ತಿತ್ತು, ಸಮಾಜದಲ್ಲಿ ಶಾಂತಿ ಮತ್ತು ಸಂಯಮ ಕಾಪಾಡಿಕೊಂಡು, ಸಮಾಜಕ್ಕೆ ತನ್ನಿಂದ ಸಾದ್ಯವಾಗುವ ಸಹಾಯವನ್ನು ಮಾಡಬೇಕೆಂಬ ಆರ್‍ಎಸ್‍ಎಸ್‍ನ ಮೂಲಭೂತ ಉದ್ದೇಶ ಇಂದು ಕಣ್ಮರೆಯಾಗಿ, ಸ್ವಾರ್ಥಕ್ಕಾಗಿ ಎಂತಹಾ ಹೀನ ಕೃತ್ಯಕ್ಕೂ ಹೇಸುವುದಿಲ್ಲ ಎಂಬ ಮಟ್ಟಕ್ಕೆ ಇಳಿದಿರುವ ಬಿಜೆಪಿ ಪಕ್ಷದಿಂದ ನಿಜಕ್ಕೂ ಸಮಾಜದ ಒಳಿತು ನಿರೀಕ್ಷೆ ಮಾಡಲು ಸಾದ್ಯವೇ?
ಕಳೆದ ಹತ್ತಾರು ದಿನದಿಂದ ಬಿಜೆಪಿ ನಾಯಕರು ನಿತ್ಯ ಒಂದಿಲ್ಲೊಂದು ಹಲ್ಲೆ, ದುರ್ವತನೆ, ಅವ್ಯಾಚ್ಯ ಪದ ಬಳಕೆ ಈ ರೀತಿಯ ಗೂಂಡಾ ವರ್ತನೆಯಿಂದ ಸುದ್ದಿಯಾಗುತ್ತಿರುವುದು ಅವರ ತತ್ವ ಸಿದ್ದಾಂತಗಳ ವಾಸ್ತವತೆಯ ಅರಿವು ಜನರಲ್ಲಿ ಮೂಡುವಂತೆ ಮಾಡಿದೆ. ಮೋದಿ ತಮ್ಮ ಆಡಳಿತದಲ್ಲಿ ಸಮಾಜದ ಅಭಿವೃದ್ಧಿ ಸಾಧನೆಗೆ ಒತ್ತು ನೀಡಿರುವುದಾಗಿ ಹೇಳುವುದು ಒಂದು ಕಡೆಯಾದರೆ, ಇತ್ತ ಅವರದೇ ಪಕ್ಷದವರು ಸಮಾಜದ ಶಾಂತಿ ಹಾಳು ಮಾಡುತ್ತಿರುವುದು ಮೋದಿಯ ಬಗ್ಗೆಯೇ ಪ್ರಶ್ನೆಗಳು ಮೂಡುವಂತೆ ಮಾಡಿದೆ.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್‍ರವರು ಜಿಲ್ಲೆಗೇ ಬೆಂಕಿ ಹಚ್ಚುವುದಾಗಿ ಹೇಳಿದರು, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರೊಬ್ಬರು ಸಮಾಜದ ಮುಂದೆ ಯಾವ ರೀತಿಯ ಹೇಳಿಕೆಗಳನ್ನು ನೀಡಬೇಕು ಎಂಬ ಕನಿಷ್ಠ ಜ್ಞಾನವನ್ನು ಹೊಂದದೇ ಇರುವುದು ದುರಂತವೇ ಸರಿ. ಅವರು ಬೆಂಕಿ ಇಡುತ್ತೇನೆ ಎಂದದ್ದನ್ನೇ ಅವರ ಅಭಿಮಾನಿಗಳು ಕಾರ್ಯರೂಪಗೊಳಿಸಿದರೆ ಅದರ ಹೊಣೆ ಹೊರುವವರು ಯಾರು? ಇಂತಹಾ ಹೇಳಿಕೆಗಳಿಂದಲೇ ಗಲಭೆಗಳು ನಡೆದು ಹಲವಾರು ಸಾವು, ನೋವುಗಳು ಸಂಭವಿಸುವುದು.
ಇನ್ನು ಸಂಸದ ಅನಂತ್‍ಕುಮಾರ್ ಹೆಗಡೆ ವಿಚಾರವನ್ನು ನೋಡಿದರೆ, ಆತ ಸುಸಂಸ್ಕøತ ಜಿಲ್ಲೆ ಎಂದು ಹೆಸರುವಾಸಿಯಾದ ಸಿರಸಿಯಲ್ಲಿ ಬೆಳೆದು, ಆರ್‍ಎಸ್‍ಎಸ್ ಹಿನ್ನೆಲೆಯನ್ನು ಹೊಂದಿದ್ದು ಕೂಡ, ಕಾರ್ಯನಿರತ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಜನರ ಜೀವ ರಕ್ಷಣೆಯ ಗುರುತರ ಜವಬ್ದಾರಿ ಹೊತ್ತಿರುವ ವೈದ್ಯರನ್ನೇ ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕೆ ಹೊಡೆಯಬಹುದಾದರೆ, ಸಮಾಜದಲ್ಲಿ ವೃತ್ತಿ ಗೌರವ ಎಂಬುದು ಹೇಗೆ ಉಳಿಯುತ್ತದೆ? ತಮ್ಮ ಸುತ್ತಲಿನವರಿಗೆ ಮಾದರಿಯಾಗಬೇಕಾದ ನಾಯಕನೊಬ್ಬ ಸಾಮಾನ್ಯ ರೌಡಿಯಂತೆ ಬಡಿದಾಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವಿಸುತ್ತದೆ.
ಇದೇ ಭಾನುವಾರ ಬೆಳಗಾವಿ ಜಿಲ್ಲೆಯ ಕಾಗವಾಡದ ಎಂಎಲ್‍ಎ ರಾಜು ಕಾಗೆಯವರ ವಿರುದ್ಧ ಫೇಸ್‍ಬುಕ್‍ನಲ್ಲಿ ಚುನಾವಣಾ ವಿಷಯದಲ್ಲಿ ಕಮೆಂಟ್ ಮಾಡಿದ ಎಂಬ ಒಂದೇ ಕಾರಣಕ್ಕೆ ಆತನಿಗೆ ಶಾಸಕರ ಹೆಂಡತಿ, ಮಗಳು ಮತ್ತು ಅವರ ಕಡೆಯ ರೌಡಿಗಳು ಸೇರಿ ಕಾಲು ಮುರಿಯುವ ರೀತಿ ಹಲ್ಲೆಯನ್ನು ಮಾಡಿದ್ದಾರೆ. ಹಲ್ಲೆಗೊಳಗಾದವನು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಬ್ಬ ಶಾಸಕ ತಮ್ಮ ವಿರುದ್ಧ ಮಾತನಾಡಿದವರ ಧಮನಕ್ಕೆ ಗೂಂಡಾಗಿರಿಯ ಕಾರ್ಯಕ್ಕೆ ಇಳಿದರೆ, ಸಮಾಜದ ನೈತಿಕತೆಯ ಮಟ್ಟ ಎಲ್ಲಿಗೆ ಹೋಗಬಹುದು? ಎಂದು ಅಂದಾಜಿಸಲೂ ಕೂಡ ಸಾಧ್ಯವಿಲ್ಲ. ಚುನಾವಣೆಯಲ್ಲಿ ಲಕ್ಷಾಂತರ ಜನರ ಮತ ಗಳಿಸಿ ತಮ್ಮ ಪಕ್ಷ, ಕ್ಷೇತ್ರ ಮತ್ತು ರಾಜ್ಯದ ಜನತೆಗೆ ಮಾದರಿಯಾಗಬೇಕಾದ ನಾಯಕರು, ಪೊಲೀಸ್ ಠಾಣೆ ಮೆಟ್ಟಿಲೇರಿ ಕಟಕಟೆಯಲ್ಲಿ ಅಪರಾಧಿಯಂತೆ ನಿಂತರೆ ಅವರಿಗೆ ಮತ ನೀಡಿದವರಿಗೆ ಹೋಗುವ ಸಂದೇಶವಾದರೂ ಏನು?
ಒಟ್ಟಿನಲ್ಲಿ ಮೋದಿ ಜನರಿಗೆ ಭರವಸೆಗಳ ಮಹಾಪೂರವನ್ನೇ ನೀಡುತ್ತಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಪಕ್ಷದ ನಾಯಕರು ಕಾರ್ಯಪ್ರವೃತ್ತವಾಗುವ ಬದಲು, ತಮ್ಮನ್ನು ನಂಬಿದ ಜನತೆಯ ಪ್ರಾಣ ತೆಗೆಯುವ ಹೀನ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ದುರಂತ ವಿಚಾರ. ಇನ್ನಾದರೂ ಈ ನಾಯಕರು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂಬುದೇ ರಾಜ್ಯದ ನಾಗರೀಕರಾಗಿ ನಮ್ಮ ಕೋರಿಕೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s