ಹತಾಷೆಯ ನಡುವೆ ಬುದ್ಧಿವಂತ ನಡೆ

modi-gamble-blog
ಇದಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು
• ಸಾಮಾನ್ಯ ಜನರಿಗೆ ಇದರಿಂದಾಗುವ ಲಾಭಕ್ಕಿಂತ ನಷ್ಟವೇ ಹೆಚ್ಚು
• ವಿದೇಶದಿಂದ ಕಪ್ಪು ಹಣ ತರಲಾರದಿದ್ದರೂ ಕಡೇ ಪಕ್ಷ ಜನರ ನಂಬಿಕೆ ಉಳಿಸಿಕೊಳ್ಳಬಹುದಾದ ಬುದ್ಧಿವಂತ ನಡೆ.
• ಸಣ್ಣಪುಟ್ಟ ವ್ಯಾಪಾರಿಗಳಿಗೆ ಮತ್ತು ಉದ್ದಿಮೆದಾರರಿಗೆ ಇದೊಂದು ನುಂಗಲಾರದ ತುತ್ತು.

ನೋಟುಗಳ ರದ್ದತಿ ಮತ್ತು ವಾಸ್ತವ ಸ್ಥಿತಿಗತಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆಯ ರದ್ದತಿ ನಿಯಮದಿಂದಾಗಿ ದೇಶದ ಒಳಗಿರುವ ಅಲ್ಪಸ್ವಲ್ಪ ಕಪ್ಪು ಹಣ ಹೊರಬರಬಹುದೇ ಹೊರತು ಚುನಾವಣೆಯ ಸಮಯದಲ್ಲಿ ಆಶ್ವಾಸನೆ ನೀಡಿದಂತೆ ವಿದೇಶದಲ್ಲಿ ಇರುವ ಕಪ್ಪು ಹಣದ ಮೇಲೆ ಈ ನಿಯಮ ಯಾವ ಪರಿಣಾಮವನ್ನೂ ಬೀರಲಾರದು. ಭಾರತೀಯರ ಕಪ್ಪು ಹಣ ಅತಿ ಹೆಚ್ಚು ಇರುವುದು ಸ್ವಿಸ್ ಬ್ಯಾಂಕಿನಲ್ಲಿಯೇ ಹೊರತು ಅವರವರ ಮನೆಗಳಲ್ಲಿ ಅಲ್ಲ, ಪರಿಸ್ಥಿತಿ ಹೀಗಿರುವಾಗ ಕೇಂದ್ರದ ಹೊಸ ನಿಯಮದಿಂದ ಹೆಚ್ಚು ಸಮಸ್ಯೆ ಉಂಟಾಗುವುದು ಜನಸಾಮಾನ್ಯರಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ.

ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣವನ್ನು ಬಿಳಿ ಹಣವಾಗಿ ಮಾರ್ಪಡಿದಲು ಸಾಕಷ್ಟು ಅವಕಾಶಗಳಿವೆ, ಉದಾ: ಸ್ವಿಸ್ ಬ್ಯಾಂಕ್‍ನ ಕಪ್ಪು ಹಣವನ್ನು ಮಾರಿಷೀಯಸ್‍ನ ಮೂಲಕ ಬಿಳಿ ಹಣವಾಗಿ ಬದಲಾಯಿಸಿ ಭಾರತದಲ್ಲಿ ಚಲಾವಣೆಗೆ ತರಲು ಹೆಚ್ಚಿನ ಅವಕಾಶಗಳಿವೆ. ಇದೂ ಅಲ್ಲದೆ ಭಾರತದಲ್ಲಿರುವ ಹೆಚ್ಚಿನ ಕಪ್ಪು ಹಣ ಆಸ್ತಿ ಮತ್ತು ಬಂಗಾರದ ರೂಪದಲ್ಲಿ ಇರುವುದರಿಂದ ಈ ಹೊಸ ನಿಯಮದಿಂದ ಅವುಗಳ ಮೇಲೆ ಯಾವ ಪರಿಣಾಮವೂ ಬೀರಲಾರದು. ಈ ನಿಯಮ ಕೇವಲ ದೇಶದಲ್ಲಿ ಚಲಾವಣೆಯಲ್ಲಿರುವ ಖೋಟಾ ನೋಟುಗಳನ್ನು ಒಂದು ಮಟ್ಟಕ್ಕೆ ತಡೆಯಲು ಯಶಸ್ವಿಯಾಗಬಹುದು ಅಷ್ಟೆ.

ಈ ನಿಯಮದಿಂದ ಆಗುವ ತೊಂದರೆಗಳು
ಜನಸಾಮಾನ್ಯರ ನಿತ್ಯದ ವ್ಯವಹಾರಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಸಾಮಾನ್ಯ ಜನ ಈಗಾಗಲೇ ತಮ್ಮ ಬಳಿ ಇರುವ 500 ಮತ್ತು 1000 ರೂ ನೋಟುಗಳನ್ನು ಬದಲಾಯಿಸಿಕೊಳ್ಳುವ ಉದ್ದೇಶದಿಂದ ನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಅಂಚೆ ಕಛೇರಿ ಹಾಗೂ ಬ್ಯಾಂಕುಗಳ ಮುಂದೆ ನಿಲ್ಲುವಂತಾಗುತ್ತದೆ ಹಾಗೂ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಈ ನೋಟುಗಳನ್ನು ಪಡೆಯಬೇಕೋ ಬೇಡವೋ ಎಂಬ ಗೊಂದಲದಲ್ಲಿ ಮುಳುಗುವಂತಾಗುತ್ತದೆ.

ಕೇಂದ್ರದ ಹೊಸ ನಿಯಮದಿಂದ ಜನರಿಗೆ ದೈನಂದಿನ ಜೀವನಕ್ಕೂ ಸಹಾ ಸಮಸ್ಯೆಯುಂಟಾಗಿದೆ, ಇದ್ದಕ್ಕಿದ್ದಂತೆ ನಿಯಮವನ್ನು ಹೇರಿರುವುದರಿಂದ ಯಾರ ಬಳಿಯೂ ನಿತ್ಯ ಬದುಕಿಗೆ ಬೇಕಾಗುವ ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಬೇಕಾಗುವಷ್ಟು ಚಿಲ್ಲರೆ ಹಣ ಇಲ್ಲದಂತಾಗಿದೆ. ಬಸ್ಸು, ಪೆಟ್ರೋಲ್ ಬಂಕ್, ಆಸ್ಪತ್ರೆ , ದಿನಸಿ ಅಂಗಡಿಗಳಲ್ಲಿ ಜನ ಜಗಳವಾಡುವಂತಾಗಿದೆ. ಬ್ಯಾಂಕುಗಳ ಬಳಿ ನೋಟು ಬದಲಾಯಿಸಲು ಉದ್ದನೆಯ ಸಾಲು ನಿಲ್ಲುವುದರಿಂದ ಉಳಿದ ವ್ಯವಹಾರಗಳಿಗೂ ತೊದರೆಯಾಗುವ ಸಾಧ್ಯತೆಗಳೇ ಹೆಚ್ಚು.

ಈ ನಿಯಮ ಜಾರಿಗೆ ತರುವುದರ ಹಿಂದಿನ ಮುಖ್ಯ ಉದ್ದೇಶ
ಚುನಾವಣಾ ಸಮಯದಲ್ಲಿ ಮೋದಿ ನೀಡಿದ ಭರವಸೆಯಂತೆ ವಿದೇಶದಲ್ಲಿರುವ ಕಪ್ಪುಹಣವನ್ನು ಸಂಪೂರ್ಣ ಭಾರತಕ್ಕೆ ತಂದು ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ ತಲಾ 15 ಲಕ್ಷದಂತೆ ಸಂದಾಯ ಮಾಡಲು ವಿಫಲವಾಗಿರುವ ಕಾರಣದಿಂದ ಜನರು ಅವರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ, ಕೇವಲ ಇದೊಂದು ಜನರ ಕಣ್ಣೊರೆಸುವ ತಂತ್ರವಾಗಿದೆಯೇ ಹೊರತು ಇದರಿಂದ ಬೇರೆ ಯಾವ ವಿಶೇಷ ಬದಲಾವಣೆಗಳು ತರಲು ಸಾಧ್ಯವಿಲ್ಲ ಅಲ್ಲದೇ ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟಕೊಂಡು ಮೋದಿ ಕೈಗೊಂಡಿರುವ ಅತ್ಯಂತ ಬುದ್ದಿವಂತ ನಡೆಯಾಗಿದೆ. ಈ ಮೂಲಕ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗದಂತಹಾ ಹತಾಷ ಭಾವನೆಯಲ್ಲಿರುವಾಗ ಅದರಿಂದ ಹೊರಬರಲು ಈ ನಿಯಮ ಸ್ವಲ್ಪ ಸಹಕಾರಿಯಾಗಬಹುದು.

     ಒಟ್ಟಿನಲ್ಲಿ 500 ಮತ್ತು 1000 ರೂ ಮುಖಬೆಲೆಯ ನೋಟುಗಳ ರದ್ದತಿಯಿಂದ ಜನ ಸಾಮಾನ್ಯರಿಗೆ ಆಗುವ ಪ್ರಯೋಜನಗಳಿಗಿಂತ ತೊಂದರೆಯೇ ಹೆಚ್ಚಾಗಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s