ಟಿಪ್ಪು ಸುಲ್ತಾನ್ ಮತ್ತು ವಾಸ್ತವಾಂಶ

tipu-sulthan-blog-post

ಮುಖ್ಯಾಂಶಗಳು
• ಇತರ ಧರ್ಮಗಳ ಬಗ್ಗೆ ಟಿಪ್ಪುವಿನ ನಿಲುವು
• ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಕಾರಣಗಳು
• ಟಿಪ್ಪುವಿನ ಕೊಡುಗೆಗಳು

ವಿಶ್ವದ ಇತಿಹಾಸವನ್ನು ಗಮನಿಸುತ್ತಾ ಬಂದರೆ ರಾಜ್ಯವನ್ನು ವಿಸ್ತರಿಸಬೇಕೆಂಬ ಆಸೆಯನ್ನು ಹೊಂದಿದ್ದ ಪ್ರತಿ ರಾಜ ಕೂಡ ಯುದ್ಧವನ್ನು ಮಾಡಿ, ತನ್ನ ಎದುರಾಳಿಯನ್ನು ಸೋಲಿಸಿ ಸಾಮ್ರಾಜ್ಯ ವಿಸ್ತರಿಸಿದ ಉದಾಹರಣೆಗಳು ಸಾಕಷ್ಟಿವೆ. ಯುದ್ಧವನ್ನು ಕೇವಲ ನ್ಯಾಯಯುತ ಹಾದಿಯಿಂದಲೇ ಗೆಲ್ಲಬೇಕೆಂಬ ಯಾವ ನಿಯಮವೂ ಇಲ್ಲ. ಕೆಲವೊಮ್ಮೆ ಒಳ ಒಪ್ಪಂದಗಳು, ಗುಪ್ತಚರ ನೀತಿ, ಹಣದ ಆಮಿಷವೊಡ್ಡಿ ಯುದ್ಧವನ್ನು ಗೆದ್ದ ಬಗ್ಗೆ ಉಲ್ಲೇಖಗಳಿವೆ, ಇಲ್ಲಿನ ಮುಖ್ಯ ಉದ್ದೇಶ ಎದುರಾಳಿಯ ಸಾಮ್ರಾಜ್ಯವನ್ನು ಗೆಲ್ಲಬೇಕೆಂಬುದೇ ಆಗಿರುತ್ತದೆ. ಹೀಗೆ ಟಿಪ್ಪು ಕೂಡ ತನ್ನ ಬದುಕಿನಲ್ಲಿ ಹಲವಾರು ಯುದ್ಧಗಳನ್ನು ಮಾಡಿದ್ದಾನೆ ಅವುಗಳಲ್ಲಿ ಕೊಡಗಿನ ಮೇಲೆ ಮಾಡಲ್ಪಟ್ಟ ದಾಳಿ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ ಕಾರಣ ಟಿಪ್ಪು ಅಲ್ಲಿನ ಜನರ ಮೇಲೆ ಇಸ್ಲಾಂ ಧರ್ಮವನ್ನು ಹೇರುವ ಪ್ರಯತ್ನವನ್ನು ಮಾಡಿದನೆಂದು.

ಟಿಪ್ಪು ಕೊಡವರ ಮೇಲೆ ಯುದ್ದವನ್ನು ಮಾಡಿ ಅವರನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸುವ ಪ್ರಯತ್ನವನ್ನು ಮಾಟುತ್ತಾನೆ ಆದರೆ ಕೊಡವರು ಈತನ ಸಾಮ್ರಾಜ್ಯದ ಅಧೀನಕ್ಕೆ ಒಳಪಡಲು ಒಪ್ಪದಿದ್ದಾಗ ಅನಿವಾರ್ಯವಾಗಿ ಅವರ ಮೇಲೆ ಧರ್ಮವನ್ನು ಹೇರಬೇಕಾಗುತ್ತದೆ ಅಷ್ಟೆ, ಇದನ್ನು ಸಾಮ್ರಾಜ್ಯ ವಿಸ್ತರಿಸುವ ದೃಷ್ಠಿಕೋನದಿಂದ ನೋಡಬೇಕಾಗಿದೆ. ಈ ಘಟನೆಯೊಂದನ್ನು ಹೊರತುಪಡಿಸಿ ಆತ ಮತ್ತೇಲೂ ಕೂಡ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತಹಾ ಕಾರ್ಯಗಳನ್ನು ಮಾಡಿಲ್ಲ. ತನ್ನ ಆಡಳಿತಕೊಳಪಟ್ಟ ಪ್ರದೇಶಗಳಲ್ಲಿ ಕೂಡ ಆತ ಇಸ್ಲಾಂ ಧರ್ಮವನ್ನು ಬಲವಂತವಾಗಿ ಹೇರಿಕೆ ಮಾಡಲು ಹೊರಟ ಯಾವ ಉದಾಹರಣೆಗಳು ದೊರೆಯಲಾರವು ಬದಲಾಗಿ ಆತ ಹಿಂದೂ ದೇವಾಲಯಗಳಿಗೆ ನೀಡಿರುವ ಅನೇಕ ಸಹಾಯ ಸಹಕಾರವನ್ನು ನಾವು ಕಾಣಬಹುದು ಜೊತೆಗೆ ಇಲ್ಲಿನ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಕ್ಷೇತ್ರಗಳಿಗೆ ಟಿಪ್ಪು ಅಪಾರ ಕೊಡುಗೆಯನ್ನು ನೀಡಿದ್ದಾನೆ.

ಒಮ್ಮೆ ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿ ಮಠದ ಆಸ್ತಿಪಾಸ್ತಿಗಳನ್ನು ಕೊಳ್ಳೆಹೊಡೆದು, ಸಾವಿರಾರು ಜನರನ್ನು ಹತ್ಯೆಗೈದಾಗ ಮಠದ ಕಡೆಯಿಂದ ಟಿಪ್ಪುವಿಗೆ ಸಹಾಯ ಕೋರಿ ಒಂದು ಪತ್ರ ಬರುತ್ತದೆ, ತಕ್ಷಣ ಟಿಪ್ಪು ತನ್ನ ಸೈನ್ಯವನ್ನು ಮಠದ ರಕ್ಷಣೆಗಾಗಿ ಕಳುಹಿಸುತ್ತಾನೆ ಅಲ್ಲದೆ ಮಠಕ್ಕೆ ಅಪಾರ ಪ್ರಮಾಣದ ಆರ್ಥಿಕ ಸಹಾಯವನ್ನು ಮಾಡುತ್ತಾನೆ. ಇದೆ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದ ಭೋಗ ನಂದೀಶ್ವರ ದೇವಾಲಯಕ್ಕೂ ಹೆಚ್ಚಿನ ಸಹಾಯವನ್ನು ಮಾಡಿದ್ದಾನೆ.

ಇವೆಲ್ಲವುಗಳನ್ನೂ ಹೊರತುಪಡಿಸಿ ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ತನ್ನ ಪ್ರಾಣವನ್ನು ಅರ್ಪಿಸಿದ ನಿಜವಾದ ವೀರಯೋಧ, ಯುದ್ಧನಷ್ಟವನ್ನು ಭರಿಸಲಾಗದೆ ತನ್ನ ರಾಜ್ಯವನ್ನು ಅವರಿಂದ ರಕ್ಷಿಸುವ ಉದ್ದೇಶದಿಂದ ತನ್ನ ಸ್ವಂತ ಮಕ್ಕಳನ್ನೇ ಬ್ರಿಟೀಷರ ಬಳಿ ಅಡವಿಟ್ಟ ನಿಸ್ವಾರ್ಥಿ, ಬ್ರಿಟೀಷರ ವಿರುದ್ಧದ ಯುದ್ಧದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕ್ಷಿಪಣಿಯನ್ನು ಬಳಕೆ ಮಾಡಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಇದೆಲ್ಲದರ ನಡುವೆ ಯಾವುದೋ ಒಂದು ಚಿಕ್ಕ ತಪ್ಪು ತಿಳುವಳಿಕೆಯಿಂದ ಟಿಪ್ಪುವನ್ನು ದೇಶದ್ರೋಹಿ, ಮತಾಂಧ ಮತ್ತು ನರಹಂತಕನೆಂಬ ಪಟ್ಟವನ್ನು ಕಟ್ಟುವುದು ಒಬ್ಬ ಮಹಾನ್ ಹೋರಾಟಗಾರಿನಿಗೆ ಮಾಡಿದ ಅವಮಾನದಂತಾಗುತ್ತದೆ. ಒಂದು ಕಾಲದಲ್ಲಿ ಬ್ರಿಟೀಷರು ತಮ್ಮ ಸಾಮ್ರಾಜ್ಯವನ್ನು ಭಾರತದಾದ್ಯಂತ ವಿಸ್ತರಿಸುವಾಗ ಏಕಾಂಗಿಯಾಗಿ ಅವರ ವಿರುದ್ಧ ಹೋರಾಟವನ್ನು ಮಾಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನನಿಗೆ ಟಿಪ್ಪುವೇ ಸಾಟಿ..

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s