ಗದ್ದಲದ ನಡುವೆ ಉಕ್ಕಿನ ಸೇತುವೆ

LK-Blog-post.pngಕಳೆದ ಕೆಲದಿನಗಳಿಂದ ಸುದ್ದಿಯಲ್ಲಿರುವ ವಿಷಯವೆಂದರೆ ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆಯವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ. ಉಕ್ಕಿನ ಸೇತುವೆ ನಿರ್ಮಾಣದಿಂದಾಗಿ ಮರಗಳ ಮಾರಣಹೋಮ ನಡೆಯಲಿದೆ ಎನ್ನುವ ಕೂಗಿನೊಂದಿಗೆ ಆರಂಭವಾದ ವಿರೋಧಗಳು, ದಿನದಿಂದ ದಿನಕ್ಕೆ ಹೊಸಹೊಸ ಧ್ವನಿಗಳನ್ನು ಒಳಗೊಳ್ಳಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಉಕ್ಕಿನ ಸೇತುವೆಯ ಸಾಧಕ-ಬಾಧಕಗಳ ಕುರಿತು ವಿಸ್ತøತವಾದ ಚರ್ಚೆ ನಡೆಯಬೇಕಿದೆ.
   ಉಕ್ಕಿನ ಸೇತುವೆಯನ್ನು ನಿರ್ಮಾಣ ಮಾಡಬೇಕೆಂದುಕೊಂಡಿರುವ ಮಾರ್ಗದಲ್ಲಿ ಸಾಕಷ್ಟು ಮರಗಳಿವೆ. ಈ ಯೋಜನೆಯಿಂದ ಆ ಎಲ್ಲ ಮರಗಳನ್ನು ಉರುಳಿಸಬೇಕಾಗುತ್ತದೆ ಹಾಗೂ ಪರಿಸರ ನಾಶವಾಗುತ್ತದೆ ಎನ್ನುವುದು ಪ್ರಮುಖ ಆರೋಪ. ವಾಹನ ಸಂಚಾರ ದಟ್ಟವಾಗಿರುವ ಸಾಕಷ್ಟು ಬೇರೆ ಮಾರ್ಗಗಳಿದ್ದರೂ, ಇದೇ ಮಾರ್ಗದಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಏಕೆ ಎನ್ನುವ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಸಿಗ್ನಲ್‍ಮುಕ್ತ ವ್ಯವಸ್ಥೆಗಾಗಿ ಸಾಕಷ್ಟು ಅಂಡರ್‍ಪಾಸ್, ಮೇಲ್ಸೇತುವೆ ನಿರ್ಮಿಸಲಾಗಿದ್ದರೂ ಸಂಚಾರದಟ್ಟಣೆ ಕಡಿಮೆಯಾಗಿಲ್ಲ, ಆದ್ದರಿಂದ ಉಕ್ಕಿನ ಸೇತುವೆಯೂ ಹತ್ತನೆಯದರಲ್ಲಿ ಹನ್ನೊಂದನೆಯದು ಆಗಲಿದೆ ಎನ್ನುವ ಕುಹಕವೂ ಕೇಳಿಬರುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದೀಗ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ “ಆರಂಭದಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ರೂ.1,399 ಕೋಟಿ ಅಂದಾಜು ವೆಚ್ಚ ನಿಗದಿ ಮಾಡಲಾಗಿತ್ತು. ಇದೀಗ ಕಾಮಗಾರಿಯ ಮೊತ್ತ ರೂ.1,899 ಕೋಟಿ ಆಗಿದ್ದು ಏಕೆ?” ಎನ್ನುವ ಪ್ರಶ್ನೆಯನ್ನೆತ್ತಿದ್ದಾರೆ. ಇದೆಲ್ಲವೂ ಸಹ ಉಕ್ಕಿನ ಸೇತುವೆಯ ಕುರಿತಾದ ಋಣಾತ್ಮಕ ಅಂಶಗಳಾದರೆ, ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಉಕ್ಕಿನ ಸೇತುವೆಯನ್ನು ಸಮರ್ಥಿಸಿಕೊಳ್ಳಲೂ ಅನೇಕ ಕಾರಣಗಳು ಕಂಡುಬರುತ್ತವೆ.
   ಬೆಂಗಳೂರಿನ ಮೇಲಿರುವ ಅತ್ಯಂತ ದೊಡ್ಡ ಆಪಾದನೆಯೆಂದರೆ ಸಂಚಾರದಟ್ಟಣೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ತೆರಳಬೇಕಿರುವವರಂತೂ ಸಂಚಾರದಟ್ಟಣೆಯ ಕಿರಿಕಿರಿಗೆ ಹಿಡಿಶಾಪ ಹಾಕುತ್ತಾರೆ. ಸಿಗ್ನಲ್‍ಗಳಲ್ಲಿ ಸಮಯ ವ್ಯರ್ಥವಾಗುವ ಬದಲು ಸಮಯ ಉಳಿತಾಯ ಮಾಡಲು ಉಕ್ಕಿನ ಸೇತುವೆ ಪರ್ಯಾಯವಾಗಿ ಗೋಚರಿಸುತ್ತದೆ. ಉದ್ದೇಶಿತ ಉಕ್ಕಿನ ಸೇತುವೆ ಷಟ್ಪತದ್ದಾಗಿದ್ದು, ರ್ಯಾಂಪ್‍ಗಳನ್ನು ನಿರ್ಮಿಸಬೇಕಿದೆ. 5.5 ಮೀ. ಎತ್ತರದಲ್ಲಿ ನಿರ್ಮಿಸಬೇಕಿರುವ ಕಾರಣ ಯೋಜನಾ ವೆಚ್ಚವೂ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಚಾರ ದಟ್ಟಣೆಯಿಂದಲೇ ನಗರದಲ್ಲಿ ಪ್ರತಿ ವರ್ಷ ರೂ.1300 ಕೋಟಿ ಆರ್ಥಿಕ ನಷ್ಟವಾಗುತ್ತಿದೆ. (ಕೈಗಾರಿಕೋದ್ಯಮಿಗಳ, ಉದ್ಯಮಿಗಳ ನುಡಿಯೂ ಇದೇ) ಹೀಗಾಗಿ ಭವಿಷ್ಯದಲ್ಲುಂಟಾಗುವ ದಟ್ಟಣೆಯ ನಿಯಂತ್ರಿಸುವಲ್ಲಿ ಉಕ್ಕಿನ ಸೇತುವೆ ಸಹಾಯಕವಾಗಿರಲಿದೆ. ಅಂದಾಜು ವೆಚ್ಚ ರೂ.1,350 ಕೋಟಿ ಇದ್ದಾಗ ಶೇ.5ರಷ್ಟು ಕಚ್ಚಾ ಉಕ್ಕಿನ ತೆರಿಗೆ ಲೆಕ್ಕ ಹಾಕಲಾಗಿತ್ತು. ಆದರೆ ಇದೀಗ ಫ್ಯಾಬ್ರಿಕೇಟೆಡ್ ಸ್ಟೀಲ್‍ಗೆ ಶೆ.14.5ರಷ್ಟು ತೆರಿಗೆ ಪಾವತಿಸಬೇಕಿದೆ. ಆದ್ದರಿಂದ ಸಹಜವಾಗಿಯೇ ಯೋಜನಾ ವೆಚ್ಚದಲ್ಲಿ ಏರಿಕೆಯಾಗಿದೆ ಎಂಬುದು ಅಧಿಕಾರಿಗಳ ಅಂಬೋಣ.
   ಸಾಧಕ-ಬಾಧಕಗಳ ಕುರಿತು ಸಾರ್ವಜನಿಕವಾಗಿ-ಮುಕ್ತವಾಗಿ ಚರ್ಚೆಗಳು ಏರ್ಪಡಬೇಕಿದೆ. ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲರ ಚಿತ್ತವೇರ್ಪಡಬೇಕಿದೆ.

LK-Blog-post.png

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s