ಬೇಳೆ ಬೇಯಿಸಿಕೊಳ್ಳುವವರು ಬೆಂಕಿ ಹೆಚ್ಚಿಸಿದರು

yeddi-silent
ಕನ್ನಡಿಗರು ಕೇಳಿಕೊಂಡಿದ್ದೂ ಇದನ್ನೇ, “ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ” ಎಂದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು 8 ಬಾರಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದೂ ಇದನ್ನೇ, “ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ” ಎಂದು. ಆದರೆ ಅದ್ಯಾವುದೂ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಕೇಂದ್ರಕ್ಕೆ ಇದೀಗ ಸುಪ್ರೀಂಕೋರ್ಟ್ ‘ಮಧ್ಯಪ್ರವೇಶಿಸುವಂತೆ’ ಸೂಚಿಸಿದೆ. ಸುಪ್ರೀಂ ಆದೇಶಕ್ಕೆ ಅನಿವಾರ್ಯವಾಗಿಯಾದರೂ ಕೇಂದ್ರ ತಲೆದೂಗಬೇಕಿದೆ.
   ಕಾವೇರಿ ವಿಷಯಕ್ಕೆ ಸಂಬಂಧಿಸಿದ ಘಟನೆಗಳನ್ನು ಅವಲೋಕಿಸಿದರೆ, ಕೇಂದ್ರ ಸರ್ಕಾರದ ಈ ಮೊದಲೇ ಕಾವೇರಿ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದ್ದರೆ ಕೆಲವು ದುರ್ಘಟನೆಗಳನ್ನು ತಡೆಯಬಹುದಿತ್ತು. ನೀರಿಗೆ ಸಂಬಂಧಿಸಿದಂತೆ ಹಲವಾರು ಅತಿರೇಕಗಳನ್ನು ಕಂಡುಂಡಿರುವ ಕರ್ನಾಟಕ, ಪ್ರಾರಂಭದಲ್ಲೇ ಮುಂದಾಗುವ ಗಲಭೆಗಳನ್ನು ಊಹಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರನ್ನು ಪರಿಪರಿಯಾಗಿ ಕೇಳಿಕೊಳ್ಳಲಾಯಿತು. ಆದರೆ ಕನ್ನಡಿಗರ ಹಿತರಕ್ಷಣೆಗೆ ಪ್ರಧಾನಿ ಮುಂದಾಗಲಿಲ್ಲ, ಇತ್ತ ರಾಜ್ಯ ಬಿಜೆಪಿ ಘಟಕ ಸಹ ಮೋದಿಯ ಮೌನದ ಪ್ರತಿಬಿಂಬವಾಗಿತ್ತು. ತನ್ನ ಪಕ್ಷಕ್ಕೆ 17 ಸಂಸದ ಸ್ಥಾನವನ್ನು ದೊರಕಿಸಿಕೊಟ್ಟ ನೆಲ ಕರ್ನಾಟಕ ಎಂಬ ಕನಿಷ್ಠ ಕೃತಜ್ಞತಾಭಾವವೂ ಕೇಂದ್ರ ಬಿಜೆಪಿ ನಾಯಕರಲ್ಲಿ ಕಂಡುಬರಲಿಲ್ಲ. ಇತ್ತ ತಮ್ಮದೇ ಪಕ್ಷದ ಸರ್ಕಾರವಿದ್ದರೂ, ಮನವೊಲಿಕೆಗೆ ಈ 17 ಸಂಸದರು ಸೇರಿದಂತೆ ಯಾವೊಬ್ಬ ಬಿಜೆಪಿ ನಾಯಕನೂ ಮುಂದಾಗಲಿಲ್ಲ. ಅದರ ಪರಿಣಾಮವಾಗಿ ಕನ್ನಡಿಗರ ಆಕ್ರೋಶ ಹಿಂಸೆಗೆ ತಿರುಗಿತು. ಅಸಹನೆ ಜ್ವಾಲೆಯಾಗಿ ಹೊತ್ತುರಿಯಿತು.
   ರಾಜ್ಯದ ಹಿತಾಸಕ್ತಿಗಾಗಿ, ತಮ್ಮವರ ಹಿತರಕ್ಷಣೆಗಾಗಿ ಯಾರು ಯೋಚಿಸುವುದಿಲ್ಲವೋ ಅಂತವರ ಅವಶ್ಯಕತೆ ಕರ್ನಾಟಕಕ್ಕಿಲ್ಲ. ರಾಜ್ಯದ ಜನತೆಗೆ ಈಗಾಗಲೇ ನಮ್ಮ ಪರ ಪ್ರಾಮಾಣಿಕವಾಗಿ ಧ್ವನಿ ಎತ್ತುವವರು ಯಾರು, ಇಂತಹ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ನಾಟಕವಾಡುವವರು ಯಾರು ಎಂಬುದು ತಿಳಿದುಹೋಗಿದೆ. ಕೇಂದ್ರ ಸರ್ಕಾರ ಕಾಟಾಚಾರಕ್ಕಾಗಿ ಉಭಯ ರಾಜ್ಯಗಳ ಸಭೆ ನಡೆಸಲಿದೆಯೋ ಅಥವಾ ವಾಸ್ತವಾಂಶಗಳಿಗೆ ಒತ್ತು ಕೊಟ್ಟು ಮಾತನಾಡಲಿದೆಯೋ ಎನ್ನುವುದು ಸ್ವಲ್ಪದರಲ್ಲೇ ತಿಳಿಯಲಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s