ಎಂ.ಬಿ ಪಾಟೀಲ್ – ಭಾವುಕ ಜನನಾಯಕ

mb-patil-blog-pic
ಕಾವೇರಿ ನೀರಿಗಾಗಿ ಕರ್ನಾಟಕ ಸರ್ಕಾರ ದೃಢವಾದ ನಿರ್ಧಾರ ಕೈಗೊಂಡು ಕನ್ನಡಿಗರು ನಿಟ್ಟುಸಿರು ಬಿಡುವಂತಾಗಿದೆ. ‘ಕುಡಿಯಲು ಮಾತ್ರ ಕಾವೇರಿ’ ಎನ್ನುವ ತೀರ್ಮಾನದಿಂದಾಗಿ ಜಾಣ ನಡೆಯನ್ನಿಟ್ಟು, ಸುಪ್ರೀಂ ತೀರ್ಪನ್ನು ಉಲ್ಲಂಘನೆ ಮಾಡುತ್ತಿಲ್ಲ ಎನ್ನುವ ಸಂದೇಶ ನೀಡಲಾಗಿದೆ. ಸಂದಿಗ್ಧ ಸಮಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ನಿಂತು, ರಾಜ್ಯದ ಹಿತಾಸಕ್ತಿಗಾಗಿ ಚಿಂತಿಸಿದ್ದನ್ನು ಕರ್ನಾಟಕದ ಜನತೆ ಎಂದೂ ಮರೆಯಲಾರರು, ಅದೇ ರೀತಿ ಬಿಜೆಪಿಯ ಮೋಸವನ್ನೂ ಸಹ. ಈ ಒಂದು ಸಂದರ್ಭ ಪ್ರತಿಯೊಂದು ಪಕ್ಷದ, ಪ್ರತಿಯೊಬ್ಬ ನಾಯಕನ ನಿಜರೂಪವನ್ನು ತೋರಿಸಿಕೊಟ್ಟಿತು. ಇದೇ ಸಮಯದಲ್ಲಿ ಕನ್ನಡಿಗರ ಪ್ರೀತಿಗೆ ಪಾತ್ರರಾದ ನಾಯಕ ನೀರಾವರಿ ಸಚಿವ ಎಂ.ಬಿ ಪಾಟೀಲ್.
   ಸುಪ್ರೀಂಕೋರ್ಟ್ ಕಾವೇರಿ ವಿಷಯದಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಕೋರ್ಟ್‍ನಲ್ಲಿ ಕರ್ನಾಟಕದ ಪರವಾಗಿ ಫಾಲಿ ನಾರಿಮನ್ ವಾದ ಮಾಡುತ್ತಿದ್ದರು. ಇತ್ತ ಪ್ರೇಕ್ಷಕರ ಸಮೂಹ ಮೌನವಾಗಿ ವಿಚಾರಣೆಯನನ್ನು ಆಲಿಸುತ್ತಿತ್ತು. ಅಲ್ಲಿ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರಿದ್ದರು, ಅವರೊಡನೆ ನೀರಾವರಿ ಸಚಿವ ಎಂ.ಬಿ ಪಾಟೀಲರೂ ಇದ್ದರು. ವಿಚಾರಣೆ ನಡೆಯುವಾಗ ನ್ಯಾಯಾಧೀಶರು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಎಂ.ಬಿ ಪಾಟೀಲ್ ಪಿಸುಧ್ವನಿಯಲ್ಲಿ ತಮಗೆ ತಾವೇ ಉತ್ತರಿಸಿಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದ ಪತ್ರಕರ್ತರ ಬಳಿ ಕಾಗದ ಹಾಗೂ ಲೇಖನಿಯನ್ನು ಇಸಿದುಕೊಂಡು ಆ ಉತ್ತರವನ್ನು ಬರೆದು ತಮ್ಮ ವಕೀಲರಿಗೆ ಕಳುಹಿಸಿಕೊಡುತ್ತಿದ್ದರು. ಆ ಚೀಟಿ ತಲುಪುವವರೆಗೂ ಚಡಪಡಿಸುತ್ತಿದ್ದರು. ವಕೀಲರೇನಾದರೂ ತಪ್ಪು ಹೇಳಿದಲ್ಲಿ ತಾವೇ ಸರಿಯುತ್ತರವನ್ನು ಮೇಲುಧ್ವನಿಯಲ್ಲಿ ಹೇಳುತ್ತಿದ್ದರು. ಒಂದುಹಂತದಲ್ಲಂತೂ ಉತ್ತರವನ್ನು ದೊಡ್ಡದಾಗಿ ಹೇಳಿಯೇಬಿಟ್ಟರು!
   ರಾಜ್ಯದ ಪರವಾಗಿ ಪ್ರಕರಣವೊಂದು ನಡೆಯುವಾಗ ಸಚಿವರು ಅಲ್ಲಿ ಇರಬೇಕೆಂದೇನೂ ಇಲ್ಲ. ಆದರೆ ಕಾವೇರಿ ವಿಷಯದೊಂದಿಗೆ ಭಾವನಾತ್ಮಕವಾಗಿ ಮಿಳಿತಗೊಂಡಿದ್ದ ಎಂ.ಬಿ ಪಾಟೀಲ್, ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ವೇಳೆ ಹಾಜರಿದ್ದರು. ಒಂದು ಘಂಟೆಗಳ ಕಾಲ ನಿಂತೇ ಇದ್ದು ವಿಚಾರಣೆ ಆಲಿಸಿದರು. ಆಮೇಲೆ ಅಲ್ಲಿದ್ದ ವಕೀಲರು ಅವರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿಕೊಟ್ಟರು. ಒಬ್ಬ ಜನಪ್ರತಿನಿಧಿ ರಾಜ್ಯದ ಸಮಸ್ಯೆಯನ್ನು ತನ್ನದು ಎಂದು ಭಾವಿಸುವುದಿದೆಯಲ್ಲ, ನಿಜಕ್ಕೂ ಈಗಿನ ದಿನಗಳಲ್ಲಿ ಅದು ಶ್ಲಾಘನೀಯವೇ ಸರಿ. ತನ್ನ ರಾಜ್ಯಕ್ಕಾಗಿ, ತನ್ನ ಜನರಿಗಾಗಿ ಇರುವ ತುಡಿತವೇ ಎಂ.ಪಾಟೀಲರ ಈ ನಡೆಗೆ ಕಾರಣ. ಈ ಬಗ್ಗೆ ತಮಿಳುನಾಡಿನ ‘ತಂತಿ’ ವಾಹಿನಿಯಲ್ಲಿ ಪತ್ರಕರ್ತರಾಗಿರುವ ಅರವಿಂದ್ ಗುಣಶೇಖರ್ ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡು, ಎಂ.ಬಿ ಪಾಟೀಲರನ್ನು ಮನದುಂಬಿ ಅಭಿನಂದಿಸಿದ್ದಾರೆ. “ಬಹಳ ಕಾಲದ ನಂತರ ಒಬ್ಬ ರಾಜಕಾರಣಿ ತನ್ನ ಸ್ಥಾನಕ್ಕೆ ನ್ಯಾಯ ಒದಗಿಸುತ್ತಿರುವುದನ್ನು ಕಂಡೆ” ಎಂದು ಬರೆದುಕೊಂಡಿದ್ದಾರೆ.
   ಇದಲ್ಲವೇ ನಾವು ಒಬ್ಬ ಜನಪ್ರತಿನಿಧಿಯಿಂದ ಬಯಸುವುದು? ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಸ್ಥಾನಕ್ಕೆ ಇದೇ ರೀತಿಯ ಬೆಲೆ ನೀಡಿದಲ್ಲಿ ಸುಂದರ ಸಮಾಜವೊಂದರ ಕನಸು ಕಾಣಬಹುದು ಎಂಬುದು ಅತಿಶಯೋಕ್ತಿಯಾಗಲಾರದೇನೋ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s