ದಲಿತರಿಗೆ, ಆದಿವಾಸಿಗಳಿಗೆ ಮೀಸಲಿಟ್ಟ ದುಡ್ಡೇನು ಮಾಡಿದರು ಮೋದಿ?

modi_sc.png
ಕೇಂದ್ರದಲ್ಲಿರುವ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ವ್ಯವಸ್ಥಿತವಾಗಿ ದಲಿತರಿಗೆ ಹಾಗೂ ಆದಿವಾಸಿಗಳಿಗೆ ಮಂಕುಬೂದಿ ಎರಚುತ್ತಿದೆ. ಮೋದಿಯ ಪ್ರತಿಯೊಂದು ಕ್ರಿಯೆಯನ್ನೂ ಅತೀಂದ್ರೀಯ ಕೆಲಸ ಎಂಬಂತೆ ಬಿಂಬಿಸುವ ಭಕ್ತರು, ಮಂಕುಬೂದಿ ಎರಚಿದ್ದನ್ನೂ ಮಹಾನ್ ಸಾಧನೆ ಎಂಬಂತೆ ಬಿಂಬಿಸಿದರೆ ಆಶ್ಚರ್ಯವಿಲ್ಲ. ಅಷ್ಟಕ್ಕೂ ಮೋದಿ ಮಾಡಿದ್ದೇನು ಎನ್ನುವುದನ್ನು ಮುಂದೆ ಓದಿ.
   ಅಧಿಕಾರಕ್ಕೆ ಬರುವ ಮೊದಲು ಹೋದಲ್ಲಿ ಬಂದಲ್ಲಿ ಮೋದಿ ಶೋಷಿತ ವರ್ಗಕ್ಕೆ ಹೇಳಿದ ಒಂದೇ ಮಾತೆಂದರೆ – “ಮುಂದಿನ 10 ವರ್ಷಗಳು ನಿಮ್ಮದಾಗಿರಲಿವೆ”! ನಿಜಕ್ಕೂ ಆಗ ಅದರ ಅರ್ಥವ್ಯಾಪ್ತಿಯನ್ನು ಅಭಿವೃದ್ಧಿ ಅಥವಾ ಪ್ರಗತಿ ಎಂಬ ಚೌಕಟ್ಟಿನಲ್ಲಿ ನೋಡಲಾಗಿತ್ತು. ನಂತರ ನಡೆದಿದ್ದು ಅಕ್ಷರಶಃ ಹಿಂಸಾಚಾರ. ಹೌದು, ಮೋದಿ ಪ್ರಧಾನಿಯಾಗಿ ಗದ್ದುಗೆ ಹಿಡಿದು ಕೂರುತ್ತಿದ್ದಂತೆ ದಲಿತರನ್ನು, ಹಿಂದುಳಿದವರನ್ನು, ಆದಿವಾಸಿಗಳನ್ನು ನಾನಾ ಕಾರಣಗಳಿಗಾಗಿ ಅಧಿಕಾಯುತವಾಗಿ ಹಿಂಸಿಸಲಾಗುತ್ತಿದೆ. ಗೋಮಾಂಸ ತಿಂದರೆಂದು ಹತ್ಯೆ, ಗೋಮಾಂಸ ತಿಂದರೆಂದು ಅತ್ಯಾಚಾರ ಹೀಗೆ ಧರ್ಮವನ್ನು ಗುತ್ತಿಗೆಗೆ ಪಡೆದ ಪ್ರತಿಯೊಬ್ಬರೂ ಯದ್ವಾತದ್ವಾ ತಮ್ಮ ವಿಕಾರಗಳನ್ನು ತೋರಿಸತೊಡಗಿದರು, ಅದು ಇನ್ನೂ ನಿಂತಿಲ್ಲ. ಇದು ಮೋದಿ ಹೇಳಿದ “ಮುಂದಿನ 10 ವರ್ಷಗಳು”.
   ಇನ್ನು ಆರ್ಥಿಕವಾಗಿ ಮೋದಿ ಸರ್ಕಾರ ಶೋಷಿತರಿಗೆ ಮಹಾನ್ ಸಹಾಯ ಮಾಡಿದೆ ಎಂದು ಬೊಬ್ಬಿರಿಯುವವರು ತೆಪ್ಪಗಿದ್ದು ಬದಿಸರಿಯಲು ಒಂದಷ್ಟು ಅಂಕಿ-ಅಂಶಗಳ ಕುರಿತು ಚರ್ಚೆ ಮಾಡಬೇಕಾಗುತ್ತದೆ. ಮೋದಿ ಸರ್ಕಾರ ದಲಿತರಿಗೆ ಹಾಗೂ ಆದಿವಾಸಿಗಳಿಗೆ ಮೀಸಲಿರಿಸಿದ್ದ ಹಣದಲ್ಲಿ ಖರ್ಚು ಮಾಡಿದ್ದು ನೆಪಮಾತ್ರಕ್ಕೆ. 2014-15ನೇ ಸಾಲಿನಲ್ಲಿ ಖರ್ಚಾಗದೇ ಉಳಿದ ಹಣ ರೂ.32,979 ಕೋಟಿ! ಅಂದರೆ ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ದಲಿತರಿಗೆ ಹಾಗೂ ಆದಿವಾಸಿಗಳಿಗಾಗಿ ಮೀಸಲಿಟ್ಟ ಹಣದಲ್ಲಿ ಶೇ.250ರಷ್ಟನ್ನು ಮೋದಿ ಸರ್ಕಾರ ಬಳಕೆಯೇ ಮಾಡಿಲ್ಲ. ಕೇಂದ್ರ ಸರ್ಕಾರದ ಕಣ್ಣೊರೆಸುವ ತಂತ್ರವನ್ನು ಗಮನಿಸಿ; 2014-15ನೇ ಸಾಲಿನಲ್ಲಿ ಎಸ್‍ಸಿಎಸ್‍ಪಿ ಹಾಗೂ ಟಿಎಸ್‍ಪಿ ಅನುದಾನದಲ್ಲಿ ಶೇ.25ರಷ್ಟು ಹೆಚ್ಚಳವನ್ನೇನೋ ಮಾಡಲಾಯಿತು ಅಂದರೆ ರೂ.82,935 ಕೋಟಿ ರೂ. ಅನುದಾನ ನಿಗದಿಪಡಿಸಲಾಯಿತು. ಅದರಲ್ಲಿ ಮೂರನೇ ಒಂದಂಶವನ್ನು ಕೇಂದ್ರದ ಸಚಿವಾಲಯಗಳು ಹಂಚಿಕೆ ಮಾಡಿದವು. ಆದರೆ ಬಳಕೆಯಾಗದೇ ಉಳಿದದ್ದು ಬರೋಬ್ಬರಿ ರೂ.32,979.21 ಕೋಟಿ! ಅದನ್ನು ಮೋದಿ ಸರ್ಕಾರ ಏನು ಮಾಡಿತು? ಬಹುಶಃ ಉತ್ತರ ಸುಲಭಕ್ಕೆ ಸಿಗುವುದಿಲ್ಲ.
   ಇತ್ತ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ದಲಿತರ ಪರವಾಗಿದೆ ಎಂದು ಬಿಂಬಿಸಲು ಹಾಗೂ ಮೋದಿಯ ಮೆಚ್ಚುಗೆಗೆ ಪಾತ್ರರಾಗಲು ಇಲ್ಲಸಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಸ್ವಾಮಿ, ನೀವೆಲ್ಲ ಅದೆಷ್ಟೇ ಖಟಾಪಟಿ ನಡೆಸಿದರೂ ಶೋಷಿತರಿಗೆ ನಿಮ್ಮ ಬಂಡವಾಳ ತಿಳಿದಿದೆ. ದಲಿತರ, ಆದಿವಾಸಿಗಳ ದುಡ್ಡನ್ನು ಮೊದಲು ಅವರಿಗೆ ನ್ಯಾಯಯುತ ರೀತಿಯಲ್ಲಿ ನೀಡಿ. ಅವರ ಅಭಿವೃದ್ಧಿ ಕಾರ್ಯಗಳಿಗಾಗಿ ಸದ್ವಿನಿಯೋಗ ಮಾಡಿ. ಕೇವಲ ಬಾಯಲ್ಲಿ ಬಡಾಯಿ ಕೊಚ್ಚುವುದಲ್ಲ, ಕೃತಿಯಲ್ಲೂ ಮಾಡಿತೋರಿಸಬೇಕು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s