ಕನ್ನಡಿಗರು ಪ್ರಧಾನಿ ಮೋದಿಯ ಲೆಕ್ಕಕ್ಕೇ ಇಲ್ಲ!

modi-kan

11 ವರ್ಷಗಳ ಹಿಂದೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಿರುಗಾಳಿಯ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಆದರೆ ಇದುವರೆಗೂ ಅಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಅಲ್ಲಿನ ಮಹಿಳೆಯೋರ್ವಳು ಪ್ರಧಾನಿ ಮೋದಿಗೆ ಪತ್ರ ಬರೆದು ಸಮಸ್ಯೆ ಹೇಳಿಕೊಂಡಳು. ಅದಕ್ಕೆ ಸ್ಪಂದಿಸಿದ ಪ್ರಧಾನಿ ವಿದ್ಯುತ್ ಸಂಪರ್ಕ ಸರಿಪಡಿಸಲು ಸೂಚಿಸಿ, ಹಳ್ಳಿಗೆ ವಿದ್ಯುತ್ ಬರುವಂತೆ ಮಾಡಿದರು.

   ಈ ಮೇಲಿನ ಘಟನೆಯನ್ನು ಯಾಕೆ ಹೇಳಬೇಕಾಯಿತೆಂದರೆ, ಜನಸಾಮಾನ್ಯರ ಸಮಸ್ಯೆಗೆ ತಕ್ಷಣ ಪ್ರತಿಕ್ರಿಯಿಸುತ್ತೇವೆ ಎಂದು ಬೋರ್ಡ್ ಹಾಕಿಕೊಳ್ಳಲು ಒಂದೇ ಒಂದು ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ, “ಕರ್ನಾಟಕ ನೀರಿಲ್ಲದೇ ಪರಿತಪಿಸುತ್ತಿದೆ, ಜನರು ನೀರಿಗಾಗಿ ಬೀದಿಗಿಳಿದಿದ್ದಾರೆ, ತಮಿಳುನಾಡಿಗೆ ನೀರು ಬಿಡುವುದು ಕಷ್ಟವಾಗಿದೆ, ಈ ಕುರಿತು ನೀವು ಮಧ್ಯಪ್ರವೇಶಿಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂಟು ಪತ್ರಗಳನ್ನು ಬರೆದರೂ ಸೌಜನ್ಯಕ್ಕೂ ಪ್ರತಿಕ್ರಿಯೆ ನೀಡಿಲ್ಲ! ಅಲ್ಲಾ ಸ್ವಾಮಿ, ಇಲ್ಲಿ ರಾಜ್ಯ ರಾಜ್ಯಗಳ ನಡುವಿನ ಸಮಸ್ಯೆ ವಿವಾದವಾಗಿ ಹೊತ್ತಿ ಉರಿಯುತ್ತಿದೆ. ದೇಶದ ಜನರ ಹಿತಾಸಕ್ತಿ ಕಾಪಾಡುವ ಜವಾಬ್ದಾರಿಯಿರುವ ನೀವು, ಅಂತರವನ್ನು ಕಾಯ್ದುಕೊಂಡು ಯಾವ ಪುರುಷಾರ್ಥ ಸಾಧಿಸಲು ಹೊರಟಿದ್ದೀರಿ?

   ಒಂದು ವೇಳೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಿದ್ದರೆ ಆಗ ಅನಿವಾರ್ಯವಾಗಿ ಮೋದಿ ಮಧ್ಯಪ್ರವೇಶ ಮಾಡುತ್ತಿದ್ದರೇನೋ. ಅದು ಒತ್ತಟ್ಟಿಗಿರಲಿ, ಇಲ್ಲಿನ ಬಿಜೆಪಿ ಅತಿರಥ ಮಹಾರಥರು ಯಾಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತಿಲ್ಲ? ಅಥವಾ ಒತ್ತಡ ತರಲು ಪ್ರಯತ್ನಿಸುತ್ತಿಲ್ಲ. ಬದಲಿಗೆ “ಮೋದಿ ಮಧ್ಯ ಪ್ರವೇಶ ಮಾಡುವುದಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ ನೀಡುತ್ತಾರೆ. ನಾಚಿಕೆಯಾಗುವುದಿಲ್ಲವೇ ಇಂತಹ ಹೇಳಿಕೆ ನೀಡಲು? ಇದು ರಾಜಕೀಯ ಗುದ್ದಾಟದ ಪ್ರಶ್ನೆಯಲ್ಲ, ಕನ್ನಡಿಗರಿಗಾಗುತ್ತಿರುವ ಅನ್ಯಾಯದ ಪ್ರಶ್ನೆ. ದಯವಿಟ್ಟು ನಿಮ್ಮ ರಾಜಕೀಯ ತೆವಲುಗಳಿಗಾಗಿ ‘ಕಾವೇರಿ ವಿಷಯ’ವನ್ನು ಬಳಸಿಕೊಳ್ಳದಿರಿ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಕನ್ನಡ ನಾಡಿನ ಒಳಿತಿಗಾಗಿ ಪ್ರಯತ್ನಿಸಬೇಕಿದೆ. ಜಯಲಲಿತಾ ಕರ್ನಾಟಕದಿಂದ ಬಂದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಇದಕ್ಕೆಲ್ಲ ಈಗ ಪರಿಹಾರವೆಂದರೆ ಪ್ರಧಾನಿ ಮೋದಿ ಮಧ್ಯಪ್ರವೇಶ.

   ಮೋದಿ ಸಾಹೇಬ್ರೆ, ನಾವು ಕನ್ನಡಿಗರು ನೀರಿಲ್ಲದೇ ಒದ್ದಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿದೆ. ಅತ್ತ ನೀರಿನ ದಾಹ ತೀರದ ಜಯಲಲಿತಾ ನೀರಿಗಾಗಿ ಊಳಿಡುತ್ತಿದ್ದಾರೆ. ತಮ್ಮ ಮಧ್ಯಪ್ರವೇಶದಿಂದ ಏನಾದರೂ ಒಳಿತಾಗಬಹುದು ಎಂಬ ಆಶಾವಾದವಿದೆ. (ಅಂತಹುದೇ ಒಂದು ಆಶಾವಾದದಿಂದಲೇ ಕರ್ನಾಟಕದ 18 ಬಿಜೆಪಿ ಸಂಸದರು ನಿಮ್ಮ ಬತ್ತಳಿಕೆಯಲ್ಲಿದ್ದಾರೆ.) ಈಗಾಗಲೇ ನಿಮ್ಮ ಮೌನ ನಮ್ಮೆಲ್ಲ ಆಸೆಯ ಮೇಲೆ ತಣ್ಣೀರೆರಚಿದೆ. ನಿಮಗೂ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವ ಮನಃಸ್ಥಿತಿಯಿದೆ ಎಂದಾದರೆ ದಯವಿಟ್ಟು ನಮ್ಮ ಮನವಿಗೆ ಸ್ಪಂದಿಸಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s