ಕನ್ನಡ ನಾಡಿನ ಜೀವನದಿ ಕಾವೇರಿ

cauvery-blog-imageಕಾವೇರಿಗಾಗಿ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಕನ್ನಡಿಗರು ಅಕ್ಷರಶಃ ಬೀದಿಗಿಳಿದಿದ್ದಾರೆ. ನಮಗೇ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಹೇಗೆ ಬಿಡುವುದು ಅಥವಾ ಬಿಡಬೇಕು ಎನ್ನುವಂತಹ ಪ್ರಶ್ನೆಗಳನ್ನಿಟ್ಟುಕೊಂಡು ಪ್ರತಿಭಟನೆಗಳು ಶುರುವಾಗಿದ್ದವು. ಆದರೆ ಸುಪ್ರೀಂಕೋರ್ಟ್‍ನ ಆದೇಶವನ್ನು ಮೀರಲಾಗದೇ ಕನಿಷ್ಟ ಮಟ್ಟದ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಯಬಿಟ್ಟಿದೆ. ಇದೀಗ ಪ್ರತಿಭಟನಾಕಾರರ ಆಕ್ರೋಶ ಕರ್ನಾಟಕ ಸರ್ಕಾರದೆಡೆಗೆ ತಿರುಗಿದೆ. ಈ ಸಂದರ್ಭದಲ್ಲಿ ಕೆಲವು ವಿಷಯಗಳನ್ನು ಚರ್ಚೆ ಮಾಡಬೇಕಾದ ಅನಿವಾರ್ಯತೆಯಿದೆ.
   ಪ್ರಾರಂಭದಲ್ಲಿ ಸಿದ್ದರಾಮಯ್ಯನವರು ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದಿದ್ದರು. ಆದರೆ ಸುಪ್ರೀಂಕೋರ್ಟ್‍ನ ಆದೇಶದ ಉಲ್ಲಂಘನೆ ಮಾಡಿದಲ್ಲಿ ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂಬ ಹಿನ್ನೆಲೆಯಲ್ಲಿ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಕನಿಷ್ಟ ಪ್ರಮಾಣದ ನೀರನ್ನು ಹರಿಸಲಾಗಿದೆ. ಇಲ್ಲಿ ಇದನ್ನು ರಾಜಕೀಯ ದೃಷ್ಟಿಕೋನದಿಂದಾಚೆ ನೋಡಬೇಕಾಗಿದೆ. ಇಂತಹ ಸಮಯದಲ್ಲಿ ಅಧಿಕಾರದಲ್ಲಿ ಯಾವ ಪಕ್ಷದ ಸರ್ಕಾರವಿದ್ದರೂ ಇದೇ ನಡೆಯನ್ನು ಅನುಸರಿಸುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಪ್ರಮುಖವಾಗಿ ಆಗಬೇಕಿರುವುದು ಪಕ್ಷಾತೀತವಾಗಿ, ಕನ್ನಡಿಗರೆಂಬ ಹಣೆಬರಹದಡಿಯಲ್ಲಿ ಹೋರಾಡಬೇಕಿರುವುದು.
   ನಿಜ, ಇದು ನಮ್ಮ ಅಸಹನೆಯನ್ನು ಹೊರಹಾಕಬೇಕಾದ – ಸ್ಪಷ್ಟ ಸಂದೇಶವನ್ನು ನೀಡಬೇಕಾದ ಸಮಯ. ಆದರೆ ನಮ್ಮ ಹೋರಾಟ ನಮ್ಮವರ ವಿರುದ್ಧವೇ ಆಗಬಾರದು. ನಮ್ಮ ಹೋರಾಟ ನಮ್ಮವರ ಕಷ್ಟಗಳನ್ನು ಅರ್ಥಮಾಡಿಕೊಳ್ಳದೇ, ಕೇವಲ ಹಗೆತನದ ಪಟ್ಟು ಹಿಡಿದವರ ವಿರುದ್ಧವಾಗಿರಬೇಕು. ತಮಿಳುನಾಡಿನ ಹೊಟ್ಟೆಕಿಚ್ಚು ಅದೆಷ್ಟರಮಟ್ಟದ್ದೆಂದರೆ, ಕರ್ನಾಟಕದಲ್ಲಿ ಜನರು ಕುಡಿಯಲು ನೀರಿಲ್ಲದೇ ಪರಿತಪಿಸುತ್ತಿದ್ದಾರೆ ಎನ್ನುವುದು ಗೊತ್ತಿದ್ದರೂ, “ನಮ್ಮ ರೈತರ ಬೆಳೆಗಳಿಗೆ ನೀರಿಲ್ಲ, ನೀರು ಬಿಡಿ” ಎಂದು ಹೇಳಿದ್ದಾರೆ. ಅಂದರೆ ಅವರಿಗೆ ಕನ್ನಡಿಗರ ಜೀವ ಲೆಕ್ಕಕ್ಕೇ ಇಲ್ಲ! ಕಾವೇರಿ ನೀರು ಕರ್ನಾಟಕದಲ್ಲಿ ಹುಟ್ಟಿ, ನೀರನ್ನು ಕರ್ನಾಟಕವೇ ಬಿಡಬೇಕಾಗಿರುವುದರಿಂದ, ನೀರಿನ ಲೆಕ್ಕಾಚಾರದ ಬಗ್ಗೆ ಕರ್ನಾಟಕದಲ್ಲಿ ಕಣ್ಣಿಡುವವರು ಸಾಕಷ್ಟು ಮಂದಿಯಿದ್ದಾರೆ. ವಾಸ್ತವವೆಂದರೆ, ತಮಿಳುನಾಡಿನ ಅಣೆಕಟ್ಟಿನಲ್ಲಿ 30 ಟಿಎಂಸಿಯಷ್ಟು ನೀರು ಶೇಖರಣೆಯಿದೆ. ಆದರೆ ಅದನ್ನು ಮರೆಮಾಚಲಾಗುತ್ತಿದೆ.
   ಈ ಸಂದರ್ಭದಲ್ಲಿ ಭೌಗೋಳಿಕತೆಯ ಬಗ್ಗೆಯೂ ನಾವು ಗಮನ ಹರಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಕಳೆದೆರಡು ವರ್ಷದಿಂದ ಮಳೆಯ ಅಭಾವವಿದೆ. ಮುಂಗಾರು ನಿರೀಕ್ಷೆಯ ಮಟ್ಟದಲ್ಲಿಲ್ಲ. ಕಳೆದ ವರ್ಷ ಇಲ್ಲಿ 174 ತಾಲೂಕುಗಳು ಮಳೆಯಿಲ್ಲದೇ ಪರಿತಪಿಸುತ್ತಿದ್ದಾಗ, ತಮಿಳುನಾಡಿನಲ್ಲಿ ಹಿಂಗಾರು ಮಳೆಯ ಪರಿಣಾಮ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು. ತಮಿಳುನಾಡು ಹಿಂಗಾರು ಮಳೆಯಿಂದಾಗಿ ಸಾಕಷ್ಟು ನೀರನ್ನು ಪಡೆಯುತ್ತದೆ. ನೆನಪಿರಲಿ, ಕರ್ನಾಟಕದಲ್ಲಿ ಮಳೆಯ ಕಣ್ಣಾಮುಚ್ಚಾಲೆ ಇನ್ನೂ ಮುಂದುವರೆದಿದೆ. ಚೆನ್ನೈನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಕರ್ನಾಟಕ ನೆರವಿಗೆ ಧಾವಿಸಿದ್ದರ ನೆನೆಗುಣವೂ ಇಲ್ಲದಷ್ಟು ಶುಷ್ಕ ಮನಸ್ಸಿನವರಾಗಿಬಿಟ್ಟರೇ ಜಯಲಲಿತಾ ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುವುದು ಸಹಜ.
   ನಾರಿಮನ್ ಅವರನ್ನು ಬದಲಾಯಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ ಕಳೆದ 32 ವರ್ಷಗಳಿಂದ ಕಾವೇರಿ ಕುರಿತಾದ ವ್ಯಾಜ್ಯಗಳನ್ನು ನಾರಿಮನ್ ನೋಡಿಕೊಂಡು ಬಂದಿದ್ದಾರೆ. ಕರ್ನಾಟಕದ ಮಟ್ಟಿಗೆ ಅವರಷ್ಟು ಕಾವೇರಿ ಕುರಿತು ಅರಿತ ವ್ಯಕ್ತಿ ಮತ್ತೊಬ್ಬರಿರಲಿಕ್ಕಿಲ್ಲ. ಕರ್ನಾಟಕವು ಕಾವೇರಿ ವಿಷಯದಲ್ಲಿ ತನ್ನ ಜನರನ್ನು ನಿಭಾಯಿಸುವುದರ ಜೊತೆಗೆ, ತಮಿಳುನಾಡಿನ ಜನರನ್ನೂ ನಿಭಾಯಿಸುತ್ತಾ ಬಂದಿದೆ. ಜಯಲಲಿತಾ ಸರ್ಕಾರ ಹಗೆತನವನ್ನು ಬಿಟ್ಟು ಮಾನವೀಯ ದೃಷ್ಟಿಯಿಂದ ಯೋಚಿಸಬೇಕಿದೆ. ಇನ್ನು ನಮಗೆ ಅನ್ಯಾಯವಾಗಿದೆ ಎಂದು ನಮ್ಮ ಆಸ್ತಿಪಾಸ್ತಿಗಳನ್ನು ನಾವೇ ಹಾಳು ಮಾಡಿಕೊಂಡು ರೋಧಿಸುವುದು ಸರಿಯಲ್ಲ. ಬದಲಿಗೆ ತಮಿಳುನಾಡಿಗೆ ನಮ್ಮ ಸ್ಪಷ್ಟ ಸಂದೇಶ ನೀಡಲು ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s