ರೈತರ ಬಾಳಲ್ಲಿ ‘ಭಾಗ್ಯೋದಯ’!

Green-Revolution
ಕೃಷಿ ಎಂದರೆ ಅದು ಪ್ರಾಕೃತಿಕ ಬದಲಾವಣೆಯ ಮೇಲೆ ಅವಲಂಬಿತವಾದದ್ದು. ಒಮ್ಮೊಮ್ಮೆ ಅಗತ್ಯಕ್ಕಿಂತಲೂ ಹೆಚ್ಚಿನ ಮಳೆ ಬಂದರೆ, ಇನ್ನೂ ಕೆಲವೊಮ್ಮೆ ಮಳೆಯ ಕುರುಹೇ ಇರುವುದಿಲ್ಲ. ಪರಿಸರದ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಪ್ರಕೃತಿಯು ಮಾನವರ ಮೇಲೆ ಸೇಡು ತೀರಿಸಿಕೊಳ್ಳಲು ಕಂಡುಕೊಂಡ ದಾರಿ ಇದೇನೋ ಎನ್ನುವ ಸಂಶಯವೂ ಕೆಲವೊಮ್ಮೆ ಕಾಡದಿರುವುದಿಲ್ಲ. ಆದರೆ ಯಾವುದೇ ರೀತಿಯ ವೈಪರಿತ್ಯ ಎದುರಾದರೂ ಸಮರ್ಥವಾಗಿ ನಿರ್ವಹಿಸಲು ಕೃಷಿಕ ಸಿದ್ಧನಿರಬೇಕಾಗುತ್ತದೆ.
   ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎನ್ನಲು ಸಂತಸವಾಗುತ್ತದೆ. ಕೃಷಿಕರಿಗೆ ಮುಖ್ಯವಾಗಿ ಬೇಕಾಗುವುದು ನೀರು. ನೀರಿನ ಅಭಾವವಾಗದಂತೆ ನೋಡಿಕೊಂಡರೆ ಮಾತ್ರ ಬೆಳೆಯನ್ನು ಅಂದುಕೊಂಡಂತೆ ಬೆಳೆಯಬಹುದು. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ತಂದಿದ್ದೇ ‘ಕೃಷಿ ಭಾಗ್ಯ’! ರೈತರ ಸಮಸ್ಯೆಗಳನ್ನೆಲ್ಲ ಆಮೂಲಾಗ್ರವಾಗಿ ಪರಿಶೀಲಿಸಿ ತಜ್ಞ ಜಿ.ವಿ.ಕೆ ರಾವ್ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತು. ಸಮಿತಿ ವತಿಯಿಂದ ರೈತರ ಸಮಸ್ಯೆ ಪರಿಹಾರಕ್ಕಾಗಿ ಕೆಲವೊಂದು ಅಂಶಗಳನ್ನು ಕಂಡುಕೊಳ್ಳಲಾಯಿತು. ಅದರ ಪರಿಣಾಮವಾಗಿ ಹುಟ್ಟಿಕೊಂಡಿದ್ದೇ ‘ಕೃಷಿ ಭಾಗ್ಯ’. ಇದೀಗ ಕೃಷಿ ಭಾಗ್ಯವು ನಿಜಕ್ಕೂ ಸಾವಿರಾರು ರೈತರ ಬದುಕಿನಲ್ಲಿ ಭಾಗ್ಯೋದಯವನ್ನುಂಟುಮಾಡಿದೆ.
   ಪ್ರಾರಂಭಿಕ ಹಂತದಲ್ಲಿ ನೈಸರ್ಗಿಕ ಕಾರಣಗಳಿಂದಾಗಿ ನಾನಾ ರೀತಿಯ ತೊಡಕುಗಳು ಎದುರಾದರೂ, ಕ್ರಮೇಣ ಚೇತರಿಕೆ ಕಂಡಿತು. ಇಂದು 80 ಸಾವಿರಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ. ನಾಡಿನಾದ್ಯಂತ ‘ಕೃಷಿ ಭಾಗ್ಯ’ದ ಯಶೋಗಾಥೆಗಳು ನಮಗೆ ದೊರೆಯುತ್ತವೆ. ಉತ್ತರ ಕರ್ನಾಟಕದ ರೈತರಿಗಂತೂ ಕೃಷಿ ಹೊಂಡಗಳಿಂದಾದ ಒಳಿತು ಹೇಳತೀರದ್ದು. ಹೀಗೆ ಸಿದ್ದರಾಮಯ್ಯ ಸರ್ಕಾರ ‘ಕೃಷಿ ಭಾಗ್ಯ’ದ ಮೂಲಕ ರೈತರ ಬದುಕಿನಲ್ಲಿ ಹಸಿರು ಕ್ರಾಂತಿ ಮಾಡಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s