ಮಹಾದಾಯಿ ಮತ್ತು ಮೋದಿ ‘ಮಹಾ’ಮೌನ

modi
ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ತೀರ್ಪು ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಮಾಡಿದ್ದು ಕಣ್ಣಮುಂದೇ ಇದೆ. ಉತ್ತರ ಕರ್ನಾಟಕದ ಮಂದಿ ಕುಡಿಯುವ ನೀರಿಗಾಗಿ ಪರದಾಡಿ, ಪಡಬಾರದ ಪಡಿಪಾಟಲನ್ನೆಲ್ಲ ಅನುಭವಿಸಿಬಿಟ್ಟಿದ್ದಾರೆ. ಪಕ್ಕದ ರಾಜ್ಯ ಗೋವಾ ನೀರಿನ ಮೇಲೆ ಹಕ್ಕುಚಚಲಾವಣೆಗೆ ನಿಂತುಬಿಟ್ಟಿದೆ. ಮಹಾದಾಯಿ ಪ್ರಕರಣ ಹಕ್ಕುಚಲಾವಣೆಗಿಂತ ಹೆಚ್ಚಿನದಾಗಿ ಮಾನವೀಯ ನೆಲೆಗಟ್ಟಿನಲ್ಲಿ ವಿಶ್ಲೇಷಿಸಬೇಕಾದ್ದು ಎನ್ನುವ ಸತ್ಯ ಗೊತ್ತಿದ್ದೂ, ಗೊತ್ತಿಲ್ಲದಂತೆ ನಾಟಕವಾಡುತ್ತಿದೆ.
ಉತ್ತರ ಕರ್ನಾಟಕದ ಜನರು ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ. ಅಲ್ಲೆಲ್ಲೋ ವ್ಯರ್ಥವಾಗಿ ಹರಿದುಹೋಗುವ ನೀರನ್ನು ನಾವು ಕುಡಿಯಲು ಬಳಸಿಕೊಳ್ಳುತ್ತೇವೆ ಎನ್ನುವ ಮಾತಿಗೆ ಬೆಲೆ ಇಲ್ಲವೆಂದು ಕೋರ್ಟ್ ತೀರ್ಪಿನಿಂದಾಗಿ ಜನ ಅರಿತಿದ್ದಾರೆ. ಇನ್ನು ಈ ಸಮಸ್ಯೆಗೆ ಪರಿಹಾರವೇನು ಎಂದು ಯೋಚಿಸಿದಾಗಲೆಲ್ಲ ಉತ್ತರವೆಂಬಂತೆ ಕಂಡುಬರುವವರು ಪ್ರಧಾನಿ ನರೇಂದ್ರ ಮೋದಿ.
ಹೌದು, ಪ್ರಧಾನಿ ನರೇಂದ್ರ ಮೋದಿ ಮಹಾದಾಯಿ ವಿಷಯದಲ್ಲಿ ಮಧ್ಯ ಪ್ರವೇಶಿಸಲಿ ಎನ್ನುವುದು ಕನ್ನಡಿಗರ ಆಶಯ. ಆದರೆ ಇದಕ್ಕೆ ಪ್ರಧಾನಿ ಮೋದಿ ತಮ್ಮ ದಿವ್ಯ ಮೌನದ ಉತ್ತರ ನೀಡುತ್ತಿದ್ದಾರೆ. ಮೋದಿ ಮಧ್ಯಪ್ರವೇಶದಿಂದ ಕುಡಿಯಲು ನೀರಿಲ್ಲದೇ ದಿನ ದಿನ ಬವಣೆ ಪಡುತ್ತಿರುವ ಜನರ ಕಷ್ಟ ನೀಗುತ್ತದೆ. ಈ ಸತ್ಯ ಸ್ವತಃ ಮೋದಿಗೂ ಗೊತ್ತಿಲ್ಲದಿಲ್ಲ. ಆದರೆ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಮೋದಿ ಮೌನ ವಹಿಸಿದ್ದಾರಾ ಎನ್ನುವ ಪ್ರಶ್ನೆ ಇದೀಗ ಎಲ್ಲರದ್ದಾಗಿದೆ.
ಫೆಬ್ರವರಿ, 2017ರಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯಲಿದೆ. ಒಂದು ವೇಳೆ ಮೋದಿ ಕರ್ನಾಟಕಕ್ಕೆ ನೀರು ಕೊಡಿಸಿದರೆ ಗೋವಾದವರು ಕೋಪ ಮಾಡಿಕೊಂಡು ಪಕ್ಷವನ್ನು ತಳ್ಳಿಹಾಕಿದರೆ? ಕರ್ನಾಟಕದಲ್ಲಿ ಜನ ನೀರಿಲ್ಲದೇ ಸತ್ತರೂ ಪರವಾಗಿಲ್ಲ, ರಾಜಕೀಯ ಮೇಲಾಟವೇ ಮುಖ್ಯ ಎನ್ನುವ ನಿಲುವನ್ನು ಮೋದಿ ತಾಳಿದಂತಿದೆ. ಅವರ ಮೌನ ಕೂಡ ಇದನ್ನು ಪುಷ್ಠೀಕರಿಸುತ್ತದೆ. ಇತ್ತ ಕರ್ನಾಟಕದಲ್ಲಿ ಮೋದಿಯವರ ಮೇಲೆ ಒತ್ತಡ ತರಲು ಬಿಜೆಪಿ ಮೀನಮೇಷ ಎಣಿಸುತ್ತಿದೆ. ಕರ್ನಾಟಕದಿಂದ 17 ಬಿಜೆಪಿ ಸಂಸದರು ಆರಿಸಿಹೋಗಿದ್ದಾರೆ ಎನ್ನುವುದನ್ನು ಕೇಂದ್ರ ಮರೆತಂದಿದೆ. ರಾಜ್ಯ ಬಿಜೆಪಿ ಸಹ ಗಪ್‍ಚುಪ್ ಆಗಿ ಕೂತಿದೆ.
ರಾಜ್ಯದ ಹಿತದೃಷ್ಟಿ ಬಂದಾಗ ರಾಜಕೀಯ ಬದಿಗಿಡಬೇಕು ಎನ್ನುವ ಕನಿಷ್ಟ ಜ್ಞಾನವೂ ರಾಜ್ಯ ಬಿಜೆಪಿಗೆ ಇಲ್ಲವಾಯಿತೇ? ಇನ್ನು ಪ್ರಧಾನಿ ಮೋದಿಗೆ ಜೀವಬೆಲೆಗಿಂತ ರಾಜಕೀಯವೇ ಮುಖ್ಯವಾಗಿದೆ. ಮಹಾದಾಯಿ ಎಂಬ ನಮ್ಮೆಲ್ಲರ ಕೂಗು ಮುಗಿಲುಮುಟ್ಟಿದೆ, ಅದು ಆಗಸವನ್ನು ಬಡಿದೆಬ್ಬಿಸಿ ಭೋರ್ಗರೆವ ಮಳೆಯಾಗಿ ಕೆಳಗಿಳಿಯಬೇಕಷ್ಟೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s