ಕಮಲದಳಗಳ ಮೇಲೆ ‘ಅಪ್ಪಂದಿರ’ ಹೊಡೆದಾಟ!

For-Blog (1)
ಅತ್ತ ಯಡಿಯೂರಪ್ಪ, ಇತ್ತ ಈಶ್ವರಪ್ಪ.. ಮಧ್ಯ ಸಿಲುಕಿರುವ ಬಿಜೆಪಿಯದು ‘ಯಪ್ಪಾ ಯಪ್ಪಾ’ ಎನ್ನುವ ಆರ್ತನಾದ. ರಾಜ್ಯ ಬಿಜೆಪಿಯ ನಾಯಕರಿಬ್ಬರ ಪರಸ್ಪರ ಕೆಸರೆರಚಾಟವನ್ನು ಕಮಲ ಪಾಳಯದ ವಿಧೇಯ ವಿದ್ಯಾರ್ಥಿಗಳು ಕಣ್ ಕಣ್ ಬಿಟ್ಟು ನೋಡುತ್ತಿದ್ದಾರೆ. ಯಾರ ಪರ ಬ್ಯಾಟ್ ಮಾಡುವುದು ಎಂದರಿಯದೆ ತಲೆಯನ್ನು ಪರ ಪರ ಕೆರೆದುಕೊಳ್ಳುತ್ತಿದ್ದಾರೆ.
   ಬಿಜೆಪಿಯ ಒಳಾಂಗಣದಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪನದು ಹಾವು-ಮುಂಗುಸಿ ಸಂಬಂಧ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದೇ ತಡ ಈಶ್ವರಪ್ಪ ತಕ ತಕ ಕುಣಿದು ಉಸ್ಸೆಂದು ಕೂತಿದ್ದರು. ಬಿಎಸ್‍ವೈ ತಮ್ಮವರನ್ನೇ ಅಂದರೆ ತಮ್ಮೊಡನೆ ಕೆಜೆಪಿಯಲ್ಲಿ ಗುರುತಿಸಿಕೊಂಡವರನ್ನೇ ರಾಜ್ಯ ಬಿಜೆಪಿಯ ಆಯಕಟ್ಟಿನ ಸ್ಥಾನಗಳಲ್ಲಿ ಕುಳ್ಳಿರಿಸಿದರು. ಈಗಾಗಲೇ ಬಿಜೆಪಿಯಲ್ಲಿ ಔಟ್‍ಡೇಟೆಡ್ ಆಗಿರುವ ಈಶ್ವರಪ್ಪನವರ ಬೆಂಬಲಿಗರಿಗೆ ನಿರಾಶೆಯಾದದ್ದೇ ತಡ, ಈಶ್ವರಪ್ಪ ಬಹಿರಂಗವಾಗಿ ಯಡಿಯೂರಪ್ಪನವರ ನಡೆಯನ್ನು ಖಂಡಿಸಿದರು. ಇದೀಗ ಯಡಿಯೂರಪ್ಪನವರಿಗೆ ಹೇಗಾದರೂ ಸರಿ ಬುದ್ಧಿ ಕಲಿಸಬೇಕು ಎಂದು ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಎಂಬ ಕೂಸಿಗೆ ಜನ್ಮ ನೀಡಿದ್ದಾರೆ ಈಶ್ವರಪ್ಪ.
   ಹಾಗಾದರೆ ರಾಜ್ಯ ಬಿಜೆಪಿ ಒಡೆದು ಹೋಳಾಗಿದೆಯೆ? ನಿಜಾರ್ಥದಲ್ಲಿ ಹೌದು, ಆದರೆ ತೋರಿಕೆಗೆ ಅದು ಒಡೆದುಹೋಗದಂತೆ ತೋರಿಸಿಕೊಡಲು ತೇಪೆಹಚ್ಚುವ ಕೆಲಸವನ್ನು ಒಂದಷ್ಟು ಜನ ಮಾಡುತ್ತಿದ್ದಾರೆ. ಆದರೆ ಅದು ಕೇವಲ ತೋರಿಕೆಯಾಗಬಹುದೇ ಹೊರತು ಮನಸ್ಸಿನಾಳದಿಂದ ‘ಅಪ್ಪಂದಿರಿಬ್ಬರು’ ಒಂದಾಗಲು ಸಾಧ್ಯವೇ ಇಲ್ಲ. ಅದು ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಸಾಬೀತಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ಬಿಜೆಪಿಯ ದಳಗಳು ಉದುರುವ ಎಲ್ಲಾ ಲಕ್ಷಣಗಳು ಸದ್ಯದ ಪರಿಸ್ಥಿತಿಯಲ್ಲಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s