ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಈಶ್ವರಪ್ಪ

Ishwarappa
ರಾಜಕೀಯ ಲೆಕ್ಕಾಚಾರಗಳು ಹೇಗೇಗಿರುತ್ತವೆ ಎನ್ನುವುದೇ ಅರ್ಥವಾಗುವುದಿಲ್ಲ ನೋಡಿ. ಕೆ.ಎಸ್ ಈಶ್ವರಪ್ಪನವರು ಭಾರತೀಯ ಜನತಾ ಪಾರ್ಟಿಯ ಪ್ರಮುಖ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ; ಆದರೆ, ಇತ್ತೀಚಿನ ದಿನಗಳಲ್ಲಿ ಅವರು ಪಕ್ಷದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಸದಸ್ಯರಾಗಿದ್ದಾರಾ ಎನ್ನುವ ಪ್ರಶ್ನೆ ಇಡೀ ರಾಜ್ಯದ ಜನತೆಯನ್ನು ಒಂದು ಸುತ್ತು ಹಾಕಿ ಬಂದಿರುವುದಂತೂ ಸುಳ್ಳಲ್ಲ. ಆ ಪ್ರಶ್ನೆಗೆ ಉತ್ತರವನ್ನು ತಾವೇ ಸ್ವತಃ ಕೊಡುಬೇಕು ಎಂದು ನಿರ್ಧರಿಸಿದವರಂತೆ ಈಶ್ವರಪ್ಪ ರೊಚ್ಚಿಗೆದ್ದುಬಿಟ್ಟಿದ್ದಾರೆ!
   ಪ್ರಾರಂಭದಿಂದಲೂ ಬಿಜೆಪಿಯಲ್ಲಿ ಈಶ್ವರಪ್ಪನವರಿಗೆ ಪ್ರಬಲ ಪೈಪೋಟಿ ಎಂದರೆ ಒನ್ ಆ್ಯಂಡ್ ಓನ್ಲಿ ಬಿ.ಎಸ್ ಯಡಿಯೂರಪ್ಪ. ಯಡಿಯೂರಪ್ಪ ಎಂಬ ಫೈರ್‍ಬ್ರ್ಯಾಂಡ್ ರಾಜಕಾರಣಿಯೆದುರು ಈಶ್ವರಪ್ಪ ಟುಸ್ ಪಟಾಕಿ ಆಗಿದ್ದು ವಿಶೇಷವೇನಲ್ಲ. ಆದರೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೇ, ಹಂತಹಂತದಲ್ಲೂ ‘ಯಡಿಯೂರಪ್ಪನವರಿಗೆ ಜೈ’ ಎನ್ನುವಂತಹ ಪರಿಸ್ಥಿತಿ ಈಶ್ವರಪ್ಪನವರಿಗೆ ಬಂದೊದಗಿದ್ದು ನಿಜಕ್ಕೂ ದುರಾದೃಷ್ಟಕರ. ಆದರೂ ಇದೀಗ ಬಿಜೆಪಿಯೊಳಗೆ ‘ಕೆಜೆಪಿ ತಂಡ, ಬಿಜೆಪಿ ತಂಡ’ ಕಬ್ಬಡ್ಡಿ ಆಟ ಶುರುವಾಗಿರುವುದು ರಹಸ್ಯವಾಗೇನೂ ಉಳಿದಿಲ್ಲ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದಾರೆಯೇ ಹೊರತು ಬಿಜೆಪಿಯ ಸಮರ್ಥ ಅಥವಾ ಎಲ್ಲರ ಮೆಚ್ಚಿನ ನಾಯಕನಾಗುವಲ್ಲಿ ವಿಫಲರಾಗಿದ್ದಾರೆ. ಯಡಿಯೂರಪ್ಪನವರ ಎದುರಾಳಿ ತಂಡದ ನಾಯಕನಾಗಲು ನಾ ಮುಂದು ತಾ ಮುಂದು ಎಂದು ಒದ್ದಾಡುತ್ತಿರುವವರಲ್ಲಿ ಈ ಈಶ್ವರಪ್ಪ ಅಗ್ರಗಣ್ಯರಾಗಿ ನಿಲ್ಲುತ್ತಾರೆ.
   ಇದೀಗ ತಮ್ಮ ನಾಯಕತ್ವವನ್ನು ಸಾಬೀತುಪಡಿಸಲು, ಯಡಿಯೂರಪ್ಪನವರಿಗೆ ಸೆಡ್ಡುಹೊಡೆದು ನಿಲ್ಲಲು ಈಶ್ವರಪ್ಪ ಭಾರಿ ಉಪಾಯವೊಂದನ್ನು ಮಾಡಿದ್ದಾರೆ. ಕುರುಬ ಸಮಾಜದ ಸಭೆಯಲ್ಲಿ ಭಾಗವಹಿಸಿ, ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಅನ್ನು ಯಶಸ್ವಿಯಾಗಿ ಯಾವ ರೀತಿ ಕಟ್ಟಿ ಬೆಳೆಸಬಹುದು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ಹಿಂದುಳಿದ ವರ್ಗಗಳ ಓಲೈಕೆಗೆ ಮುಂದಾಗಿದ್ದು, ಆ ಮೂಲಕವಾದರೂ ತಮ್ಮ ನಾಯಕತ್ವವನ್ನು ತೋರಿಸೋಣ ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. “ಮಗು ಈಗಷ್ಟೆ ಹುಟ್ಟಿದೆ, ಅಂಬೆಗಾಲಿಡುವಾಗ ಬಂದು ಮಾತನಾಡುತ್ತೇನೆ” ಎನ್ನುವ ಮೂಲಕ ಮಹತ್ವದ ರಾಜಕೀಯ ನಡೆಯ ಬಗ್ಗೆಯೂ ಸೂಚನೆ ನೀಡಿದ್ದಾರೆ. ಆದರೆ ರಾಜಕೀಯ ದುರುದ್ದೇಶದಿಂದ ಮಾಡುವ ಕೆಲಸಗಳು ಕೈಗೂಡುವುದಿಲ್ಲ ಎನ್ನುವ ವಿಷಯವನ್ನು ಈಶ್ವರಪ್ಪ ಮರೆತಂತಿದೆ.
   ಅದೆಲ್ಲ ಏನೇ ಇದ್ದರೂ ಈಶ್ವರಪ್ಪ ಬಿಜೆಪಿಗೆ ಔಟ್‍ಡೇಟೆಡ್ ನಾಯಕ ಆಗಿರುವುದಂತೂ ಸತ್ಯ. ನವಪೀಳಿಗೆಯ ನಾಯಕರು ಮುಂದೆ ಬರುತ್ತಿರುವಾಗ ಈಶ್ವರಪ್ಪನವರ ನಾಯಕತ್ವ ವಿಲವಿಲನೆ ಒದ್ದಾಡುತ್ತಿದೆ. ಒಂದೋ ಈ ಒದ್ದಾಟ ನಿಲ್ಲಬೇಕು ಅಥವಾ ಒದ್ದಾಟವು ಹೋರಾಟವಾಗಿ ಬೃಹತ್ ರೂಪ ಪಡೆದುಕೊಳ್ಳಬೇಕು. ಇದೆರಡೂ ಆಗದೆ ಅತಂತ್ರ ಸ್ಥಿತಿಯಲ್ಲಿ ಈಶ್ವರಪ್ಪ ಒದ್ದಾಟ ನಡೆಸುವುದು ಬಹುತೇಕ ಖಚಿತ ಎನ್ನುವುದು ದೂರದಲ್ಲಿ ಕುಳಿತವರ ಮಾತು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s