ಲಾಠಿ ಚಾರ್ಜ್‍ನ ಹಿಂದಿನ ಕಥೆ

mahadayi_protest2_1140x490

ಮಹಾದಾಯಿ ತೀರ್ಪು ಉತ್ತರ ಕರ್ನಾಟಕವನ್ನಷ್ಟೇ ಅಲ್ಲದೇ ಇಡೀ ಕರ್ನಾಟಕವೇ ಆಕ್ರೋಶಗೊಳ್ಳುವಂತೆ ಮಾಡಿದೆ. ಇದನ್ನು ಕನ್ನಡಿಗರಿಗಾದ ಅನ್ಯಾಯ ಎಂದರೆ ತಪ್ಪಾಗಲಾರದೇನೋ. ಆದರೆ ಇದು ಅಂತಿಮವಲ್ಲ, ಮಧ್ಯಂತರ ಮಾತ್ರ ಎನ್ನುವುದು ಸಮಾಧಾನದ ಸಂಗತಿ. ಆದರೆ, ಈ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ನಡೆದುಕೊಂಡ ರೀತಿ ಅಮಾನುಷವಾದದ್ದು.

   ಪ್ರತಿಭಟನಾ ನಿರತರು ಕೇಳುತ್ತಿದ್ದುದು ಕುಡಿಯುವ ನೀರನ್ನು, ಆದರೆ ಅವರಿಗೆ ದೊರೆತದ್ದು ಲಾಠಿ ಏಟಿನ ರುಚಿ. ವೃದ್ಧರು, ಮಹಿಳೆಯರು, ಗರ್ಭಿಣಿಯರು ಎಂದು ನೋಡದೇ ಲಾಠಿ ಪ್ರಹಾರ ಮಾಡಲಾಗಿದೆ ಎಂಬ ಆರೋಪ ಪೊಲೀಸರ ಮೇಲಿದೆ. ಪೊಲೀಸರು ಎಂದರೆ ರಾಕ್ಷಸರ ಅಪರಾವತಾರ ಎನ್ನುವ ಮಟ್ಟಿಗೆ ಜನರು ಆಕ್ರೋಶಭರಿತರಾಗಿದ್ದಾರೆ. ಎಲ್ಲವೂ ನಿಜ, ಆದರೆ ಒಂದರೆಕ್ಷಣ ಚಿಂತನೆ ನಡೆಸಿದರೆ ‘ಪೊಲೀಸರು ಬೇಕೆಂದೇ ಇದನ್ನು ಮಾಡಿದ್ದೆ?’ ಎನ್ನುವ ಪ್ರಶ್ನೆಗೆ ಉತ್ತರ ಪದರಪದರವಾಗಿ ತೆರೆದುಕೊಳ್ಳುತ್ತದೆ.

   ಪ್ರತಿಯೊಂದು ‘ಸಂದರ್ಭ’ಕ್ಕೂ ವಿವಿಧ ದೃಷ್ಟಿಕೋನಗಳಿರುತ್ತವೆ. ಅವುಗಳನ್ನು ಗಮನಿಸದೇ ಕೇವಲ ಒಂದು ಸಮೂಹದ ಅಭಿಪ್ರಾಯವನ್ನೇ ವ್ಯಾಪಕವಾಗಿ ಪ್ರಸಾರ ಮಾಡಿ, ಅದರ ಮತ್ತೊಂದು ಮಗ್ಗುಲನ್ನೇ ಮರೆಯುವುದು ವಿಪರ್ಯಾಸವೇ ಸರಿ. ಇಲ್ಲಿ ಆಗಿರುವುದೂ ಅದೇ ಎನ್ನಬಹುದು. ಏಕೆಂದರೆ ಪೊಲೀಸರು ವಿನಾಃಕಾರಣ ಲಾಠಿ ಚಾರ್ಜ್ ಮಾಡುತ್ತಾರೆಯೆ? ಅಥವಾ ಮಾಡುವ ಸಂಭವವಿರುತ್ತದೆಯೆ? ಇಂತಹ ಪ್ರಶ್ನೆಗಳು ನಮಗೆ ಅದೇ ಸಾಂದರ್ಭಿಕತೆಯ ಮತ್ತೊಂದು ಮಜಲಿನ ಅನಾವರಣಗೊಳಿಸುತ್ತವೆ.

   ಒಂದು ಗುಂಪು ಅಥವಾ ಸಮೂಹ ಪ್ರತಿಭಟನೆಗಿಳಿದಾಗ ಅಲ್ಲಿ ಹಿಂಸಾಚಾರ ಉಂಟಾಗಬಾರದು ಎನ್ನುವುದು ಎಲ್ಲರ ಆಶಯ. ಆದರೆ ಅದನ್ನೂ ಮೀರಿ ಕೆಲವೊಮ್ಮೆ ಅಹಿತಕರ ಘಟನೆಗಳು ನಡೆದುಬಿಡುತ್ತವೆ. ಅದು ಹಿಂಸಾಚಾರದ ರೂಪು ಪಡೆದುಕೊಳ್ಳುತ್ತದೆ. ಪರಿಸ್ಥಿತಿಯನ್ನು ಹತೋಟಿಗೆ ತರುವುದು ಕಷ್ಟವಾಗಿಬಿಡುತ್ತದೆ. ಅಂತಹ ಸಂದರ್ಭಗಳಲ್ಲಿ ಪೊಲೀಸರು ಜನರಲ್ಲಿ ವಿನಂತಿ ಮಾಡಿಕೊಂಡರೆ ರೊಚ್ಚಿಗೆದ್ದ ಜನರು ಕೇಳುತ್ತಾರೆಯೆ? ಆಗ ಕಾನೂನಿನ ಪರಿಧಿಯೊಳಗೇ ಲಾಠಿ ಚಾರ್ಜ್ ನಡೆಸಲಾಗುತ್ತದೆ. ಆ ವೇಳೆಯಲ್ಲಿ ದೈಹಿಕವಾಗಿ ಸಮರ್ಥರಾಗಿರುವವರನ್ನು ಹುಡುಕಿ ಹೊಡೆಯಬೇಕು ಎಂದು ಯೋಚಿಸುವುದು ಹಾಸ್ಯಾಸ್ಪದ ಎನಿಸುವುದಿಲ್ಲವೆ? ಏಟು ಬಿದ್ದಾಗಲಾದರೂ ಗುಂಪು ಚದುರಿ ಪರಿಸ್ಥಿತಿ ಹತೋಟಿಗೆ ಬರಬಹುದು ಎಂಬುದೊಂದು ಲೆಕ್ಕಾಚಾರ.

   ಇದರರ್ಥ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಅನ್ನು ಸಮರ್ಥಿಸಿಕೊಳ್ಳುವುದಲ್ಲ. ಬದಲಿಗೆ ಇಂತಹ ಘಟನೆಗಳನ್ನು ಈ ರೀತಿಯಲ್ಲೂ ಯೋಚಿಸಬಹುದಲ್ಲ ಎನ್ನುವುದಾಗಿದೆ. ಅದೇನೆ ಇದ್ದರೂ ಅನ್ಯಾಯವಾದಾಗ ಜನರ ಭಾವನೆಗಳು ಕಲಕುತ್ತವೆ. ನ್ಯಾಯಕ್ಕಾಗಿ ಮನಸ್ಸು ಹಾತೊರೆಯುತ್ತದೆ. ಅಂತಹ ಸಮಯದಲ್ಲಿ ಜನರಿಗೂ, ಪೊಲೀಸರಿಗೂ ಸಂಯಮ ಇರಬೇಕು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s