ಸೆ.2ರಂದು ಸ್ತಬ್ಧವಾಗಲಿದೆ ಭಾರತ

Bharath-Bandh

ಕೇಂದ್ರ ಸರ್ಕಾರ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುವ ನಿರ್ಣಯ ಕೈಗೊಂಡಿದೆಯೆ? ಹೀಗೊಂದು ಪ್ರಶ್ನೆ ಹುಟ್ಟಲು ಕಾರಣ ಕೇಂದ್ರ ಸರ್ಕಾರದ ನಡೆಯೇ ಹೊರತು ಬೇರೇನಲ್ಲ. ಅಧಿಕಾರಕ್ಕೆ ಬಂದಾಗಿನಿಂದ ಕಾರ್ಮಿಕರ ಬದುಕಿನ ಜೊತೆ ಚೆಲ್ಲಾಟಕ್ಕಿಳಿದಂತೆ ವರ್ತಿಸುತ್ತಿರುವ ಮೋದಿ ಸರ್ಕಾರ ಅಸಲಿಗೆ ಮಾಡಲು ಹೊರಟಿರುವುದಾದರೂ ಏನು ಎಂಬುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ದಿನನಿತ್ಯ ಏರುತ್ತಿರುವ ಸಾಮಗ್ರಿಗಳ, ಆಹಾರವಸ್ತುಗಳ ಬೆಲೆಗಳನ್ನು ಗಮನಿಸಿದರೆ ಕಾರ್ಮಿಕನೋರ್ವ ಪಡೆಯುತ್ತಿರುವ ವೇತನ ಯಾತಕ್ಕೂ ಸಾಲದು. ಇದನ್ನು ಪ್ರಮುಖವಾಗಿರಿಸಿಕೊಂಡು ಕಾರ್ಮಿಕ ಸಂಘಟನೆಗಳು ಈ ಹಿಂದೆ ಹಲವು ಬಾರಿ ವೇತನ ಪರಿಷ್ಕರಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಆದರೆ ಇದನ್ನು ಕಿವಿಗೇ ಹಾಕಿಕೊಳ್ಳದ ಕೇಂದ್ರದ ವರ್ತನೆಯೇ ಸೆ.2ರಂದು ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಬಂದ್‍ಗೆ ಕರೆ ಕೊಡುವಂತೆ ಮಾಡಿತು. ಯಾವಾಗ ಕಾರ್ಮಿಕರು ಒಟ್ಟಾಗಿ ಧ್ವನಿ ಏರಿಸಬೇಕೆಂದು ನಿರ್ಧರಿಸಿದರೋ, ತಕ್ಷಣ ಎಚ್ಚೆತ್ತುಕೊಂಡ ಮೋದಿ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ, “ಕೇಂದ್ರ ಸರ್ಕಾರದ ಕುಶಲಕರ್ಮಿಗಳಲ್ಲದ ಕೃಷಿಯೇತರ ಕಾರ್ಮಿಕರ ಕನಿಷ್ಠ ದಿನಗೂಲಿಯನ್ನು ರೂ.350ಕ್ಕೆ ಹೆಚ್ಚಿಸಲಾಗುವುದ” ಎಂದು ಹೇಳಿಕೆ ನೀಡಿದ್ದಾರೆ.

ದಿನಕ್ಕೆ ಕನಿಷ್ಠ ವೇತನ ರೂ.350 ಹೆಚ್ಚಾದರೆ, ತಿಂಗಳಿಗೆ 9,100 ರೂ. ದೊರೆತಂತಾಗುತ್ತದೆ. ಆದರೆ ಕಾರ್ಮಿಕ ಸಂಘಟನೆಗಳು ಅಧ್ಯಯನ ನಡೆಸಿ ತಮಗೆ ನೀಡಬೇಕೆಂದು ಈ ಹಿಂದೆ ಕೋರಿದ್ದ ವೇತನ ರೂ.15 ಸಾವಿರ. ಆದರೆ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಕೇಂದ್ರ ಒಪ್ಪಿಗೆ ಸೂಚಿಸಿದ ಬಳಿಕ ಸಂಘಟನೆಗಳು ತಮ್ಮ ಬೇಡಿಕೆಯನ್ನು ತಿಂಗಳಿಗೆ ಕನಿಷ್ಠ ರೂ.18 ಸಾವಿರಕ್ಕೆ ಏರಿಸಿದ್ದವು. ಇದೀಗ ರೂ.350 ವೇತನ ಏರಿಸಿರುವ ಕೇಂದ್ರ ಸರ್ಕಾರ ಕಾರ್ಮಿಕರ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿದೆ, ಆದರೆ ಕಾರ್ಮಿಕ ಸಂಘಟನೆಗಳು ಇದಕ್ಕೆ ಸೊಪ್ಪು ಹಾಕಿಲ್ಲ.

ಆರ್‍ಎಸ್‍ಎಸ್‍ನ ಸಹ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘ, ತನ್ನವರನ್ನು ಬಿಟ್ಟುಕೊಡಲಾಗದೇ ಮುಷ್ಕರದಿಂದ ಹಿಂದೆ ಸರಿದಿದೆ ಎನ್ನುವುದೊಂದು ಬಿಟ್ಟರೆ ದೇಶಾದ್ಯಂತದ ಕಾರ್ಮಿಕ ಸಂಘಟನೆಗಳು ಸೆ.2ರಂದು ತಮ್ಮ ಬಲ ಪ್ರದರ್ಶನ ಮಾಡಿ, ಕೇಂದ್ರಕ್ಕೆ ಚುರುಕು ಮುಟ್ಟಿಸಲಿದ್ದಾರೆ. ಈ ಹಿಂದೆ ಕಾರ್ಮಿಕರ ಭವಿಷ್ಯ ನಿಧಿಯ ವಿಷಯದಲ್ಲಿ ಕೈಯ್ಯಾಡಿಸಲು ಹೋಗಿ ಕೇಂದ್ರ ಸರ್ಕಾರ ಮುಖಭಂಗ ಅನುಭವಿಸಿದ್ದು ಕಣ್ಣಮುಂದೇ ಇದೆ. ಇದೀಗ ಮತ್ತೊಮ್ಮೆ ಕಾರ್ಮಿಕರು ತಮ್ಮ ಅಸಮಾಧಾನವನ್ನು ಹೊರಹಾಕಲಿದ್ದಾರೆ. ಮೋದಿ ಈ ಕುರಿತು ಏನು ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.

Advertisements

Votes over Sports!

Haryana-Sports-Minister-Anij-Vij

When twitter flared up over Piers Morgan’s comments about India’s bad Olympics performance, we all put up a brave face despite knowing the obvious glaring lapses in sports funding and infrastructure in India.  However, Haryana sports minister Anil Vij’s vote garnering act has reassured us that votes, not sports remains the top priority for the Modi regime.

The Haryana Sports Minister Anij Vij showed his desperation for votes when he donated Rs. 50 lakh from his discretionary fund to the Dera Sacha Sauda. The organization’s sports league – the Tiranga Rumal Chhoo, promises to revive the “Indian culture”.

One might think a case for sports could be made here, but none of the games played at the event are actually played at a national or at an international level. In fact these games were all created by Saint Gurmeet Ram Rahim Singh himself. No wonder our sportspersons compete with the bare minimum facilities, our politicians are more interested in votes, than sports.

ರೈತರ ಬಾಳಲ್ಲಿ ‘ಭಾಗ್ಯೋದಯ’!

Green-Revolution
ಕೃಷಿ ಎಂದರೆ ಅದು ಪ್ರಾಕೃತಿಕ ಬದಲಾವಣೆಯ ಮೇಲೆ ಅವಲಂಬಿತವಾದದ್ದು. ಒಮ್ಮೊಮ್ಮೆ ಅಗತ್ಯಕ್ಕಿಂತಲೂ ಹೆಚ್ಚಿನ ಮಳೆ ಬಂದರೆ, ಇನ್ನೂ ಕೆಲವೊಮ್ಮೆ ಮಳೆಯ ಕುರುಹೇ ಇರುವುದಿಲ್ಲ. ಪರಿಸರದ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಪ್ರಕೃತಿಯು ಮಾನವರ ಮೇಲೆ ಸೇಡು ತೀರಿಸಿಕೊಳ್ಳಲು ಕಂಡುಕೊಂಡ ದಾರಿ ಇದೇನೋ ಎನ್ನುವ ಸಂಶಯವೂ ಕೆಲವೊಮ್ಮೆ ಕಾಡದಿರುವುದಿಲ್ಲ. ಆದರೆ ಯಾವುದೇ ರೀತಿಯ ವೈಪರಿತ್ಯ ಎದುರಾದರೂ ಸಮರ್ಥವಾಗಿ ನಿರ್ವಹಿಸಲು ಕೃಷಿಕ ಸಿದ್ಧನಿರಬೇಕಾಗುತ್ತದೆ.
   ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎನ್ನಲು ಸಂತಸವಾಗುತ್ತದೆ. ಕೃಷಿಕರಿಗೆ ಮುಖ್ಯವಾಗಿ ಬೇಕಾಗುವುದು ನೀರು. ನೀರಿನ ಅಭಾವವಾಗದಂತೆ ನೋಡಿಕೊಂಡರೆ ಮಾತ್ರ ಬೆಳೆಯನ್ನು ಅಂದುಕೊಂಡಂತೆ ಬೆಳೆಯಬಹುದು. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ತಂದಿದ್ದೇ ‘ಕೃಷಿ ಭಾಗ್ಯ’! ರೈತರ ಸಮಸ್ಯೆಗಳನ್ನೆಲ್ಲ ಆಮೂಲಾಗ್ರವಾಗಿ ಪರಿಶೀಲಿಸಿ ತಜ್ಞ ಜಿ.ವಿ.ಕೆ ರಾವ್ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತು. ಸಮಿತಿ ವತಿಯಿಂದ ರೈತರ ಸಮಸ್ಯೆ ಪರಿಹಾರಕ್ಕಾಗಿ ಕೆಲವೊಂದು ಅಂಶಗಳನ್ನು ಕಂಡುಕೊಳ್ಳಲಾಯಿತು. ಅದರ ಪರಿಣಾಮವಾಗಿ ಹುಟ್ಟಿಕೊಂಡಿದ್ದೇ ‘ಕೃಷಿ ಭಾಗ್ಯ’. ಇದೀಗ ಕೃಷಿ ಭಾಗ್ಯವು ನಿಜಕ್ಕೂ ಸಾವಿರಾರು ರೈತರ ಬದುಕಿನಲ್ಲಿ ಭಾಗ್ಯೋದಯವನ್ನುಂಟುಮಾಡಿದೆ.
   ಪ್ರಾರಂಭಿಕ ಹಂತದಲ್ಲಿ ನೈಸರ್ಗಿಕ ಕಾರಣಗಳಿಂದಾಗಿ ನಾನಾ ರೀತಿಯ ತೊಡಕುಗಳು ಎದುರಾದರೂ, ಕ್ರಮೇಣ ಚೇತರಿಕೆ ಕಂಡಿತು. ಇಂದು 80 ಸಾವಿರಕ್ಕೂ ಅಧಿಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ. ನಾಡಿನಾದ್ಯಂತ ‘ಕೃಷಿ ಭಾಗ್ಯ’ದ ಯಶೋಗಾಥೆಗಳು ನಮಗೆ ದೊರೆಯುತ್ತವೆ. ಉತ್ತರ ಕರ್ನಾಟಕದ ರೈತರಿಗಂತೂ ಕೃಷಿ ಹೊಂಡಗಳಿಂದಾದ ಒಳಿತು ಹೇಳತೀರದ್ದು. ಹೀಗೆ ಸಿದ್ದರಾಮಯ್ಯ ಸರ್ಕಾರ ‘ಕೃಷಿ ಭಾಗ್ಯ’ದ ಮೂಲಕ ರೈತರ ಬದುಕಿನಲ್ಲಿ ಹಸಿರು ಕ್ರಾಂತಿ ಮಾಡಿದೆ.

Karnataka left low and dry, in Modi regime

Modi-has-left-Karnataka-low-and-dry

The Modi government has left Karnataka, high and dry in more ways than one. For all the talk of farmer welfare, the center is yet to release Rs. 288 crore pending to Karnataka government which is most likely to go towards rehabilitating drought-hit farmers, since July, 2016.

Karnataka has the second highest arid land in the county, and as such is vulnerable to drought. Keeping this in mind, the Karnataka government made preemptive arrangements to offset drought induced hardships. The government made use of the resources at its disposal is MNREGA to create jobs for the drought-hit farmers. They have created around 475.50 lakh person days under MNREGA till September, 2016.

This, while the central government still refuses to acknowledge the drought affected regions across India as such, as indicted by the Supreme Court of India. The Karnataka government has now rightfully reached out to the central government to pay their share of the excess expenditure incurred. Now it needs to be seen whether the Modi government is up to fulfilling its promise to the farmers?

ಮಹಾದಾಯಿ ಮತ್ತು ಮೋದಿ ‘ಮಹಾ’ಮೌನ

modi
ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ತೀರ್ಪು ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಮಾಡಿದ್ದು ಕಣ್ಣಮುಂದೇ ಇದೆ. ಉತ್ತರ ಕರ್ನಾಟಕದ ಮಂದಿ ಕುಡಿಯುವ ನೀರಿಗಾಗಿ ಪರದಾಡಿ, ಪಡಬಾರದ ಪಡಿಪಾಟಲನ್ನೆಲ್ಲ ಅನುಭವಿಸಿಬಿಟ್ಟಿದ್ದಾರೆ. ಪಕ್ಕದ ರಾಜ್ಯ ಗೋವಾ ನೀರಿನ ಮೇಲೆ ಹಕ್ಕುಚಚಲಾವಣೆಗೆ ನಿಂತುಬಿಟ್ಟಿದೆ. ಮಹಾದಾಯಿ ಪ್ರಕರಣ ಹಕ್ಕುಚಲಾವಣೆಗಿಂತ ಹೆಚ್ಚಿನದಾಗಿ ಮಾನವೀಯ ನೆಲೆಗಟ್ಟಿನಲ್ಲಿ ವಿಶ್ಲೇಷಿಸಬೇಕಾದ್ದು ಎನ್ನುವ ಸತ್ಯ ಗೊತ್ತಿದ್ದೂ, ಗೊತ್ತಿಲ್ಲದಂತೆ ನಾಟಕವಾಡುತ್ತಿದೆ.
ಉತ್ತರ ಕರ್ನಾಟಕದ ಜನರು ಹನಿ ಹನಿ ನೀರಿಗೂ ಪರಿತಪಿಸುತ್ತಿದ್ದಾರೆ. ಅಲ್ಲೆಲ್ಲೋ ವ್ಯರ್ಥವಾಗಿ ಹರಿದುಹೋಗುವ ನೀರನ್ನು ನಾವು ಕುಡಿಯಲು ಬಳಸಿಕೊಳ್ಳುತ್ತೇವೆ ಎನ್ನುವ ಮಾತಿಗೆ ಬೆಲೆ ಇಲ್ಲವೆಂದು ಕೋರ್ಟ್ ತೀರ್ಪಿನಿಂದಾಗಿ ಜನ ಅರಿತಿದ್ದಾರೆ. ಇನ್ನು ಈ ಸಮಸ್ಯೆಗೆ ಪರಿಹಾರವೇನು ಎಂದು ಯೋಚಿಸಿದಾಗಲೆಲ್ಲ ಉತ್ತರವೆಂಬಂತೆ ಕಂಡುಬರುವವರು ಪ್ರಧಾನಿ ನರೇಂದ್ರ ಮೋದಿ.
ಹೌದು, ಪ್ರಧಾನಿ ನರೇಂದ್ರ ಮೋದಿ ಮಹಾದಾಯಿ ವಿಷಯದಲ್ಲಿ ಮಧ್ಯ ಪ್ರವೇಶಿಸಲಿ ಎನ್ನುವುದು ಕನ್ನಡಿಗರ ಆಶಯ. ಆದರೆ ಇದಕ್ಕೆ ಪ್ರಧಾನಿ ಮೋದಿ ತಮ್ಮ ದಿವ್ಯ ಮೌನದ ಉತ್ತರ ನೀಡುತ್ತಿದ್ದಾರೆ. ಮೋದಿ ಮಧ್ಯಪ್ರವೇಶದಿಂದ ಕುಡಿಯಲು ನೀರಿಲ್ಲದೇ ದಿನ ದಿನ ಬವಣೆ ಪಡುತ್ತಿರುವ ಜನರ ಕಷ್ಟ ನೀಗುತ್ತದೆ. ಈ ಸತ್ಯ ಸ್ವತಃ ಮೋದಿಗೂ ಗೊತ್ತಿಲ್ಲದಿಲ್ಲ. ಆದರೆ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಮೋದಿ ಮೌನ ವಹಿಸಿದ್ದಾರಾ ಎನ್ನುವ ಪ್ರಶ್ನೆ ಇದೀಗ ಎಲ್ಲರದ್ದಾಗಿದೆ.
ಫೆಬ್ರವರಿ, 2017ರಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯಲಿದೆ. ಒಂದು ವೇಳೆ ಮೋದಿ ಕರ್ನಾಟಕಕ್ಕೆ ನೀರು ಕೊಡಿಸಿದರೆ ಗೋವಾದವರು ಕೋಪ ಮಾಡಿಕೊಂಡು ಪಕ್ಷವನ್ನು ತಳ್ಳಿಹಾಕಿದರೆ? ಕರ್ನಾಟಕದಲ್ಲಿ ಜನ ನೀರಿಲ್ಲದೇ ಸತ್ತರೂ ಪರವಾಗಿಲ್ಲ, ರಾಜಕೀಯ ಮೇಲಾಟವೇ ಮುಖ್ಯ ಎನ್ನುವ ನಿಲುವನ್ನು ಮೋದಿ ತಾಳಿದಂತಿದೆ. ಅವರ ಮೌನ ಕೂಡ ಇದನ್ನು ಪುಷ್ಠೀಕರಿಸುತ್ತದೆ. ಇತ್ತ ಕರ್ನಾಟಕದಲ್ಲಿ ಮೋದಿಯವರ ಮೇಲೆ ಒತ್ತಡ ತರಲು ಬಿಜೆಪಿ ಮೀನಮೇಷ ಎಣಿಸುತ್ತಿದೆ. ಕರ್ನಾಟಕದಿಂದ 17 ಬಿಜೆಪಿ ಸಂಸದರು ಆರಿಸಿಹೋಗಿದ್ದಾರೆ ಎನ್ನುವುದನ್ನು ಕೇಂದ್ರ ಮರೆತಂದಿದೆ. ರಾಜ್ಯ ಬಿಜೆಪಿ ಸಹ ಗಪ್‍ಚುಪ್ ಆಗಿ ಕೂತಿದೆ.
ರಾಜ್ಯದ ಹಿತದೃಷ್ಟಿ ಬಂದಾಗ ರಾಜಕೀಯ ಬದಿಗಿಡಬೇಕು ಎನ್ನುವ ಕನಿಷ್ಟ ಜ್ಞಾನವೂ ರಾಜ್ಯ ಬಿಜೆಪಿಗೆ ಇಲ್ಲವಾಯಿತೇ? ಇನ್ನು ಪ್ರಧಾನಿ ಮೋದಿಗೆ ಜೀವಬೆಲೆಗಿಂತ ರಾಜಕೀಯವೇ ಮುಖ್ಯವಾಗಿದೆ. ಮಹಾದಾಯಿ ಎಂಬ ನಮ್ಮೆಲ್ಲರ ಕೂಗು ಮುಗಿಲುಮುಟ್ಟಿದೆ, ಅದು ಆಗಸವನ್ನು ಬಡಿದೆಬ್ಬಿಸಿ ಭೋರ್ಗರೆವ ಮಳೆಯಾಗಿ ಕೆಳಗಿಳಿಯಬೇಕಷ್ಟೆ.

To Love thy country, hate thy neighbor?

Ramya

We have seen a deluge of hate crimes in the country under the stewardship of the BJP. The prime motivator of most of these crimes is not love for the country, but for the neighbor. But what about the people inhabiting the neighboring country? This is precisely the point Ramya was trying to raise when she said that the people in Pakistan were in fact, nice.

In fact, the people who inhabit the county of Pakistan share a long common history with India. Do we hate Ghulam Ali, Nusrat Fateh Ali Khan or Reshma because of the “P” word? In fact, Indians have poured out their love for Pakistani actors, singers, poets and playwrights for so many years now.

Above all, the common historical, cultural and linguistic ties shared by people of both countries is a source of close ties. Eminent playwright Atamjit Singh has stated in support of Ramya’s statement, that the land of birthplace of Guru Nanak Singh and Baba Farid could not be hell for Punjabis. And rightly so.

Logically speaking, hate only profits the businessmen of votes who call themselves desh ke sevaks. Honest politicians, spread love, not hate.

Yes Minister!

Shivraj-Singh

The logic of a minister’s personal security in India breaches all standards of logic and appreciation for human rights or dignity. Madhya Pradesh Chief Minister Shivraj Singh Chouhan has once again proved, that when it comes to his personal security, which includes preventing getting his feet wet, all is fair!

Whether it is making hapless aides hold his sneakers while he walks through the mud making earnest expressions at the cameramen or making his security carry him across ankle-deep water, it is all in the interest of the minister’s security.

The Twitter has obviously once again erupted in guffaws. One user says, “#Flood or no flood, #Kursi position must remain intact.” While another quipped at him being lifted by security men, “Shivraj Singh Chauhan doing aerial survey of flood affected areas”.

And while the hearty laugh at the minister’s buffoonery was fully justified. The saddest part is, the police personnel will continue to be forced to say in the face of every disaster, “yes minister!”

I came, I saw, I invested in Karnataka

It-Investment (1)

Karnataka’s potential for driving investments grows like the ABVP’s potential for violence and intolerance, in leaps and bounds. Just when the state was touching down on another one of its performance high points, of being the most favored IT investment destination, the ABVP in Karnataka hit the headlines with a new performance high point, of raising yet another hollow protest on the grounds of intolerance!

And while the naysayers and detractors will carry on protesting, the state of Karnataka continues to make headlines with news of it accounting for nearly a fourth of the total investment of the IT sector during 2015-16.

Once again, Bengaluru has made us proud by contributing to over one third of the country’s $108 billion dollar IT exports last year. These investment laurels, leave behind Gujarat as the second ranker, making Bengaluru the de facto start-up capital of the country and Karnataka the top contender for investments.

BJP’s cow terror, doesn’t spare its own!

BJP’s-cow-terror,-doesn’t-spare-its-own

The Prime Minister has once again delivered a stellar speech. But like all his other promises, the one thing which remains constant in all things uttered by him, is the lack of any real action. Shortly after his speech against cow vigilantism, another shocking incident of ‘killing over cow’ has emerged. This time, the victim is a BJP worker.

Praveen Poojary was beaten to death by Vishwa Hindu Parishad (VHP) and Bajrang Dal activists in Udupi, Karnataka after they found him transporting two cows in his vehicle. The takeaway from this episode is, those from the lower echelons of society, are vulnerable to BJP’s cow terror, even when they are affiliated to the party itself.

Well, in one way the ruling BJP has brought about social equality. All weaker sections are equally vulnerable to its cow terror. In the most perverse and sadistic way, BJP has surely brought about social equality.

ಕಮಲದಳಗಳ ಮೇಲೆ ‘ಅಪ್ಪಂದಿರ’ ಹೊಡೆದಾಟ!

For-Blog (1)
ಅತ್ತ ಯಡಿಯೂರಪ್ಪ, ಇತ್ತ ಈಶ್ವರಪ್ಪ.. ಮಧ್ಯ ಸಿಲುಕಿರುವ ಬಿಜೆಪಿಯದು ‘ಯಪ್ಪಾ ಯಪ್ಪಾ’ ಎನ್ನುವ ಆರ್ತನಾದ. ರಾಜ್ಯ ಬಿಜೆಪಿಯ ನಾಯಕರಿಬ್ಬರ ಪರಸ್ಪರ ಕೆಸರೆರಚಾಟವನ್ನು ಕಮಲ ಪಾಳಯದ ವಿಧೇಯ ವಿದ್ಯಾರ್ಥಿಗಳು ಕಣ್ ಕಣ್ ಬಿಟ್ಟು ನೋಡುತ್ತಿದ್ದಾರೆ. ಯಾರ ಪರ ಬ್ಯಾಟ್ ಮಾಡುವುದು ಎಂದರಿಯದೆ ತಲೆಯನ್ನು ಪರ ಪರ ಕೆರೆದುಕೊಳ್ಳುತ್ತಿದ್ದಾರೆ.
   ಬಿಜೆಪಿಯ ಒಳಾಂಗಣದಲ್ಲಿ ಈಶ್ವರಪ್ಪ ಮತ್ತು ಯಡಿಯೂರಪ್ಪನದು ಹಾವು-ಮುಂಗುಸಿ ಸಂಬಂಧ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದೇ ತಡ ಈಶ್ವರಪ್ಪ ತಕ ತಕ ಕುಣಿದು ಉಸ್ಸೆಂದು ಕೂತಿದ್ದರು. ಬಿಎಸ್‍ವೈ ತಮ್ಮವರನ್ನೇ ಅಂದರೆ ತಮ್ಮೊಡನೆ ಕೆಜೆಪಿಯಲ್ಲಿ ಗುರುತಿಸಿಕೊಂಡವರನ್ನೇ ರಾಜ್ಯ ಬಿಜೆಪಿಯ ಆಯಕಟ್ಟಿನ ಸ್ಥಾನಗಳಲ್ಲಿ ಕುಳ್ಳಿರಿಸಿದರು. ಈಗಾಗಲೇ ಬಿಜೆಪಿಯಲ್ಲಿ ಔಟ್‍ಡೇಟೆಡ್ ಆಗಿರುವ ಈಶ್ವರಪ್ಪನವರ ಬೆಂಬಲಿಗರಿಗೆ ನಿರಾಶೆಯಾದದ್ದೇ ತಡ, ಈಶ್ವರಪ್ಪ ಬಹಿರಂಗವಾಗಿ ಯಡಿಯೂರಪ್ಪನವರ ನಡೆಯನ್ನು ಖಂಡಿಸಿದರು. ಇದೀಗ ಯಡಿಯೂರಪ್ಪನವರಿಗೆ ಹೇಗಾದರೂ ಸರಿ ಬುದ್ಧಿ ಕಲಿಸಬೇಕು ಎಂದು ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಎಂಬ ಕೂಸಿಗೆ ಜನ್ಮ ನೀಡಿದ್ದಾರೆ ಈಶ್ವರಪ್ಪ.
   ಹಾಗಾದರೆ ರಾಜ್ಯ ಬಿಜೆಪಿ ಒಡೆದು ಹೋಳಾಗಿದೆಯೆ? ನಿಜಾರ್ಥದಲ್ಲಿ ಹೌದು, ಆದರೆ ತೋರಿಕೆಗೆ ಅದು ಒಡೆದುಹೋಗದಂತೆ ತೋರಿಸಿಕೊಡಲು ತೇಪೆಹಚ್ಚುವ ಕೆಲಸವನ್ನು ಒಂದಷ್ಟು ಜನ ಮಾಡುತ್ತಿದ್ದಾರೆ. ಆದರೆ ಅದು ಕೇವಲ ತೋರಿಕೆಯಾಗಬಹುದೇ ಹೊರತು ಮನಸ್ಸಿನಾಳದಿಂದ ‘ಅಪ್ಪಂದಿರಿಬ್ಬರು’ ಒಂದಾಗಲು ಸಾಧ್ಯವೇ ಇಲ್ಲ. ಅದು ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಸಾಬೀತಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ಬಿಜೆಪಿಯ ದಳಗಳು ಉದುರುವ ಎಲ್ಲಾ ಲಕ್ಷಣಗಳು ಸದ್ಯದ ಪರಿಸ್ಥಿತಿಯಲ್ಲಿದೆ.