ಸ್ಟಾರ್ಟ್‍ಅಪ್‍ಗಳ ಸ್ವರ್ಗವಿದು ಚಂದನದ ಬೀಡು

Startup_Strategy

ಜಗತ್ತಿನ ಬೆಳವಣಿಗೆಯ ವೇಗ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಜೊತೆಗೆ ಜನರ ಮಾನಸಿಕತೆಯೂ ಸಹ. ಒಳ್ಳೆಯ ನೌಕರಿ ಹಿಡಿದು, ಸಂಬಳ ಪಡೆದು, ಆರಾಮವಾಗಿರೋಣ ಎನ್ನುವ ಯುವಕರ ಮನಃಸ್ಥಿತಿ ಬದಲಾಗಿದೆ. ‘ನಾನು ಒಬ್ಬ ಉದ್ಯಮಿಯಾಗಬೇಕು, ಹೊಸತೇನನ್ನೋ ಮಾಡಬೇಕು’ ಎನ್ನುವ ಕನಸುಗಳು ಹೆಚ್ಚುತ್ತಿವೆ. ಅಂತಹ ಕನಸುಗಳನ್ನು ಸಾಕಾರಗೊಳಿಸಲು ಇದೀಗ ಕರ್ನಾಟಕ ಹೆಬ್ಬಾಗಿಲನ್ನೇ ತೆರೆದಿದೆ. ಭಾರತದಲ್ಲೇ ಮೊದಲ ಬಾರಿಗೆ ‘ಸ್ಟಾರ್ಟ್‍ಅಪ್ ಸೆಲ್’ ಕನ್ನಡನೆಲದಲ್ಲಿ ಆರಂಭಗೊಂಡಿದೆ.

   ನೂತನ ಉದ್ಯಮಿಗಳನ್ನು (ನವೋದ್ಯಮಿಗಳನ್ನು) ಪ್ರೋತ್ಸಾಹಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ‘ಸ್ಟಾರ್ಟ್‍ಅಪ್ ಸೆಲ್’ ಅನ್ನು ಸ್ಥಾಪಿಸುವ ಮೂಲಕ 2020ರೊಳಗೆ ರಾಜ್ಯದಲ್ಲಿ ಹೊಸದಾಗಿ 20 ಸಾವಿರ ಉದ್ಯಮಗಳನ್ನು ಆರಂಭಿಸುವ ಗುರಿ ಹೊಂದಿದ್ದಾರೆ. ವಿವಿಧ ಹಣಕಾಸು ಸಂಸ್ಥೆಗಳ ಮೂಲಕ 2 ಸಾವಿರ ಕೋಟಿ ರೂ. ಒದಗಿಸಲಾಗುತ್ತಿದೆ. ಅದರಲ್ಲಿ 400 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರವೇ ನೀಡಲಿದೆ.

   ಉದ್ಯಮ ಸ್ಥಾಪಿಸಲು ನ್ಯಾಸ್ಕಾಂ ಅಥವಾ ಇನಿತರ ಸಂಸ್ಥೆಗಳ ಒಪ್ಪಿಗೆ ಪಡೆಯಲು ಪರದಾಡುವ ಬದಲು ಇನ್ನುಮುಂದೆ ನೇರವಾಗಿ ತಿತಿತಿ.sಣಚಿಡಿಣuಠಿ.ಞಚಿಡಿಟಿಚಿಣಚಿಞಚಿ.gov.iಟಿ ಗೆ ಭೇಟಿ ನೀಡಿ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಈ ಮೂಲಕ ನವೋದ್ಯಮಿಗಳು ಹಲವು ಸೌಲಭ್ಯಗಳನ್ನು ಪಡೆಯಬುದಾಗಿದೆ. ಐಬಿಎಂ, ಡಿಜಿಟಲ್ ಓಶನ್, ಅಮೇಜಾನ್ ವೆಬ್ ಸರ್ವೀಸ್, ಮೈಕ್ರೋಸಾಫ್ಟ್ ಬಿಝ್‍ಸ್ಟಾರ್ಕ್ ಹಾಗೂ ಕಿಯೋನಿಕ್ಸ್‍ನಿಂದ ರಿಯಾಯಿತಿ ದರದಲ್ಲಿ ಕ್ಲೌಡ್ ತಂತ್ರಜ್ಞಾನ ದೊರೆಯಲಿದೆ. ಎಂ-ಗೇಜ್, ನೊಲಾರಿಟಿ, ಎಕ್ಸೋಟೆಲ್, ಓಝೋನ್‍ಟೆಲ್, ಬಿಎಸ್‍ಎನ್‍ಎಲ್, ವೊಡಾಫೋನ್, ಏರ್‍ಟೆಲ್‍ಗಳಿಂದ ರಿಯಾಯಿತಿ ದರದಲ್ಲಿ ದೂರವಾಣಿ ಹಾಗೂ ಅಂತರ್ಜಾಲ ಸೌಲಭ್ಯ ಸಿಗಲಿದೆ. ಕ್ಯಾನ್‍ವಾಸ್‍ಫ್ಲಿಪ್, ಫ್ಲೆಕ್ಸಿಂಗ್ ಐಟಿ, ಹೆಡ್‍ಸ್ಪಿನ್, ಏರೋಸ್ಪೈಕ್ ಕಂಪನಿಗಳಿಂದ ಡೀಬಗ್ಗಿಂಗ್, ಟೆಸ್ಟಿಂಗ್ ಹಾಗೂ ಸಾಫ್ಟ್‍ವೇರ್ ಟೂಲ್‍ಗಳ ಸೌಲಭ್ಯ; ಸಿಟ್ರಸ್, ರೇಜರ್‍ಪೇ, ಇನ್‍ಸ್ಟಾಮೊಜೊ ಹಾಗೂ ಪ್ರಾಫಿಟ್‍ಬುಕ್ಸ್‍ನಿಂದ ಪೇಮೆಂಟ್ ಗೇಟ್‍ವೇ ವ್ಯವಸ್ಥೆ; ಕಿಟ್ವೆನ್ ಫಂಡ್, ಕರ್ಸ್‍ವೆನ್ ಫಂಡ್, ಸ್ಟಾರ್ಟ್‍ಅಪ್ ಕರ್ನಾಟಕ, ಎವಿಜಿಸಿ ವೆಂಚ್ ಫಂಡ್ ಸೇರಿದಂತೆ ಇತರ ವೇದಿಕೆಗಳ ಮೂಲಕ ಹಣಕಾಸು ನೆರವು; ನ್ಯಾಸ್ಕಾಂ, ಕಿಯೋನಿಕ್ಸ್ ಹಾಗೂ ರಾಜ್ಯ ಸರ್ಕಾರದ ನಾನಾ ಇನ್‍ಕ್ಯುಬೇಟರ್ ಕೇಂದ್ರಗಳ ಮೂಲಕ ಸ್ಟಾರ್ಟ್‍ಅಪ್ ಉದ್ಯಮಕ್ಕೆ ನೆರವು; ಮಾರುಕಟ್ಟೆ ವಿಸ್ತರಣೆ ಹಾಗೂ ಪೇಟೆಂಟ್‍ಗೆ ಸಹಾಯಧನ, ತೆರಿಗೆ ವಿನಾಯಿತಿ ಸೇರಿದಂತೆ ಹಲವು ಸೌಲಭ್ಯಗಳು ನವೋದ್ಯಮಿಗಳನ್ನು ಬರಮಾಡಿಕೊಳ್ಳಲಿವೆ.

   ಪ್ರತಿತಿಂಗಳು ಸಭೆ ನಡೆಸಿ ಉದ್ಯಮಿಗಳು ತಮ್ಮ ಅನುಭವ, ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಇದರಲ್ಲಿ ಖುದ್ದು ಸಚಿವರು ಹಾಗೂ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಒಟ್ಟಿನಲ್ಲಿ ಕರ್ನಾಟಕವು ಹೊಸಬಗೆಯ ಚಿಂತನೆಗಳಿಗೆ, ಕ್ರಾಂತಿಕಾರಕ ಹೆಜ್ಜೆಗಳೆಡೆಗೆ ದಾಪುಗಾಲಿಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನಾಡಿನ ಪತಾಕೆ ಹಾರಾಡುತ್ತಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s