ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಡುತ್ತಿರುವ ತನ್ವೀರ್ ಸೇಠ್

540403

ಸರ್ಕಾರವೊಂದು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ಅದರ ಆಧಾರ ಸ್ಥಂಭಗಳಾದ ಸಚಿವರು ಸಮರ್ಥವಾಗಿರಬೇಕಾಗುತ್ತದೆ. ಪ್ರತಿಯೊಂದು ವಿಭಾಗದ ಸಚಿವರೂ ಜನಪರವಾದ ಆಡಳಿತ ನೀಡಿದಲ್ಲಿ ಸರ್ಕಾರವು ಜನರ ಪ್ರೀತಿಗೆ ಪಾತ್ರವಾಗುತ್ತದೆ. ರಾಜ್ಯದಲ್ಲಿ ಇದೀಗ ಆಡಳಿತದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನಡೆಯುತ್ತಿದೆ. ಸಂಪುಟ ಪುನಾರಚನೆ ಆಗುವ ಮೂಲಕ ಮತ್ತಷ್ಟು ಸಮರ್ಥರನ್ನು ಒಳಗೊಳ್ಳಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯನವರು ಸರ್ಕಾರವನ್ನು ಮತ್ತಷ್ಟು ಗಟ್ಟಿಮಾಡಿದ್ದಾರೆ.

   ಪ್ರಸ್ತುತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರು ತಮ್ಮ ಅರ್ಥಪೂರ್ಣ ಆಡಳಿತದ ಮೂಲಕ ಭರವಸೆ ಮೂಡಿಸಿದ್ದಾರೆ. ವಿದ್ಯಾರ್ಥಿಗಳ ನಾಡಿಮಿಡಿತವನ್ನು ಅರಿತು, ಶಿಕ್ಷಣ ಕ್ಷೇತ್ರದ ಅನಿವಾರ್ಯತೆ-ಅವಶ್ಯಕತೆಗಳಿಗನುಗುಣವಾಗಿ ಸ್ಪಂದಿಸುತ್ತಿರುವ ಅವರು, ಈಗಾಗಲೇ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ಸಚಿವಸ್ಥಾನದ ಬಿಗುವನ್ನು ತೋರಿಸಿಕೊಟ್ಟಿದ್ದಾರೆ. ಹೊಸ ಆಲೋಚನೆ, ಹೊಸತನಗಳಿಗೆ ತೆರೆದುಕೊಳ್ಳುವ ಮೂಲಕ ಹೊಸ ಸಾಧ್ಯತೆಗಳನ್ನು ತೋರಿಸಿಕೊಡುತ್ತಿದ್ದಾರೆ ತನ್ವೀರ್ ಸೇಠ್. ಅವುಗಳಲ್ಲಿ ಮೊನ್ನೆಯಷ್ಟೇ ಅವರು ಘೋಷಿಸಿದ ‘ತರಗತಿ ಭಾಗ್ಯ’ ಮಹತ್ತರವಾದದ್ದು.

   ಪ್ರತಿವರ್ಷವೂ ಸಹ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಸಾಂದರ್ಭಿಕ ಸಮಸ್ಯೆಗಳಿಂದಾಗಿ ಅನುತ್ತೀರ್ಣರಾಗುತ್ತಾರೆ. ಒಮ್ಮೆ ಅವರು ಅನುತ್ತೀರ್ಣರಾದರೆ ಪುನಃ ಅವರು ಪರೀಕ್ಷೆ ಬರೆಯುವವರೆಗಿನ ಕಾಲಾವಧಿ ಅವರನ್ನು ವಿಷಯಾಸಕ್ತರನ್ನಾಗುವಂತೆ ಮಾಡಿಬಿಡುತ್ತದೆ. ಖಾಸಗಿ ಮನೆಪಾಠಕ್ಕೆ ತೆರಳಿ ಓದಿಕೊಳ್ಳಬೇಕು ಅಥವಾ ಸ್ವತಃ ಅಭ್ಯಾಸ ಮಾಡಬೇಕು, ಈ ಎರಡು ಆಯ್ಕೆಗಳು ಮಾತ್ರ ವಿದ್ಯಾರ್ಥಿಗಳ ಮುಂದಿರುತ್ತವೆ. ಇನ್ನು ಕೆಲವು ವಿದ್ಯಾರ್ಥಿಗಳಂತೂ ಒಮ್ಮೆ ಅನುತ್ತೀರ್ಣವಾದಲ್ಲಿ, ಶಾಲೆ ತೊರೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದಕ್ಕೆಲ್ಲ ಪರಿಹಾರ ರೂಪಕವಾಗಿ ಇದೀಗ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯು ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಒಂದು ವರ್ಷ ಅದೇ ತರಗತಿಯಲ್ಲಿ ಪಾಠ ಕೇಳುವ ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ನಿಜಕ್ಕೂ ಇದು ಹೆಚ್ಚಿನ ವಿದ್ಯಾರ್ಥಿಗಳ ಪಾಲಿಗೆ ವರವಾಗಲಿದೆ.

   ಇದಕ್ಕೂ ಪೂರ್ವದಲ್ಲಿ ತನ್ವೀರ್ ಸೇಠ್ ಅವರು ಹಲವು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಪತ್ತೆಹಚ್ಚಲು ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿ ಅಳೆಯಲು ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಒಂದು ಕೋಟಿ ಮಕ್ಕಳಿಗಾಗಿ ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ‘ಶಿಕ್ಷಣ ಕಿರಣ’ ಎಂಬ ನೂತನ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಸರ್ಕಾರ ಶಾಲೆಗಳನ್ನು ತೆರೆಯುವುದನ್ನು ನಿಲ್ಲಿಸಿ 12 ವರ್ಷಗಳಾಗಿದೆ. ಈ ಅವಧಿಯಲ್ಲಿ ಜನವಸತಿ ಪ್ರದೇಶ ಸಾಕಷ್ಟು ವಿಸ್ತರಿಸಿದೆ. ಅಗತ್ಯಕ್ಕೆ ಅನುಗುಣವಾಗಿ ಹೊಸ ಶಾಲೆಗಳನ್ನು ತೆರೆಯುವ ಅಗತ್ಯವಿದೆ. ಇದನ್ನು ಮನಗಂಡು ಸರ್ಕಾರಿ ಶಾಲೆಗಳನ್ನು ತೆರೆಯುವ ಸಂಬಂಧ ಸಮೀಕ್ಷೆ ನಡೆಸಲು ತನ್ವೀರ್ ಸೇಠ್ ನಿರ್ಧರಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೊರತೆ ಇರುವ 22 ಸಾವಿರ ಶಿಕ್ಷಕರ ಪೈಕಿ ಪ್ರಸಕ್ತ ಸಾಲಿನಲ್ಲಿ 13,306 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲೂ ಕ್ರಮ ಕೈಗೊಳ್ಳಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚದಿರಲು ನಿರ್ಧರಿಸಲಾಗಿದೆ.

   ಇಂತಹ ದೂರದರ್ಶಿತ್ವವುಳ್ಳ ಸಚಿವರು ಸರ್ಕಾರಕ್ಕೆ, ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೇಕು. ತಾನಿರುವ ಕ್ಷೇತ್ರದ ಒಳಹೊರಗನ್ನು ಅರಿತು ಪರಿಣಾಮಕಾರಿ ಕಾರ್ಯಕ್ರಮಗಳ ಅನುಷ್ಠಾನ ಮಾಡಿದಾಗ ಮಾತ್ರ ಸಚಿವನೋರ್ವ ಸಮರ್ಥ ಜನಪ್ರತಿನಿಧಿಯಾಗಬಲ್ಲ. ಅದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ ತನ್ವೀರ್ ಸೇಠ್.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s