ಮುಖವಾಡದಡಿಯಲ್ಲಿ ಬಿಜೆಪಿಯ ವಿಕೃತ ನಗು!

abc

ನಾವು ಮಾಡಿದ ತಪ್ಪನ್ನು ಮುಚ್ಚಿಟ್ಟುಕೊಳ್ಳುವುದು ಹೇಗೆ? ತುಂಬಾ ಸುಲಭ, ಮತ್ಯಾರದೋ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡಿ, ಅದೇ ದೊಡ್ಡ ವಿಷಯವಾಗುವಂತೆ ನೋಡಿಕೊಂಡರಾಯಿತು! ನಿಮಗಿನ್ನೂ ಅರ್ಥವಾಗಲಿಲ್ಲವಾ? ಹಾಗಾದರೆ ಬಿಜೆಪಿಯನ್ನೊಮ್ಮೆ ನೋಡಿ ಕಲಿಯಿರಿ, ಅವರು ಇಂತಹುದರಲ್ಲಿ ಎತ್ತಿದ ಕೈ! ತಮ್ಮ ಮನೆಯಲ್ಲಿ ರಾಶಿ ರಾಶಿ ಕಸವನ್ನಿಟ್ಟುಕೊಂಡು, ಎದುರುಮನೆಯ ಅಂಗಳದಲ್ಲಿ ಬಿದ್ದ ಒಂದೇ ಒಂದು ಎಲೆಯೆಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರವರು.

“ಗಣಪತಿಯವರ ಪ್ರಕರಣಕ್ಕೆ ನೀಡುತ್ತಿರುವಷ್ಟು ಪ್ರಾಮುಖ್ಯತೆ ನನ್ನ ಮಗನ ಪ್ರಕರಣದಲ್ಲೇಕಿಲ್ಲ?” ಎಂದು ಅಪಾರ ನೋವಿನಿಂದ ಕಲ್ಲಪ್ಪ ಹಂಡೀಬಾಗ್ ಅವರ ತಂದೆ ಬಸಪ್ಪ ಪ್ರಶ್ನಿಸಿದ್ದಾರೆ. ಮೇಲ್ನೋಟಕ್ಕೆ ಇದು ಮಗನನ್ನು ಕಳೆದುಕೊಂಡ ತಂದೆಯೊಬ್ಬರ ದುಃಖಭರಿತ ಮಾತಿನಂತೆ ಕೇಳಿದರೂ, ಆ ಮಾತುಗಳು ಬಿಜೆಪಿಯ ಕುತಂತ್ರ ರಾಜಕಾರಣದ ಮೇಲೆ ಬೆಳಕು ಚೆಲ್ಲುತ್ತವೆ! ಗಣಪತಿಯವರ ಪ್ರಕರಣದಲ್ಲಿ ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಅದೆಂತಹ ಕರಾಳ ಮುಖವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ತಿಳಿದರೆ ಅರೆಕ್ಷಣ ಬೆಚ್ಚಿಬೀಳುವಂತಾಗುತ್ತದೆ.

ಆರ್‍ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದ ಸುದ್ದಿಗಳಲ್ಲೊಂದು. ಅವರು ಕೊಲೆಯಾದದ್ದು ನರೇಶ್ ಶೆಣೈ ಎಂಬ ಪಕ್ಕಾ ಆರ್‍ಎಸ್‍ಎಸ್‍ನ ಚಡ್ಡಿವಾಲಾನಿಂದ! ವಿನಾಯಕ್ ಬಾಳಿಗಾ ಕೂಡ ಅವರದೇ ಪಕ್ಷದವರಾದರೂ, ನರೇಶ್ ಶೆಣೈ ಎಂಬ ಕೇಸರಿ ನಾಯಕನ ಕೈಯಲ್ಲಿ ಕೊಲೆಯಾಗಿಹೋದರು. ನರೇಶ್ ಶೆಣೈ ಸಾಮಾನ್ಯದವನಲ್ಲ, ‘ನಮೋ ಬ್ರಿಗೇಡ್’ನ ಸಂಸ್ಥಾಪಕರಲ್ಲೊಬ್ಬ. ಮೋದಿಯವರ ಜೊತೆ ಫೋಟೋ ಕೂಡ ಹೊಡೆಸಿಕೊಂಡಿದ್ದ ಭಕ್ತಮಹಾಜನ. ಆದರೆ ಆತ ಮಾಡಿದ್ದು ಪಾತಕ ಕೃತ್ಯ. ನೆನಪಿರಲಿ ಇದೀಗ ಆತ ಜೈಲಿನಲ್ಲಿದ್ದರೂ, ಭೂಗತನಾಗಿ ಒಂದಷ್ಟು ಕಾಲ ಪೊಲೀಸರ ನಿದ್ದೆಗೆಡುವಂತೆ ಮಾಡಲು ಸಹಾಯ ಮಾಡಿದ್ದು ಇದೇ ಬಿಜೆಪಿ ಘಟಾನುಘಟಿಗಳು.

ಇನ್ನು ಡಿವೈಎಸ್‍ಪಿ ಕಲ್ಲಪ್ಪ ಹಂಡೀಬಾಗ್‍ರವರ ಆತ್ಮಹತ್ಯೆಯ ಹಿಂದೂ ಇದೇ ಕೇಸರಿಯ ಶಕ್ತಿಗಳಿವೆ. ಅಪಹರಣ ಮಾಡಿದ್ದು ಪ್ರವೀಣ್ ಖಾಂಡ್ಯ ಎಂಬ ಆರ್‍ಎಸ್‍ಎಸ್‍ನಿಂದ ಹೊರಬಿದ್ದು ವಿಶ್ವ ಹಿಂದೂ ಪರಿಷತ್‍ನ ಪ್ರಖರ ನಾಯಕನಾಗಿದ್ದವ! ಅಪಹರಣ ಮಾಡಿದ್ದು ಇದೇ ಬಿಜೆಪಿ ಕುಡಿ, ಆದರೆ ಪ್ರಾಣ ತೆತ್ತಿದ್ದು ಮಾತ್ರ ಪೊಲೀಸ್ ಅಧಿಕಾರಿ. ಇದೀಗ ಬಿಜೆಪಿ ಯಾರಿಗೂ ಸಿಗದಂತೆ ಪ್ರವೀಣ್ ಖಾಂಡ್ಯನಿಗೆ ರಕ್ಷಣೆ ಒದಗಿಸುತ್ತಿದೆ. ಇದರರ್ಥ, ಡಿವೈಎಸ್‍ಪಿ ಕಲ್ಲಪ್ಪರ ಸಾವಿಗೆ ಬಿಜೆಪಿ ಕಾರಣ! ಆದರೆ ಇವೆರಡೂ ಪ್ರಕರಣಗಳು ಎಲ್ಲಿ ದೊಡ್ಡಮಟ್ಟದ ಸುದ್ದಿಯಾಗಿ ಜನರು ತಮ್ಮ ಮೇಲೆ ಮುಗಿಬೀಳುತ್ತಾರೋ ಎನ್ನುವ ಭಯದಲ್ಲಿ, ಡಿವೈಎಸ್‍ಪಿ ಗಣಪತಿಯವರ ಸಾವನ್ನು ಮುಂದಿಟ್ಟುಕೊಂಡು ರಕ್ಷಣೆ ಪಡೆದುಕೊಳ್ಳುತ್ತಿದೆ.

ಸಮಾಜದ ದಾರಿ ತಪ್ಪಿಸುವ, ಜನರ ನಡುವೆ ವೈಮನಸ್ಸಿನ ಬೀಜ ಬಿತ್ತುವ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಬಿಜೆಪಿ, ತಾನು ಸುಬಗ ಎನ್ನುವ ರೀತಿಯಲ್ಲಿ ಮುಖವಾಡ ತೊಟ್ಟು ನಿಂತಿದೆ. ಒಂದಲ್ಲಾ ಒಂದು ದಿನ ಮುಖವಾಡ ಕಳಚಿ ಬೀಳಲೇಬೇಕು. ಆಗ ನಿಮ್ಮ ಪರಿಸ್ಥಿತಿ ನೆನಪಿಸಿಕೊಂಡರೆ.. ಸತ್ಯಮೇವ ಜಯತೇ!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s