ಯೋಗ್ಯತೆಯಿಲ್ಲದವರ ಬಾಯಲ್ಲಿ ‘ಸಿಬಿಐ’ ಮಂತ್ರ

37385-jahajjhwyz-1467959836

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಕೋಲಾಹಲವನ್ನೇ ಉಂಟುಮಾಡಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಗಣಪತಿಯವರ ಸಾವಿಗೆ ನ್ಯಾಯ ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಕೆಲವು ಮಾಧ್ಯಮಗಳು ಸ್ವಾರ್ಥಸಾಧನೆಗಾಗಿ ಕಾಂಗ್ರೆಸ್ ಅನ್ನು ಖಳನಾಯಕನ ರೀತಿಯಲ್ಲಿ ಬಿಂಬಿಸುತ್ತಿವೆ. ಬಿಜೆಪಿ ಹಾಗೂ ಜೆಡಿಎಸ್ ಕೇವಲ ದೊಡ್ಡ ಧ್ವನಿಯಲ್ಲಿ ಮಾತನಾಡುವ ಮೂಲಕ, ಅರ್ಥವೇ ಇಲ್ಲದ ವಿಷಯಗಳನ್ನು ಹೇಳುವ ಮೂಲಕ ಕಲಾಪದ ಸಮಯವನ್ನು ನುಂಗಿ ನೀರು ಕುಡಿದಿವೆ. ಈ ನಡುವೆಯೂ ಹೊರಿಸಲಾಗಿರುವ ಆರೋಪಗಳಿಗೆಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮರ್ಥವಾಗಿ ಉತ್ತರ ನೀಡಿದ್ದಾರೆ.

   ಡಿವೈಎಸ್‍ಪಿ ಗಣಪತಿಯವರು ಆತ್ಮಹತ್ಯೆಗೂ ಮುನ್ನ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ‘ನನ್ನ ಆತ್ಮಹತ್ಯೆಗೆ ಕಾರಣರು ಇವರೆಲ್ಲ’ ಎಂದು ಎಲ್ಲೂ ಹೇಳಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ವಾಹಿನಿಯ ನಿರೂಪಕನ ಪ್ರಚೋದನೆಯಿಂದ ವ್ಯಕ್ತಿಗಳ ಹೆಸರು ಗಣಪತಿಯವರ ಬಾಯಲ್ಲಿ ಬಂದಿರುವುದು ಸ್ಪಷ್ಟವಾಗುತ್ತದೆ. ಹಾಗಾದರೆ ಇದ್ಯಾವುದೂ ವಿರೋಧ ಪಕ್ಷಗಳ ಗಮನಕ್ಕೆ ಬಂದಿಲ್ಲವೇ? ಅಥವಾ ಜಾಣ ಕುರುಡೆ? ಪ್ರಾರಂಭದಿಂದಲೂ ‘ಎಫ್‍ಐಆರ್ ಹಾಕಲಾಗಿಲ್ಲ’ ಎನ್ನುತ್ತಾ ಬಂದಿದ್ದ ವಿರೋಧ ಪಕ್ಷಗಳಿಗೆ ಈಗಲಾದರೂ ಅರ್ಥವಾಗಿದೆ ಎಂದು ಭಾವಿಸುವ ಹಾಗಿಲ್ಲ. ಯಾಕೆಂದರೆ ಅರ್ಥವಾದರೂ ಸಹ ಸಾವಿನ ಮನೆಯ ರಾಜಕಾರಣ ತಣ್ಣಗಾಗದಂತೆ ಮಾಡಲು ಅವರಿಗೊಂದು ವಿಷಯ ಬೇಕಲ್ಲ!

   ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟವಾಗಿ ಹೇಳಿದ್ದಾರೆ, “ಸಿಐಡಿ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ಯಾವುದೇ ಮಂತ್ರಿ ಅಥವಾ ಅಧಿಕಾರಿಗಳ ರಕ್ಷಣೆಗೆ ಸರ್ಕಾರ ಮುಂದಾಗಿಲ್ಲ” ಎಂದು. ಸುಖಾಸುಮ್ಮನೆ ಸುಳ್ಳು ಹೇಳಲು ಸಿದ್ದರಾಮಯ್ಯನವರೇನು ಯಡಿಯೂರಪ್ಪನಂಥವರೇ? ಅದು ಬಿಡಿ, ಬಿಜೆಪಿಯವರ ಇನ್ನೊಂದು ಮಾತೆಂದರೆ ‘ಸಿಬಿಐ’ಗೆ ಒಪ್ಪಿಸಿ ಎನ್ನುವುದು. ಸಿಬಿಐಗೆ ಒಪ್ಪಿಸುವ ಮಾತನಾಡಲು ಬಿಜೆಪಿಯವರಿಗೆ ನೈತಿಕ ಹಕ್ಕೇ ಇಲ್ಲ. ತಾವು ಅಧಿಕಾರದಲ್ಲಿದ್ದಾಗ ಸಿಬಿಐಗೆ ಒಂದಾದರೂ ಪ್ರಕರಣ ವಹಿಸಿದ್ದಾರೆಯೇ? ನೂರಾರು ಕೋಟಿ ಅಕ್ರಮ, ಭ್ರಷ್ಟಾಚಾರ ಹೀಗೆ ಸಾಲು ಸಾಲು ಅನ್ಯಾಯಗಳು ಬಿಜೆಪಿಯ ಅಧಿಕಾರಾವಧಿಯಲ್ಲಿ ನಡೆದರೂ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಬಿಜೆಪಿ ವಹಿಸಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ 8 ಪ್ರಕರಣಗಳನ್ನು ಸಿಬಿಐಗೆ ವಹಿಸಿದೆ! ಅದ್ಯಾವ ಮುಖವನ್ನಿಟ್ಟುಕೊಂಡು ಬಿಜೆಪಿಯವರು ಸಿಬಿಐಗೆ ಪ್ರಕರಣ ವಹಿಸಲು ಒತ್ತಾಯಿಸುತ್ತಿದ್ದಾರೆ ಎಂದು ಅರ್ಥವಾಗುವುದಿಲ್ಲ.

   ಸಿದ್ದರಾಮಯ್ಯನವರು ಹೇಳಿದಂತೆ, “ಮೋದಿ ಸರ್ಕಾರ ಬಂದಮೇಲೆ ಸಿಬಿಐ ಎನ್ನುವುದು ಬಿಜೆಪಿಗೆ ಪವಿತ್ರ ಗಂಗಾನದಿಯಾಗಿಬಿಟ್ಟಿದೆ”! ಸಿಬಿಐ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯೂ ಇಲ್ಲದ ಬಿಜೆಪಿ ಮಾನ-ಮರ್ಯಾದೆ ಬಿಟ್ಟು ರಾಜ್ಯದಲ್ಲಿ ಶಾಂತಿಯನ್ನು ಕದಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದೆ ಎಂದರೆ ತಪ್ಪಾಗಲಾರದು. ಸಿಐಡಿ ತನಿಖೆಯ ಹೊರತಾಗಿಯೂ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ರಾಜ್ಯದ ಜನತೆ ಸತ್ಯವನ್ನು ತಿಳಿದುಕೊಳ್ಳಬೇಕಿದೆ. ಬಿಜೆಪಿಯ ಡಾಂಭಿಕತೆ ಇನ್ನೇನು ಕೆಲವೇ ದಿನಗಳಲ್ಲಿ ಬಣ್ಣ ಕಳಚಿಕೊಳ್ಳಲಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s