ಮಾಧ್ಯಮಗಳೆಂಬ ಸ್ವಯಂಘೋಷಿತ ತೀರ್ಪುಗಾರರು!

44539618-meida-game

ಪ್ರಾರಂಭದಲ್ಲೇ ಸ್ಪಷ್ಟನೆಯೆಂದರೆ, ಇಲ್ಲಿ ಬರೆದಿರುವುದು ಅಡ್ಡದಾರಿ ಹಿಡಿದ ಕೆಲ ಮಾಧ್ಯಮಗಳ ಕುರಿತು. ಸಮಾಧಾನದಿಂದ, ಸೂಕ್ಷ್ಮವಾಗಿ ಬಗೆಹರಿಸಬೇಕಿರುವ ಗಂಭೀರ ವಿಷಯಗಳನ್ನು ಹಳ್ಳ ಹಿಡಿಸುವುದರಲ್ಲಿ ಮಾಧ್ಯಮ ಮಂದಿಗಳದ್ದು ಮಹತ್ವದ ಪಾತ್ರವಿದೆ. ಸತ್ಯದ ತಲೆಗೇ ಹೊಡೆದಂತೆ ಸುದ್ದಿ ಬಿತ್ತರಿಸುವ ದೃಶ್ಯಮಾಧ್ಯಮಗಳು, ಘಟನೆ ನಡೆದಾಗ ಎದುರುಗಡೆಯೇ ಇದ್ದೆ ಎನ್ನುವಂತೆ ಬರೆಯುವ ಪತ್ರಿಕೆಗಳು ಎಷ್ಟರ ಮಟ್ಟಿಗೆ ವಾಸ್ತವವನ್ನು ಜನರಿಗೆ ತಲುಪಿಸುತ್ತಿವೆ ಎಂದು ಶೋಧನೆಗೆ ಹೊರಟರೆ ಆಘಾತಕಾರಿ ಅಂಶ ತಿಳಿದುಬರುತ್ತದೆ. ಯಾಕೆಂದರೆ ಅವುಗಳ ಪ್ರತಿಯೊಂದು ಪದ, ಪ್ರತಿಯೊಂದು ದೃಶ್ಯಗಳ ಹಿಂದೂ ಕಾಂಚಾಣದ ಝಣಝಣವಿರುತ್ತದೆ. ಕಾಂಚಾಣದ ಬಲ ವಿಷಯವನ್ನು ಹೇಗೆ ಬೇಕಾದರೂ ತಿರುಚುತ್ತದೆ!

   ಡಿವೈಎಸ್‍ಪಿ ಗಣಪತಿಯವರ ವಿಷಯದಲ್ಲಿ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿ ಅಸಹ್ಯ ಹುಟ್ಟಿಸುತ್ತದೆ. ಅದರಲ್ಲೂ ಕೆಲವು ಮಾಧ್ಯಮಗಳ ಪ್ರಮುಖ ಉದ್ದೇಶ ಕಾಂಗ್ರೆಸ್‍ನ ವಿರುದ್ಧ ಮಾತನಾಡಬೇಕು ಎಂಬುದು. ಅದಕ್ಕಾಗಿ ಅವರು ಅದಾಗಲೇ ಗಣಪತಿಯವರ ಪ್ರಕರಣವನ್ನು ಹಿಂಡಿ-ಹಿಪ್ಪೆ ಮಾಡಿ ತೀರ್ಪೂ ಕೊಟ್ಟಾಗಿದೆ, ತಮಗೆ ಬೇಕಾದಂತೆ! ಅವರ ಪ್ರಲಾಪ ಅದ್ಯಾವ ಮಟ್ಟಿಗಿದೆಯೆಂದರೆ ಜನಸಾಮಾನ್ಯರಿಗೆ ಪೊಲೀಸ್‍ವ್ಯವಸ್ಥೆಯ ಮೇಲೆ ನಂಬಿಕೆ ಹೋಗುವಂತೆ ವರ್ತಿಸಿ ಅಡ್ಡದಾರಿಯ ಮೂಲಕ ತೃಪ್ತಿ ಹೊಂದುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ವಿರೋಧಿಗಳು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಯಾವುದೇ ಒಂದು ಪ್ರಕರಣ ನಡೆದಾಗ ಸಿಐಡಿ ತನಿಖೆ ನಡೆಸುತ್ತಿದೆ ಎಂದರೆ ಅಲ್ಲಿ ಸತ್ಯವನ್ನು ಹೊರಗೆಡಹುವತ್ತ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರ್ಥ. ಇದು ಕೇವಲ ಕಾಂಗ್ರೆಸ್ ಸರ್ಕಾರವಿದ್ದಾಗ ಇರುವ ವ್ಯವಸ್ಥೆ ಅಲ್ಲ, ಬಿಜೆಪಿ ಸರ್ಕಾರವಿದ್ದಾಗಲೂ ಸಿಐಡಿ ಇತ್ತು, ಅವರೂ ಸಹ ಸಿಐಡಿ ತನಿಖೆಗೆ ಪ್ರಕರಣಗಳನ್ನು ಒಪ್ಪಿಸಿದ್ದರು.

   ಇನ್ನು ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಮಾಧ್ಯಮಗಳು ಅದ್ಯಾವಪರಿ ಬೊಬ್ಬಿರಿಯುತ್ತವೆ ಎಂದರೆ, ಸತ್ಯದತ್ತ ಯೋಚಿಸಲು ಕೂತವನೂ ಸಹ ಇವರ ಮಾತು ಕೇಳಿ ದಿಗ್ಭ್ರಮೆಗೊಳಗಾಗುವಂತೆ! ಇಂದಿನ ದಿನಮಾನಗಳಲ್ಲಿ ಅಭಿಪ್ರಾಯ ರೂಪಿಸುವುದು ಮಾಧ್ಯಮಗಳ ಕೈಯಲ್ಲಿದೆ. ಆದರೆ ಸ್ವಾರ್ಥ ಸಾಧನೆಗಾಗಿ ಮುಡಿಪಾಗಿರುವ ಮಾಧ್ಯಮಗಳು ಸತ್ಯವನ್ನೂ ಸಹ ಸುಳ್ಳು ಎಂದು ನಿರೂಪಿಸುವ ಕಾಯಕದಲ್ಲಿ ತೊಡಗಿವೆ. ಡಿವೈಎಸ್‍ಪಿ ಕಲ್ಲಪ್ಪ ಆತ್ಮಹತ್ಯೆ ಇದಕ್ಕೆ ಒಂದು ಉತ್ತಮ ಉದಾಹರಣೆ. ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ, ಮಾಧ್ಯಮಗಳು ಅವರ ತೇಜೋವಧೆ ಮಾಡಿದ್ದವು. ಯಾವಾಗ ಕಲ್ಲಪ್ಪ ಸಾವು ಸಂಭವಿಸಿತೋ, ಮಾಧ್ಯಮಗಳು ಯೂಟರ್ನ್ ಹೊಡೆದುಬಿಟ್ಟವು. ಹಿಂದಿನ ದಿನ ಯಾರ ತೇಜೋವಧೆ ಮಾಡಲಾಗಿತ್ತೋ, ಅವರನ್ನೇ ಹುತಾತ್ಮ ಎಂಬಂತೆ ಬಿಂಬಿಸತೊಡಗಿದವು.

   ಇದೀಗ ಗಣಪತಿಯವರ ಪ್ರಕರಣದಲ್ಲೂ ಮಾಧ್ಯಮಗಳು ಆಟವಾಡುತ್ತಿವೆ. ಸತ್ಯವನ್ನು ಮರೆಮಾಚಿ ಅಭಿಪ್ರಾಯ ರೂಪಿಸಲು ತೊಡಗಿವೆ. ಸರ್ಕಾರದ ವಿರುದ್ಧ ಶತಾಯಗತಾಯ ಜನರನ್ನು ಎತ್ತಿಕಟ್ಟಬೇಕು ಎಂದು ನಿರ್ಧರಿಸಿಬಿಟ್ಟಿವೆ. ಆದರೆ ಸತ್ಯದ ಪ್ರಖರತೆಯ ಮುಂದೆ ಸುಳ್ಳಿನ ಕಾಂತಿಗೆ ಜಾಗವಿಲ್ಲ. ಸೂರ್ಯ ಉದಯಿಸಿದಾಗ ಕತ್ತಲು ಕರಗಲೇಬೇಕು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s