ಗಣಪತಿಯವರ ಸಾವ ಸುತ್ತ..

ganapathy-e1467957296492

ಒಂದು ಸಾವು ಸಮಾಜದ ಕೆಲ ಹುಳುಕುಗಳನ್ನು ಅದ್ಹೇಗೆ ಎತ್ತಿಹಿಡಿದುಬಿಡುತ್ತದೆ ಎನ್ನುವುದಕ್ಕೆ ಡಿವೈಎಸ್‍ಪಿ ಗಣಪತಿ ಸಾವು ಉತ್ತರವಾಗಬಲ್ಲದು. ಸಾವಿನ ಕಾವಿನಲ್ಲೇ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮಂದಿ ಒಂದೆಡೆಯಾದರೆ, ಸಾವಿನ ದುಃಖವನ್ನೇ ಸಂಭ್ರಮಿಸುವವರು ಇನ್ನಷ್ಟು ಜನ! ಸತ್ಯವೇನು ಎನ್ನುವುದಕ್ಕಿಂತ ಹೆಚ್ಚು ಮಜ ನೀಡುವ ಸುಳ್ಳನ್ನೇ ಚಪ್ಪರಿಸುವವರು ಮತ್ತಷ್ಟು ಜನ! ಆದರೆ ಸತ್ಯಾಸತ್ಯತೆಯ ಬೆನ್ನಟ್ಟಿ ಹೋದವರಿಗೆ ಹಲವು ಆಯಾಮಗಳು ಕಾಣಸಿಗುತ್ತವೆ.

   ಡಿವೈಎಸ್‍ಪಿ ಗಣಪತಿಯವರ ಸಾವು ನಿಜಕ್ಕೂ ನೋವುಂಟುಮಾಡುವಂತಹುದು. ಆದರೆ, ಅವರ ಸಾವಿನ ನಿಖರ ಕಾರಣ ಏನೆಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ. ಆದರೆ ಸಾಂದರ್ಭಿಕ ಆಯಾಮದಲ್ಲಿ ಘಟನಾವಳಿಯನ್ನು ವಿಶ್ಲೇಷಿಸಿದರೆ, ಮೇಲುನೋಟಕ್ಕೆ ಕಾಣಸಿಗುವ ಕಾರಣಗಳು ನಿಜವಾದ ಕಾರಣಗಳೇ ಅಲ್ಲ ಎಂಬುದು ಅರಿವಾಗುತ್ತದೆ. ಗಣಪತಿಯವರು ಖಿನ್ನತೆಗೆ ಒಳಗಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಖಿನ್ನತೆಯ ಕಾರಣ ಇಲ್ಲಿ ಮಹತ್ವದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಮಂಗಳೂರಿನ ಚರ್ಚ್ ದಾಳಿ ಪ್ರಕರಣದಲ್ಲಿ ಗಣಪತಿಯವರು ಖಾಕಿಯ ಅಧಿಕಾರ ಬಳಸಿಕೊಂಡು ತಾವು ನಂಬಿದ ಸಿದ್ಧಾಂತದ ಪ್ರಕಾರ ನಡೆದದ್ದು ಗೋಚರವಾಗುತ್ತದೆ. ಆರ್‍ಎಸ್‍ಎಸ್‍ನ ಬೆಂಬಲಿಗರಾಗಿದದ್ದು ಯಾವುದೇ ತಪ್ಪಲ್ಲ, ಆದರೆ ಅದಕ್ಕೋಸ್ಕರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಅಕ್ಷಮ್ಯ ಅಪರಾಧ.

   ಇನ್ನು ಗಣಪತಿಯವರ ಹಿನ್ನೆಲೆಯನ್ನು ಗಮನಿಸಿದರೆ ಕರ್ತವ್ಯಲೋಪದ, ಅಧಿಕಾರ ದುರ್ಬಳಕೆ ಮಾಡಿಕೊಂಡ ಹಾಗೂ ಇನ್ನಿತರ ಅನೇಕ ಲೋಪಗಳು ಕಂಡುಬರುತ್ತವೆ. ಅಂದರೆ ಅವರ ವೃತ್ತಿಜೀವನ ಹಲವಾರು ಲೋಪದೋಷಗಳಿಂದ ಕೂಡಿದೆ. ಈ ಕುರಿತಂತೆ ಮೇಲಿನ ಅಧಿಕಾರಿಗಳು ಬುದ್ಧಿವಾದ ಹೇಳಿದ್ದನ್ನೇ ಅವರು ತಪ್ಪಾಗಿ ತಿಳಿದರೆ? ಗೊತ್ತಿಲ್ಲ. ಆದರೆ ಅವರು ಖಿನ್ನತೆಗೆ ಜಾರಿದ್ದಂತೂ ನಿಜ.

   ಇದೀಗ ಅವರ ಕುಟುಂಬ ವರ್ಗದಲ್ಲೇ ಭಿನ್ನ ಹೇಳಿಕೆಗಳು ಕೇಳಿಬರುತ್ತಿರುವುದು ಮತ್ತೊಂದು ಬೆಳವಣಿಗೆ. ಗಣಪತಿ ಪತ್ನಿ ಹೇಳುವ ಪ್ರಕಾರ ಅವರು ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದರು. ಆದರೆ ಅವರ ತಮ್ಮ ಹಾಗೂ ಮನೆಯವರು ಪತ್ನಿಯ ಕಿರುಕುಳ ಹಾಗೂ ಕೌಟುಂಬಿಕ ತೊಂದರೆಯಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳುತ್ತಾರೆ. ಅದಕ್ಕೆ ಪೂರಕವಾಗಿ ಗಣಪತಿಯವರು ಚಿಕಿತ್ಸೆ ಪಡೆದ ಕುರಿತೂ ದಾಖಲಾತಿಗಳಿವೆ. ಹಾಗಾದರೆ ಅವರು ಮಾನಸಿಕ ಅಸ್ವಸ್ಥತೆಗೆ ಈಡಾಗಿದ್ದರಾ? ಗೊತ್ತಿಲ್ಲ. ಇನ್ನೇನಿದ್ದರೂ ಎಲ್ಲವೂ ಸಹ ತನಿಖೆಯಿಂದ ಬಹಿರಂಗಗೊಳ್ಳಬೇಕು.

   ಒಟ್ಟಿನಲ್ಲಿ ಇದೊಂದು ಸಂಕೀರ್ಣ ಪ್ರಸಂಗವಾಗಿದೆ. ಆದರೆ ಇದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ನೀಚರಿಗೆ ಸತ್ಯ ಬೇಕಾಗಿಲ್ಲ. ಸುಳ್ಳನ್ನು ಊಟಕ್ಕೆ ನಂಜಿಕೊಳ್ಳಬಹುದಷ್ಟೇ. ಅದನ್ನೇ ಊಟ ಮಾಡಿದರೆ ನಂಜೇರುವುದಂತೂ ಗ್ಯಾರಂಟಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s