ಬಿಜೆಪಿ-ಜೆಡಿಎಸ್‍ನ ಸಾವಿನ ಮನೆ ರಾಜಕಾರಣ!

logo

ರಾಜ್ಯದಲ್ಲಿ ಮತ್ತೋರ್ವ ಡಿವೈಎಸ್‍ಪಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡಿವೈಎಸ್‍ಪಿ ಗಣಪತಿಯವರ ಸಾವು ಇದೀಗ ಪ್ರಮುಖ ಚರ್ಚೆಯ ವಿಷಯವಾಗಿದ್ದು, ಹಲವರು ತಮ್ಮ ರಾಜಕೀಯ ಲಾಭಕ್ಕಾಗಿ ಮುಗಿಬಿದ್ದಿದ್ದಾರೆ. ಇಂತಹ ಸಮಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡೆದುಕೊಳ್ಳುತ್ತಿರುವ ರೀತಿ ಹೇಸಿಗೆ ಹುಟ್ಟಿಸುವಂತಹುದು. ಸಾವಿನ ಮನೆಯಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್‍ನ ನಡೆ ಖಂಡನೀಯ. ಗಣಪತಿಯವರ ಆತ್ಮಹತ್ಯೆಯ ವಿಷಯವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಾದ ಹೊತ್ತು ಇದು.

   ಡಿವೈಎಸ್‍ಪಿ ಗಣಪತಿಯವರು ಆತ್ಮಹತ್ಯೆಗೆ ಮುನ್ನ ಖಾಸಗಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಸಚಿವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಗೆ ತನ್ನ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರ ಮೇಲೆ ಸಿಟ್ಟು ಬರುವುದು ಸಹಜ. ಸಿಟ್ಟು ಹತಾಶೆಯ ರೂಪ ಪಡೆದುಕೊಂಡಾಗ ವ್ಯಕ್ತಿ ಖಿನ್ನನಾಗುತ್ತಾನೆ. ಖಿನ್ನನಾದ ವ್ಯಕ್ತಿ ಭಾವಾತಿರೇಕಕ್ಕೆ ಒಳಗಾಗಿ ತನ್ನ ಜೀವಕ್ಕೇ ಹಾನಿ ಮಾಡಿಕೊಳ್ಳುವ ಹಂತ ತಲುಪುತ್ತಾನೆ. ಇದೆಲ್ಲ ಯಾಕೆ ಹೇಳಬೇಕಾಗಿ ಬಂತೆಂದರೆ, ಗಣಪತಿಯವರ ಪ್ರಕರಣದಲ್ಲಿ ಆಗಿರುವುದೂ ಅದೆ. ಕಾರಣಾಂತರಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನುವ ಸಂಗತಿ ಇದೀಗ ಎಲ್ಲರಿಗೂ ತಿಳಿದದ್ದೇ. ಅಂತಹ ಖಿನ್ನತೆಯ ಕ್ಷಣಗಳು ಅವರ ಕೆಲಸದ ಮೇಲೂ ಪರಿಣಾಮ ಬೀರಿದೆ. ಅದು ಕೊನೆಗೆ ಆತ್ಮಹತ್ಯೆಯ ಹಂತಕ್ಕೆ ತಲುಪಿದೆ.

   ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ದುಃಖಕರ ಸಂಗತಿ. ಆದರೆ ದುಃಖದ ಪರಿಸ್ಥಿತಿಯನ್ನೇ ಅವಕಾಶವನ್ನಾಗಿ ಬಳಸಿಕೊಳ್ಳುವ ಕೀಳುಮಟ್ಟಕ್ಕಿಳಿದಿದ್ದು ಬಿಜೆಪಿ ಹಾಗೂ ಜೆಡಿಎಸ್. ಕಾಂಗ್ರೆಸ್ ಸರ್ಕಾರ ಈ ಪ್ರಕರಣದ ಮೂಲಕ್ಕೆ ಇಳಿದು ಕಾರಣ ತಿಳಿಯಲು ಹೊರಟರೆ, ಬಿಜೆಪಿ ಹಾಗೂ ಜೆಡಿಎಸ್ ‘ಅವರು ರಾಜಿನಾಮೆ ನೀಡಬೇಕು, ಇವರು ರಾಜಿನಾಮೆ ನೀಡಬೇಕು’ ಎನ್ನುತ್ತ ಪಕ್ಕಾ ರಾಜಕಾರಣಕ್ಕಿಳಿದಿವೆ. ದುರ್ಬುದ್ಧಿಯ ಅತಿರೇಕ ಎಷ್ಟರ ಮಟ್ಟಿಗಿದೆಯೆಂದರೆ, ಏನೂ ಅರಿಯದ ಪುಟ್ಟ-ಪುಟ್ಟ ಶಾಲಾ ಮಕ್ಕಳನ್ನು ಪ್ರತಿಭಟನೆಗೆ ಬಳಸಿಕೊಂಡಿವೆ. ತೊದಲು ನುಡಿ ಆಡುವ ಬಾಯಲ್ಲಿ ಪ್ರತಿಭಟನೆಯ ಕೂಗು ಹೇಳಿಸಿವೆ. ಅಲ್ಲಿಗೆ ತಮ್ಮ ರಾಜಕೀಯ ತುಕ್ಕು ಹಿಡಿಯುತ್ತಿದೆ ಎಂದು ಭಾವಿಸುವಾಗ, ಬಿದ್ದು ಹೊರಳಾಡಲು ಒಂದು ಸಂಗತಿ ಸಿಕ್ಕಿತು ಎಂದು ಸಂಭ್ರಮಿಸಿವೆ.

   ವಿರೋಧಪಕ್ಷಗಳಿಗೆ ನಿಜಕ್ಕೂ ಗಣಪತಿಯವರ ಸಾವಿನ ಬಗ್ಗೆ ದುಃಖವಿದ್ದಿದ್ದರೆ ಆ ನಿಟ್ಟಿನಲ್ಲಿ ಯೋಚನೆಗೆ ತೊಡಗಬೇಕಿತ್ತು. ಆದರೆ ‘ಸಚಿವರು ರಾಜಿನಾಮೆ’ ನೀಡಬೇಕು ಎಂದು ಪಟ್ಟುಹಿಡಿದಾಗಲೇ ಢಾಂಬಿಕ ನಡೆಯ ಬಗ್ಗೆ ಸಾರ್ವಜನಿಕರಿಗೆ ತಿಳಿದುಹೋಗಿದೆ. ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಹಾಗೆ ನೋಡಿದರೆ ಅಧಿಕಾರಿಗಳಿಗೆ ಅಥವಾ ಯಾವುದೇ ಇಲಾಖೆಗೆ ತೊಂದರೆ ಇದೆ ಎಂದಾದಾಗ ಸರ್ಕಾರವು ಆ ನಿಟ್ಟಿನಲ್ಲಿ ಸ್ಪಂದಿಸಿದೆ. ಪೊಲೀಸ್ ಇಲಾಖೆಯೇ ಪ್ರತಿಭಟನೆ ಮಾಡುವುದಾಗಿ ತಿಳಿಸಿದಾಗ ಅವರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದು ಇದೇ ಸಿದ್ದರಾಮಯ್ಯ ಸರ್ಕಾರ. ಇಂತಿರುವಾಗ ಓರ್ವ ಡಿವೈಎಸ್‍ಪಿಗೆ ತೊಂದರೆಯಾದರೆ ಸರ್ಕಾರ ಸ್ಪಂದಿಸದೆಯೇ ಇರುತ್ತದೆಯೇ? ಎಲ್ಲೋ ಒಂದೆಡೆ ಗಣಪತಿಯವರು ದುಡುಕಿಬಿಟ್ಟರೇನೋ ಅನ್ನಿಸುತ್ತದೆ.

   ಅದೇನೆ ಇದ್ದರೂ, ರಾಜ್ಯ ಸರ್ಕಾರ ಸಂಯಮದಿಂದ ಹೆಜ್ಜೆಯಿಡುತ್ತಿದೆ. ಪ್ರಕರಣದ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಎಲ್ಲವನ್ನೂ ಬಿಟ್ಟ ಬಿಜೆಪಿ ಹಾಗೂ ಜೆಡಿಎಸ್‍ನ ಸಾವಿನ ಮನೆಯ ರಾಜಕಾರಣ ರಾಜಕಾರಣದ ಅಧೋಗತಿಯ ಪ್ರತಿಬಿಂಬ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s