ಇಟ್ಟ ಗುರಿ – ದಿಟ್ಟ ಹೆಜ್ಜೆ!

3c67b19a-765d-45cf-b8a9-04ad56bb689d

‘ಪುಸ್ತಕ ಒಂದು ಒಳ್ಳೆಯ ಸ್ನೇಹಿತ’ ಎನ್ನುವ ಮಾತಿದೆ. ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎನ್ನುವ ಮಾತೂ ಪುಸ್ತಕದ ಮಹತ್ವವನ್ನು ಸಾರಿ ಹೇಳುತ್ತದೆ. ಪುಸ್ತಕವನ್ನು ಓದಿ, ಇತರರಿಗೂ ಓದಿಸಿ ಖುಷಿ ಪಡುವ ಒಂದಷ್ಟು ಜನರಿದ್ದಾರೆ. ಆದರೆ ಪುಸ್ತಕವನ್ನು ಓದದೇ ಟೀಕಿಸುವವರು ಬಹಳಷ್ಟಿದ್ದಾರೆ ಹಾಗೂ ಕೆಲದಿನಗಳಿಂದ ಅವರು ಸದ್ದು ಮಾಡುತ್ತಿದ್ದಾರೆ!

   ಹೌದು, ನಾವಿಲ್ಲಿ ಮಾತನಾಡುತ್ತಿರುವುದು ಸರ್ಕಾರದಿಂದ ಪ್ರತಿ ಶಾಲೆಗಳಿಗೂ ಕಡ್ಡಾಯಗೊಳಿಸಲಾಗಿದೆ ಎಂದು ಸುಳ್ಳು ವದಂತಿ ಹಬ್ಬಿಸಲಾಗಿರುವ ‘ಇಟ್ಟ ಗುರಿ-ದಿಟ್ಟ ಹೆಜ್ಜೆ, ಸಮಾನತೆಯ ಸಾಧಕನ ಸಂಕಲ್ಪದ ಹಾದಿ’ ಎನ್ನುವ ಪುಸ್ತಕದ ಬಗ್ಗೆ. ಒಂದು ಮಾತಂತೂ ಸ್ಪಷ್ಟ, ಟೀಕಾಕಾರರು ಪುಸ್ತಕದ ಕುರಿತು ಹೊರಡಿಸಲಾದ ಆದೇಶಪ್ರತಿಯನ್ನು ಓದಿಲ್ಲ ಹಾಗೂ ‘ಇಟ್ಟ ಗುರಿ-ದಿಟ್ಟ ಹೆಜ್ಜೆ’ ಪುಸ್ತಕವನ್ನೂ ಓದಿಲ್ಲ. ಇವೆರಡರಲ್ಲಿ ಯಾವುದಾದರೂ ಒಂದನ್ನು ಓದಿದ್ದರೂ ಸಹ ಅನಾವಶ್ಯಕವಾಗಿ ಬಾಯಿ ಬಡಿದುಕೊಳ್ಳುವ ಪ್ರಮೇಯ ಇವರಿಗೆ ಬರುತ್ತಿರಲಿಲ್ಲ.

   ಮೊದಲನೆಯದಾಗಿ ಹೊರಡಿಸಿರುವ ಸುತ್ತೋಲೆಯ ಬಗ್ಗೆ ತಕರಾರು ತೆಗೆಯಲಾಗಿದೆ. ಸುತ್ತೋಲೆಯಲ್ಲಿ ‘ಇಟ್ಟ ಗುರಿ ದಿಟ್ಟ ಹೆಜ್ಜೆ – ಈ ಪುಸ್ತಕವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ / ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಗ್ರಂಥಾಲಯಗಳಿಗೆ ಖರೀದಿಸಲು ಅನುಮತಿ ನೀಡಿದೆ.’ ಎಂದು ಉಲ್ಲೇಖಿಸಲಾಗಿದೆ. ಅನುಮತಿ ನೀಡುವುದಕ್ಕೂ, ಕಡ್ಡಾಯಗೊಳಿಸುವುದಕ್ಕೂ ವ್ಯತ್ಯಾಸವಿಲ್ಲವೆ? ಇಲ್ಲಿ ಕೇವಲ ಅನುಮತಿ ನೀಡಲಾಗಿದೆ. ಯಾವುದಾದರು ಶಾಲೆ ಒಂದೊಮ್ಮೆ ಈ ಪುಸ್ತಕವನ್ನು ಖರೀದಿಸಿದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎನ್ನುವ ಉದ್ದೇಶದಿಂದಲೇ ಅನುಮತಿ ಪತ್ರ ನೀಡಲಾಗಿದೆ. ಆದರೆ ವಿರೋಧಿಗಳಿಗೆ ಅನುಮತಿಗೂ, ಕಡ್ಡಾಯಕ್ಕೂ ವ್ಯತ್ಯಾಸ ಗೊತ್ತಿಲ್ಲವೆಂದೆನಿಸುತ್ತದೆ.

   ‘ಇಟ್ಟ ಗುರಿ ದಿಟ್ಟ ಹೆಜ್ಜೆ’ ಪುಸ್ತಕವನ್ನು ಕೂಲಂಕುಷವಾಗಿ ಓದಿದರೆ ಅದರಲ್ಲಿ ಆಕ್ಷೇಪಾರ್ಹವಾದದ್ದು ಏನೂ ಇಲ್ಲ. ಆದರೂ ಇದೀಗ ಆ ಪುಸ್ತಕ ಆಕ್ಷೇಪಗಳನ್ನು ಎದುರಿಸುತ್ತಿರುವುದು ವಿಪರ್ಯಾಸ! ಸಿದ್ದರಾಮಯ್ಯನವರನ್ನು, ಅವರ ನಡೆಯನ್ನು, ಆಡಳಿತವನ್ನು ಹತ್ತಿರದಿಂದ ಗಮನಿಸಿದವರು ಈ ಪುಸ್ತಕದಲ್ಲಿ ವ್ಯಕ್ತಿತ್ವ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಪ್ರಮುಖವಾಗಿ ಗಮನಿಸಬೇಕಾದ ಅಂಶ ಎಂದರೆ, ಇದರಲ್ಲಿರುವ ಲೇಖನಗಳನ್ನು ಬರೆದವರು ಸಿದ್ದರಾಮಯ್ಯನವರ ಅನುಯಾಯಿಗಳೋ, ಪಕ್ಷದ ಕಾರ್ಯಕರ್ತರೋ ಅಲ್ಲ; ಬದಲಿಗೆ ನಾಡಿನ ಖ್ಯಾತನಾಮರ ಬರಹಗಳು ಇಲ್ಲಿವೆ. ಪ್ರೊ. ಕೆ. ಮರುಳಸಿದ್ದಪ್ಪನವರ ಮುನ್ನುಡಿ ಹೊಂದಿರುವ ಈ ಪುಸ್ತಕದಲ್ಲಿ ಪ್ರೊ. ಹಂಪನಾ, ಡಾ. ಸಾ.ಶಿ ಮರುಳಯ್ಯ, ಡಾ. ನಾ. ಖಸೋಜಾ, ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಸೇರಿದಂತೆ ಒಟ್ಟೂ 39 ಮಂದಿ ಬರೆದ ಲೇಖನಗಳಿವೆ. ಈ ಪುಸ್ತಕ ಸಿದ್ದರಾಮಯ್ಯನವರ ವ್ಯಕ್ತಿತ್ವ ಜೊತೆ ಕನ್ನಡ ನಾಡಿನ ರಾಜಕೀಯದ ಮೇಲೂ ಬೆಳಕು ಚೆಲ್ಲುತ್ತದೆ. ಇಲ್ಲಿ ರಾಜಕೀಯ ಇತಿಹಾಸವಿದೆ, ಸ್ವಾರಸ್ಯಕರ ಘಟನೆಗಳಿದೆ, ಉಪಯುಕ್ತ ಮಾಹಿತಿಯಿದೆ. ಶಾಲಾ ಗ್ರಂಥಾಲಯದಲ್ಲಿಟ್ಟರೆ ಆಸಕ್ತಿಯಿದ್ದವರು ಓದಿಕೊಳ್ಳುತ್ತಾರೆ, ಅದರಲ್ಲೇನು ತಪ್ಪಿದೆ? ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಓರ್ವ ವಿದ್ಯಾರ್ಥಿ ತಿಳಿದುಕೊಳ್ಳುವುದು ತಪ್ಪೇ? ಆ ಪುಸ್ತಕವೇನು ರಾಜಕೀಯ ಪಕ್ಷದ ಪ್ರಣಾಳಿಕೆ ಅಥವಾ ಸಿದ್ಧಾಂತಗಳನ್ನು ಬಿಂಬಿಸುತ್ತಿಲ್ಲವಲ್ಲ!

   ಇದೀಗ ಆದೇಶವನ್ನು ಹಿಂಪಡೆಯಲಾಗಿದೆ. ವಿರೋಧಿಗಳ ಮೊಗದಲ್ಲಿ ನಗು ಮೂಡಿರಬಹುದು. ಆದರೆ ಈ ಸುತ್ತೋಲೆ ಕೇವಲ ಅನುಮತಿ ಪತ್ರ ಎನ್ನುವುದನ್ನು ಅರಿಯದಷ್ಟು ದಡ್ಡರೂ ಇದ್ದಾರಲ್ಲಾ ಎನ್ನುವುದೇ ಅಚ್ಚರಿಯ ಸಂಗತಿ. ಬಹುಶಃ ವಿರೋಧಿಗಳಿಗೆ ಅನಾವಶ್ಯಕವಾಗಿ ಮಾತನಾಡಲು ‘ಅನುಮತಿ ನೀಡು’ವ ಬದಲು ‘ಕಡ್ಡಾಯ’ಗೊಳಿಸಲಾಗಿದೆ ಅನ್ನಿಸುತ್ತದೆ.

8d11c845-dfeb-4469-8027-0d8f4741121c

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s