ಬಿಜೆಪಿಯೊಳಗಿನ ಕೆಜೆಪಿ

233610yeddyurappa

ಮಹಾ ಸಂಭಾವಿತರ ಹಾಗೆ ಸೋಗು ಹಾಕಿಕೊಂಡವರ ಕಥೆ ಕೊನೆಯಲ್ಲಿ ಏನಾಗಬಹುದು ಎಂಬುದಕ್ಕೆ ಇತ್ತೀಚೆಗೆ ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಉತ್ತಮ ಉದಾಹರಣೆ. ‘ಬಿ ಎಸ್ ಯಡಿಯೂರಪ್ಪ ಬಂದರು, ರಾಜ್ಯಾಧ್ಯಕ್ಷರಾದರು, ಇನ್ನು ಬಿಜೆಪಿ ಕಮಲ ಮತ್ತಷ್ಟು ದೊಡ್ಡದಾಗಿ ಅರಳಲಿದೆ’ ಎನ್ನುವ ಕನಸು ಕಾಣುತ್ತಿದ್ದ ಮಹಾನ್ ಭಕ್ತರಿಗೆಲ್ಲ ವಾಸ್ತವದ ಬಿಸಿ ಅರ್ಥವಾಗಿದೆ. ಅದನ್ನು ಯಡಿಯೂರಪ್ಪ ಹಾಗೂ ಶೋಭಕ್ಕ ಸೇರಿ ಚೆನ್ನಾಗೇ ಅರ್ಥ ಮಾಡಿಸಿದ್ದಾರೆ!

   “ನನ್ನ ಜೀವಮಾನದಲ್ಲಿ ಬಿಜೆಪಿಯತ್ತ ಮುಖ ಮಾಡುವುದಿಲ್ಲ” ಎಂದು ಕಿರುಚಾಡಿದ್ದ ಯಡಿಯೂರಪ್ಪ ‘ಕೆಜೆಪಿ’ ಕಟ್ಟಿ ಬೆಳೆಸಿ ಅದೇನೋ ಮಹತ್ತರವಾದದ್ದನ್ನು ಕಡೆದು ಕಟ್ಟೆ ಹಾಕುತ್ತೇನೆ ಎಂದು ಹೊರಟರು. ಹೊರಟಷ್ಟೇ ವೇಗದಲ್ಲಿ ಕೆಜೆಪಿಯನ್ನು ಬಿಜೆಪಿಯೊಡನೆ ವಿಲೀನಗೊಳಿಸಿ ಪೇಲವ ನಗೆ ಬೀರಿದರು. ಬಿಜೆಪಿಯನ್ನು ಯಡಿಯೂರಪ್ಪ ತೊರೆದಾಗ ಕುಣಿದು ಕುಪ್ಪಳಿಸಿದ್ದ ಕೆಲ ಬಿಜೆಪಿ ನಾಯಕರ ಮುಖ ಯಡಿಯೂರಪ್ಪ ವಾಪಸ್ ಬಂದ ಮೇಲೆ ಎಣ್ಣೆಯಲ್ಲಿ ಕಾದ ವಡೆಯಂತಾಗಿತ್ತು. ಅದರಲ್ಲೂ ಯಾವಾಗ ಬಿಎಸ್‍ವೈ ಬಿಜೆಪಿ ಸಾರಥ್ಯ ವಹಿಸಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಸ್ಥಾಪಿತರಾದರೋ, ಬಿಜೆಪಿ ನಾಯಕರು ಕೊತಕೊತ ಕುದಿಯತೊಡಗಿದರು. ಸ್ಫೋಟಗೊಳ್ಳುವಂತಿಲ್ಲ, ಯಾಕೆಂದರೆ ಪಕ್ಷದ ಮಾನದ ಪ್ರಶ್ನೆ!

   ರಾಜ್ಯಾಧ್ಯಕ್ಷರಾದ ಮೇಲೆ ಯಡಿಯೂರಪ್ಪನವರ ಖದರ್ರೇ ಬದಲಾಯಿತು. ತಮಗೆ ನಿಷ್ಠರಾಗಿ ಕೆಜೆಪಿ ಹೊಸಿಲು ತುಳಿದು ಬಂದವರಿಗೆ ಅಭಯದಾತರಾದರು. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡುವಾಗ ‘ಕೆಜೆಪಿ’ ಬಳಗಕ್ಕೆ ಪ್ರಾಶಸ್ತ್ಯ ನೀಡಿದರು. ಅಷ್ಟರಲ್ಲಾಗಲೇ ಕೊತಕೊತ ಕುದ್ದು ಹೋಗಿದ್ದ ಬಿಜೆಪಿ ನಾಯಕರ-ಮುಖಂಡರ ಆಕ್ರೋಶ ಸ್ಫೋಟಗೊಂಡೇಬಿಟ್ಟಿತು. ಈಶ್ವರಪ್ಪ, ಸಿ.ಟಿ ರವಿಯಾದಿಯಾಗಿ ಬಹುತೇಕ ಎಲ್ಲರೂ ಅತೃಪ್ತಿ ಹೊರಹಾಕಿದರು. ಅತೃಪ್ತರ ಬಾಣಕ್ಕೆ ಪ್ರತಿಯಾಗಿ ಶೊಭಾ ಕರಂದ್ಲಾಜೆ ಪ್ರತಿಬಾಣ ಹೂಡಿದರು. ಹೀಗೆ ನಿನ್ನೆ ನಡೆದ ಬಿಜೆಪಿ ಗೋಳು ತೋಡಿಕೊಳ್ಳುವ ಸಭೆ ರಣರಂಗವಾಗಿ ಮಾರ್ಪಟ್ಟಿತ್ತು.

   ಬಿಜೆಪಿಯವರು ಬೇರೆಯವರ ಬಗ್ಗೆ ಮಾತನಾಡುವ ಮೊದಲು ತಮ್ಮ ಕಾಲ ಕೆಳಗೆ ಎಷ್ಟು ಹೊಲಸಿದೆ ಎನ್ನುವುದನ್ನು ನೋಡಿಕೊಳ್ಳುವುದೇ ಇಲ್ಲ. ಆಮೇಲೆ ಅದೇ ಹೊಲಸಿನ ಮೇಲೆ ಕಾಲಿಟ್ಟು ಪೇಚಿಗೆ ಸಿಲುಕುತ್ತಾರೆ. ಬುದ್ಧಿ ಬರುವ ಮಾತು ಬಿಡಿ, ಅವರಿಗೆ ಅದು ಅರ್ಥವಾದರೂ ಸಾಕಿತ್ತು. ಮುಂದಿನ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ಯಡಿಯೂರಪ್ಪ ಮೊದಲು ತಮ್ಮ ಪಕ್ಷದ ಸಂಕಟವನ್ನು ಬಗೆಹರಿಸಲಿ. ಕಮಲವನ್ನು ಒದ್ದು, ಮತ್ತೆ ಕಮಲದ ಮೇಲೇ ಆಸೀನರಾಗಿರುವ ಅವರು ನೈತಿಕತೆಗೆ ಒತ್ತು ನೀಡುವುದನ್ನು ಕಲಿಯಲಿ. ಇದೀಗ ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದರೂ ಜನರೆದುರು ಬೆತ್ತಲಾದ ಸತ್ಯಕ್ಕೆ ಬಟ್ಟೆ ತೊಡಿಸಲಾಗುವುದಿಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s