ಚಾಟಿ ಬೀಸಿದ ಸಿದ್ದರಾಮಯ್ಯ

09BG_SID_PG-4_1883958f

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೊಮ್ಮೆ ಗುಡುಗಿದ್ದಾರೆ! ಹೌದು, ಜನರ ಹಿತ ಕಾಯಲು ಇರುವ ಅಧಿಕಾರಿಗಳ ಬೇಜವಾಬ್ದಾರಿ ನಡವಳಿಕೆಯಿಂದ ಅಸಮಾಧಾನಗೊಂಡಿರುವ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳನ್ನು ಕರೆದು ಸಭೆ ನಡೆಸಿ ಖಡಕ್ ಸೂಚನೆ ನೀಡಿದ್ದಾರೆ. ಈ ಮೂಲಕ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕಾರ್ಯ ಮಾಡಿದ್ದಾರೆ ಸಿದ್ದರಾಮಯ್ಯನವರು.

   ಸಿದ್ದರಾಮಯ್ಯನವರು ಮೊದಲಿನಿಂದಲೂ ಖಡಕ್ ರಾಜಕಾರಣಿ ಎಂದೇ ಹೆಸರಾದವರು. ಮುಖ್ಯಮಂತ್ರಿಯಾದ ಮೇಲೆ ಸಿಟ್ಟನ್ನು ಕಡಿಮೆ ಮಾಡಿಕೊಂಡಿದ್ದರೂ, ತಪ್ಪು ಕಂಡಾಗ ಚಾಟಿ ಬೀಸದೇ ಇರುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಇದೀಗ ವಿಧಾನಸೌಧದಲ್ಲಿ ನಡೆದ ಸಭೆಯಲ್ಲೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಹವಾನಿಯಂತ್ರಿತ ಕೊಠಡಿಗಳಿಂದ ಹೊರಬನ್ನಿ, ಹಳ್ಳಿಗಳ ಪರಿಸ್ಥಿತಿ ಹೇಗಿದೆ ಎಂದು ಖುದ್ದಾಗಿ ಪರಿಶೀಲಿಸಿ”, “ನಾನು ವಕೀಲ. ನನಗೂ ಪಾಟೀ ಸವಾಲು ಮಾಡಲು ಬರುತ್ತದೆ. ತಪ್ಪು ಮಾಹಿತಿ ನೀಡಬೇಡಿ. ಸಿಕ್ಕಾಕೊಳ್ತೀರಿ. ಹುಷಾರ್” ಹೀಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತ ಹಲವು ಮಹತ್ವದ ಸೂಚನೆಗಳನ್ನೂ ನೀಡಿದ್ದಾರೆ. ಲಂಚ ನೀಡಿ ಕೆಲಸ ಮಾಡಿಕೊಡುವ ಅಧಿಕಾರಿಗಳಿಗೆ ಜನರ ಶಾಪಕ್ಕೆ ತುತ್ತಾಗುತ್ತೀರಿ ಎಂದು ನೈತಿಕವಾಗಿಯೂ ಬುದ್ಧಿವಾದ ಹೇಳಿದ್ದಾರೆ. ಸಿದ್ದರಾಮಯ್ಯನವರ ಪ್ರತಿಯೊಂದು ಮಾತಿನಲ್ಲೂ ಎದ್ದು ಕಾಣುತ್ತಿರುವ ಅಂಶವೆಂದರೆ ಜನಪರ ಕಾಳಜಿ. ಒಬ್ಬ ಮುಖ್ಯಮಂತ್ರಿಯಾಗಿ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದಿರಬೇಕು ಎನ್ನುವ ಆಶಯದೊಂದಿಗೆ ಸಿದ್ದರಾಮಯ್ಯನವರು ಮಾತನಾಡಿದ್ದಾರೆ.

   ರಾಜ್ಯದ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಲು ಪ್ರತಿ ತಿಂಗಳು ಜಿಲ್ಲಾಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಕೇವಲ ಸಭೆ ನಡೆಸಿದರೆ ಸಾಲದು, ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿ, ಎಲ್ಲ ಹಂತದ ಅಧಿಕಾರಿಗಳು ಪಾಲ್ಗೊಳ್ಳಬೇಕು; ಅಹವಾಲು ಸ್ವೀಕರಿಸಿ, ಇತ್ಯರ್ಥ ಪಡಿಸಲಾದ ಪ್ರಕರಣಗಳ ಕುರಿತು ಸರ್ಕಾರಕ್ಕೆ ಅನುಸರಣಾ ವರದಿ ಸಲ್ಲಿಸಬೇಕು ಎಂದೂ ತಿಳಿಸಲಾಗಿದೆ. ಇನ್ನು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅದಕ್ಕಾಗಿಯೇ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಲು ಹೇಳಲಾಗಿದೆ. ಮೈತ್ರಿ-ಮನಸ್ವಿನಿ ಯೋಜನೆಗಳನ್ನು ಸಕಾಲ ವ್ಯಾಪ್ತಿಗೆ ಸೇರಿಸುವುದು, ಕೃಷಿ ಸಂಚಯ ಯೋಜನೆಯಡಿ ಜಿಲ್ಲಾ ನೀರಾವರಿ ಯೋಜನೆಗಳನ್ನು ಸರ್ಕಾರಕ್ಕೆ 2 ತಿಂಗಳಲ್ಲಿ ಸಲ್ಲಿಸುವುದು, ಒಂದು ವಾರದೊಳಗೆ ಉದ್ಯೋಗಖಾತ್ರಿ ಯೋಜನೆಯ ಹಣ ಪಾವತಿಯಾಗುವಂತೆ ನೋಡಿಕೊಳ್ಳುವುದು ಸೇರಿದಂತೆ ಹಲವು ಮಹತ್ವದ ಸೂಚನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ನೀಡಿದ್ದಾರೆ.

   ಸಿದ್ದರಾಮಯ್ಯನವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಪರದಾಡಿದ ಅಧಿಕಾರಿಗಳಿಗೆ “ಇದು ಇಲಾಖಾ ಮುಖ್ಯಸ್ಥರ ಸಭೆ. ಸಭೆಗೆ ಬರುವಾಗ ಹೋಂವರ್ಕ್ ಮಾಡಿಕೊಂಡು ಬರಬೇಕು” ಎನ್ನುವ ಮೂಲಕ ಹಾರಿಕೆಯ ಉತ್ತರಕ್ಕೆ ಬಗ್ಗುವ ಮುಖ್ಯಮಂತ್ರಿ ನಾನಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಜನರಿಗೆ ಯಾವ ರೀತಿಯಲ್ಲೂ ಅನ್ಯಾಯ ಅಥವಾ ತೊಂದರೆ ಆಗದ ರೀತಿ ನೋಡಿಕೊಳ್ಳಬೇಕು ಎನ್ನುವ ಸಿದ್ದರಾಮಯ್ಯನವರ ಮನಃಸ್ಥಿತಿ ನಿಜಕ್ಕೂ ಅಧಿಕಾರಿ ವರ್ಗಕ್ಕೆ ಮಾದರಿಯಾಗುವಂತಹುದು. ರಾಜಕೀಯವೆಂದರೆ ಬರೀ ಕೊಳಕಲ್ಲ, ಅಭಿವೃದ್ಧಿಯೆಡೆಗಿನ ನಡೆ ಎನ್ನುವುದನ್ನು ಸಿದ್ದರಾಮಯ್ಯರಂತಹ ಮೇರು ವ್ಯಕ್ತಿತ್ವಗಳು ತಮ್ಮ ಕೃತಿಯ ಮೂಲಕ ಆಗಾಗ ತೋರಿಸಿಕೊಡುತ್ತಿರುತ್ತಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s