‘ಕಾಮಾಲೆ ಕಣ್ಣಿ’ನವರ ನಡುವೆ..

siddaramaiah-kissed.jpg
ಕೆಲವು ಘಟನೆಗಳನ್ನು ನಾವು ಯಾವ ರೀತಿ ನೋಡುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಆ ಘಟನೆ ಅಥವಾ ಸಂದರ್ಭ ಬದಲಾಗುತ್ತದೆ. ಆದರೆ ಆ ಮೂಲಕ ಅವರ ಯೋಚನಾಲಹರಿ ಯಾವ ಮಟ್ಟದ್ದು ಎಂದು ತಿಳಿಯುವ ಅವಕಾಶ ದೊರೆಯುತ್ತದೆ. ಅದಕ್ಕೆ ಸೂಕ್ತ ಉದಾಹರಣೆ ಎಂದರೆ ನಿನ್ನೆ ನಡೆದ ‘ಮುತ್ತಿ’ನ ಘಟನೆ.
   ಮುತ್ತು ಯಾವುದೇ ಒಂದು ನಿರ್ದಿಷ್ಟ ಸಂದರ್ಭಕ್ಕೆ ಕಟ್ಟುಬಿದ್ದ ಕ್ರಿಯೆಯಲ್ಲ. ಅಪ್ಪ ಮಗಳಿಗೆ, ಮಗಳು ಅಪ್ಪನಿಗೆ, ಅಮ್ಮ ಮಗನಿಗೆ, ಮಗ ಅಮ್ಮನಿಗೆ, ಅಣ್ಣ ತಮ್ಮನಿಗೆ, ತಮ್ಮ ಅಣ್ಣನಿಗೆ, ಅಣ್ಣ ತಂಗಿಗೆ, ಅಕ್ಕ ತಮ್ಮನಿಗೆ, ಗೆಳೆಯ ಗೆಳತಿಗೆ ಹೀಗೆ ಅದೆಷ್ಟೋ ಸಂಬಂಧಗಳಲ್ಲಿ ಸಂದರ್ಭಕ್ಕನುಗುಣವಾಗಿ ಮುತ್ತು ನೀಡುವುದನ್ನು ನಾವು ನೋಡಬಹುದು. ಬಹುದಿನದ ಬಳಿಕ ಅಪ್ಪನನ್ನು ನೋಡಿದಾಗ ಪ್ರೀತಿಯಿಂದ ಮುತ್ತಿಡುವ ಮಗಳನ್ನು ನೋಡಿ ಏನೆಂದು ಅರ್ಥೈಸಬಹುದು? ತಂದೆ-ಮಗಳ ನಡುವಿನ ವಾತ್ಸಲ್ಯ-ಪ್ರೀತಿಯನ್ನು ಪವಿತ್ರ ಸಂಬಂಧ ಎಂದೇ ಅರ್ಥೈಸಲಾಗುತ್ತದೆ. ಆದರೆ ಹೀನ ಮನಃಸ್ಥಿತಿಯ, ಅಸಹ್ಯಗಳ ಮೂಟೆಯನ್ನೇ ತಲೆಯಲ್ಲಿ ಹೊತ್ತಿರುವ ವ್ಯಕ್ತಿಗಳು ಅದಕ್ಕೆ ಬೇರೆ ಆಯಾಮ ನೀಡುತ್ತಾರೆ. ಆ ಮೂಲಕ ವಿಕೃತ ಆನಂದ ಹೊಂದುತ್ತಾರೆ.
   ತರೀಕೆರೆ ತಾಲೂಕಿನ ಅಮೃತಾಪುರ ತಾ.ಪಂ ಸದಸ್ಯೆಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತಂದೆಯ ಸ್ಥಾನದಲ್ಲಿರಿಸಿ ಗೌರವದಿಂದ ಕಾಣುತ್ತಾ ಬಂದವರು. ತಂದೆಯ ಸ್ಥಾನದಲ್ಲಿರಿಸಿದ ವ್ಯಕ್ತಿ ಎದುರಿಗೇ ಬಂದಾಗ, ಸನ್ಮಾನ ಮಾಡಿದಾಗ ಅತ್ಯಂತ ಪ್ರೀತಿಯಿಂದ ಮುತ್ತು ನೀಡಿ ತಂದೆಯ ಸಾನಿಧ್ಯವನ್ನು ಅನುಭವಿಸಿದ್ದಾರೆ. ಮುಖ್ಯಮಂತ್ರಿಗಳೂ ಸಹ “ಆಕೆ ನನಗೆ ಮಗಳ ಸಮಾನ” ಎನ್ನುವ ಮೂಲಕ ಆಕೆಯೆಡೆಗೆ ಇರುವ ಭಾವನೆಯನ್ನು ಹೇಳಿಕೊಂಡಿದ್ದಾರೆ. ಆದರೆ ‘ಕಾಮಾಲೆ’ ಕಣ್ಣಿನ ಮಹಾಪುರುಷರು ಮಾತ್ರ ಇದನ್ನು ಅತ್ಯಂತ ಕೀಳುಮಟ್ಟದಲ್ಲಿ ಬಣ್ಣಿಸುತ್ತಿದ್ದಾರೆ.
   ಮಗಳು ಅಪ್ಪನಿಗೆ ಅಥವಾ ಅಪ್ಪನ ಸ್ಥಾನದಲ್ಲಿರುವ ವ್ಯಕ್ತಿಗೆ ಪ್ರೀತಿಯಿಂದ ಮುತ್ತು ನೀಡುವುದು ತಪ್ಪೆ? ಹೀಗೆ ಪ್ರಶ್ನೆ ಹುಟ್ಟುವಂತೆ ಮಾಡಿದ್ದಾರೆ ‘ಕಾಮಾಲೆ’ ಕಣ್ಣಿನ ಮಹಾನುಭಾವರು. ಮಹಾನುಭಾವರೇ, ನಿಮಗೂ ಮಗಳಿದ್ದರೆ, ಆ ಮಗಳು ನಿಮಗೆ ಪ್ರೀತಿಯಿಂದ ಮುತ್ತು ನೀಡಲು ಬಂದರೆ ದಯವಿಟ್ಟು ಸುತ್ತಮುತ್ತ ಯಾರಾದರೂ ಇದ್ದಾರಾ ಎಂದು ನೋಡಿಕೊಳ್ಳಿ. ಯಾಕೆಂದರೆ ನಿಮ್ಮಂತದ್ದೇ ಕಾಮಾಲೆ ಕಣ್ಣಿನ ಅಯೋಗ್ಯರು ಅದನ್ನು ನೋಡಿ ಪುಕಾರು ಹಬ್ಬಿಸಿಬಿಟ್ಟಾರು, ಜೋಕೆ!
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s