ಬಿಜೆಪಿಗರೇ, ಕೇವಲ ಮಾತು ಹೊಟ್ಟೆ ತುಂಬಿಸಲಾರದು!

bjpspeech

ರಾಜಕೀಯವೆಂದರೇ ಹಾಗೆ.. ಮಾತಿನಲ್ಲೇ ಅರಮನೆ ಕಟ್ಟುವುದು, ಮಾತಿನಲ್ಲೇ ಮೋಡಿ ಮಾಡುವುದು. ನಂತರ ಮತ ಸಿಗುತ್ತಿದ್ದಂತೆ ಮತದಾರರ ಜೊತೆ ಮಾತೇ ನಿಲ್ಲಿಸಿಬಿಡುವುದು! ಇಂತಹುದೊಂದು ಅನಾಹುತಕಾರಿ ನಡೆಯನ್ನು ಅದೆಷ್ಟೋ ವರ್ಷದಿಂದ ಮತದಾರರು ನೋಡುತ್ತಾ ಬಂದಿದ್ದರೂ ಸಹ, ಮತ್ತೆ ಮತ್ತೆ ಮಾತಿಗೆ ಮರುಳಾಗುತ್ತಿದ್ದಾರೆ. ಈ ಮಾತಿನ ಇತಿಹಾಸಕ್ಕೆ ಹಾಗೂ ವರ್ತಮಾನಕ್ಕೆ ಬಿಜೆಪಿಯಿಂದ ಬಹುದೊಡ್ಡ ಕೊಡುಗೆಯಿದೆ!

   ಭಾರತೀಯ ಜನತಾ ಪಕ್ಷವನ್ನೊಮ್ಮೆ ಗಮನಿಸಿದರೆ ನಿಮಗೆ ಅರ್ಥವಾಗಬಹುದು, ಅಲ್ಲಿರುವ ಮಂದಿಯೆಲ್ಲಾ ಭಯಾನಕ ಮಾತುಗಾರರೇ! ರಾಜ್ಯ ರಾಜಕಾರಣದಿಂದ ಹಿಡಿದು ರಾಷ್ಟ್ರ ರಾಜಕಾರಣದಲ್ಲೂ ಅವರು ಗುರುತಿಸಿಕೊಂಡಿದ್ದರೆ ಅದು ಕೇವಲ ಮಾತಿನಿಂದ ಎಂಬುದರಲ್ಲಿ ಎರಡು ಮಾತಿಲ್ಲ. ಕರ್ನಾಟಕದ ಜನ ಬಿಜೆಪಿಯ ಮಾತಿನ ಮೋಡಿಗೆ ಮೋಸ ಹೋಗಿ ಬುದ್ಧಿ ಕಲಿತಿದ್ದಾರೆ. ದೇಶದ ಜನ ಇದೀಗ ತಾವು ಮಾತಿನ ಮೋಡಿಗೆ ಮೋಸ ಹೋಗಿರುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.

   ಮೋದಿಯವರು ಇವತ್ತು ಪ್ರಧಾನಿಯ ಸ್ಥಾನದಲ್ಲಿದ್ದಾರೆ ಎಂದಾದರೆ ಅದರಲ್ಲಿ ‘ಮಾತಿನ’ ಪಾತ್ರ ಬಹಳ ದೊಡ್ಡದು. ಇದೀಗ ಅವರು ಹೇಳಿದ ಮಾತಿಗೂ, ಕೃತಿಗೂ ಸಂಬಂಧವೇ ಇಲ್ಲವಾಗಿ ಜನರು ತಾವು ಮೂರ್ಖರಾಗಿದ್ದರ ಕುರಿತು ತಮ್ಮ-ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ. ‘ಕಪ್ಪು ಹಣ’, ‘ಖಾತೆಯಲ್ಲಿ 15 ಲಕ್ಷ ಜಮೆ’.. ಅಬ್ಬಾ!! ಇದು ಕೇವಲ ಒಂದೆರಡು ಉದಾಹರಣೆ. ಮೋದಿಯ ಇಂತದ್ದೇ ಮಾತುಗಳು ಹಲವಾರಿವೆ ಹಾಗೂ ಇಂದಿಗೆ ಅವು ಜನಪ್ರಿಯ ಜೋಕುಗಳಾಗಿವೆ. ರಾಜ್ಯದಲ್ಲೂ ಸಹ ಪಕ್ಕಾ ಜೋಕುಗಳನ್ನು ಮಾಡುವ ಬಿಜೆಪಿ ಮುಖರ್()ಂಡರುಗಳಿದ್ದಾರೆ. ಅವರಲ್ಲಿ ಇದೀಗ ಪ್ರಮುಖರಾಗಿರುವವರು ಬಿ.ಎಸ್ ಯಡಿಯೂರಪ್ಪ!

   ‘ಕಾಂಗ್ರೆಸ್ ಮುಕ್ತ’ ಎನ್ನುವ ಮೂಲಕ ತೀರ ಇತ್ತೀಚೆಗೆ ಕರ್ನಾಟಕದ ಜನತೆಯಿಂದ ಛೀಮಾರಿ ಹಾಕಿಸಿಕೊಂಡಿದ್ದರು ಯಡಿಯೂರಪ್ಪ. ಮಾತಿನ ಮೂಲಕ ಮಾಯಾಲೋಕ ತೋರಿಸಿ ಅಧಿಕಾರಕ್ಕೇರಿದ್ದ ಅವರು, ಮಾತನಾಡುತ್ತಲೇ ಮಾಡಬಾರದ್ದನ್ನೆಲ್ಲ ಮಾಡಿಬಿಟ್ಟರು. ಅದರ ಪರಿಣಾಮವಾಗಿ ಜೈಲಿನಲ್ಲಿ ಕುಳಿತು ತಮ್ಮ-ತಮ್ಮಲ್ಲೇ ಮಾತನಾಡಿಕೊಳ್ಳುವ ಸ್ಥಿತಿ ಅವರಿಗೆ ಬಂದೊದಗಿತು. ಇದೀಗ ಮತ್ತೊಮ್ಮೆ ಮಾತನಾಡಲು ತೊಡಗಿದ್ದಾರೆ. ಜನರು ಮತ್ತೆ ಮಾತಿನ ಮೋಡಿಗೆ ಸಿಲುಕರಾರರು ಎನ್ನುವುದು ಇನ್ನೂ ಅವರ ಅರಿವಿಗೆ ಬಂದಂತಿಲ್ಲ.

   ಬಿಜೆಪಿಯ ಮಾತುಗಾರಿಕೆಯ ಪರಂಪರೆ ಇನ್ನು ಮುಂದೆ ಪರಿಣಾಮ ಬೀರದು ಎನ್ನುವ ಕನಿಷ್ಠ ಪ್ರಜ್ಞೆಯೂ ಪಕ್ಷದವರಿಗಿಲ್ಲದಿರುವುದು ವಿಪರ್ಯಾಸವೇ ಸರಿ. ಕೃತಿಯನ್ನು ಜನರು ಗಮನಿಸುತ್ತಾರೆಯೇ ಹೊರತು, ಮಾತನ್ನಲ್ಲ. ಮಾತೂ ಬೇಕು, ಆದರೆ ಎಷ್ಟಕ್ಕೆ ಮಾತ್ರವೋ ಅಷ್ಟೆ. ಊಟಕ್ಕಿಂತ ಉಪ್ಪಿನಕಾಯಿಯೇ ಜಾಸ್ತಿಯಾದರೆ ಎಂಥವರಿಗೂ ಹಿಡಿಸುವುದಿಲ್ಲ. ಹಾಗೆಯೇ, ಕೇವಲ ಮಾತು ನಿಮಗೆ ಮತಹಾಕಿದವರ ಹೊಟ್ಟೆ ತುಂಬಿಸುವುದಿಲ್ಲ!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s