ಜನಪರ-ಅಭಿವೃದ್ಧಿಪರ ಕರ್ನಾಟಕ ಸರ್ಕಾರ

bg1

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಜನಪರ ನಿಲುವುಗಳಿಂದಾಗಿಯೇ ದೇಶದ ಗಮನ ಸೆಳೆದಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದಂತಹ ಯೋಜನೆಗಳನ್ನು, ನೀತಿಗಳನ್ನು ಜಾರಿಗೊಳಿಸಿ ಹಲವು ಪ್ರಥಮಗಳಿಗೆ ನಾಂದಿ ಹಾಡಿದೆ. ಕೆಲವನ್ನು ಕೇಂದ್ರವೂ ಸಹ ಅಳವಡಿಸಿಕೊಂಡಿರುವುದು ಯೋಜನೆಗಳ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.

   ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ. ಇನ್ನೂ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಕರ್ನಾಟಕ ಸರ್ಕಾರದ್ದು. ರಾಜ್ಯದಲ್ಲಿ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಉತ್ತೇಜನ ನೀಡುವ ಜೊತೆಜೊತೆಗೇ ಉದ್ಯೋಗ ಸೃಷ್ಟಿ ಮಾಡಲು ‘ಕರ್ನಾಟಕ ಚಿಲ್ಲರೆ ಮಾರಾಟ ನೀತಿ – 2015’ಕ್ಕೆ ಅನುಮೋದನೆ ನೀಡಲಾಗಿದೆ. ಚಿಲ್ಲರೆ ವಹಿವಾಟು ನಡೆಸುವವರು ದವಸ-ಧಾನ್ಯಗಳ ಹೆಚ್ಚುವರಿ ಸಂಗ್ರಹ, ನಗರ ಪ್ರದೇಶಗಳಲ್ಲಿ ಚಿಲ್ಲರೆ ವಹಿವಾಟು ನಡೆಸುವ ಅಂಗಡಿಗಳಿಗೆ ಸಣ್ಣ ಕೈಗಾರಿಕೆಗಳ ಸ್ಥಾನಮಾನ, ಕೈಗಾರಿಕಾ ಪ್ರತಿಭಟನೆ ಮತ್ತು ನಾಗರಿಕ ಗಲಭೆಗಳ ಸಂದರ್ಭದಲ್ಲಿ ತಡೆರಹಿತ ಸೇವೆ ಒದಗಿಸುವುದು ಸೇರಿದಂತೆ ಹಲವು ವಿಷಯಗಳು ಈ ನೀತಿಯಲ್ಲಿ ಅಡಕವಾಗಿವೆ.

   ಇನ್ನು ಎಲ್ಲ ವರ್ಗದವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಕೈಗೆಟುಕುವ ದರದಲ್ಲಿ ಮನೆಗಳನ್ನು ಒದಗಿಸಲು ‘ಕರ್ನಾಟಕ ಧಾರಣೀಯ ವಸತಿ ನೀತಿ’ಯನ್ನು ಅನುಮೋದಿಸಲಾಗಿದೆ. ಈ ಮೂಲಕ ಹಲವು ಜನರ ಸೂರಿನ ಕನಸನ್ನು ನನಸಾಗಿಸುವತ್ತ ಮಹತ್ವದ ಹೆಜ್ಜೆಯಿಟ್ಟಿದೆ ಸಿದ್ದರಾಮಯ್ಯ ಸರ್ಕಾರ. ರಾಜ್ಯದಲ್ಲಿ 280 ಕೊಳೆಗೇರಿ ಪ್ರದೇಶಗಳಿದ್ದು, 7.50 ಲಕ್ಷ ಜನ ಅಲ್ಲಿ ವಾಸವಾಗಿದ್ದಾರೆ. ಅಂತಹ ಪ್ರದೇಶಗಳಲ್ಲಿ ಕುಡಿಯುವ ನೀರು, ಒಳಚರಂಡಿ, ಕಚ್ಚಾ ಮನೆಗಳ ಪುನರ್‍ನಿರ್ಮಾಣ ಮತ್ತಿತರ ಸೌಲಭ್ಯಗಳನ್ನು ವಿಸ್ತರಿಸಲು ‘ಕರ್ನಾಟಕ ರಾಜ್ಯ ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿ ನೀತಿ’ಗೂ ಅನುಮೋದನೆ ನೀಡಲಾಗಿದೆ. ತಳಮಟ್ಟದಿಂದ ಸುಧಾರಣೆಯಾದಾಗ ಮಾತ್ರ ಸಮಾಜ ಸುಭದ್ರವಾಗಿರಲು ಸಾಧ್ಯ. ಅದೇ ರೀತಿ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಶ್ರಮಿಸುತ್ತಿದೆ.

   ಈ ರೀತಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕರ್ನಾಟಕ ಸರ್ಕಾರ ಒಂದಾದಮೇಲೊಂದರಂತೆ ಕೈಗೆತ್ತಿಕೊಳ್ಳುತ್ತಿದೆ. ‘ನಾಡನ ಕಟ್ಟಕಡೆಯ ವ್ಯಕ್ತಿಯೂ ನೆಮ್ಮದಿಯಿಂದ ಬದುಕಬೇಕು’ ಎನ್ನುವ ಸಿದ್ದರಾಮಯ್ಯನವರ ಕನಸು ಹಂತಹಂತವಾಗಿ ನನಸಾಗುತ್ತಿದೆ. ಕರ್ನಾಟಕ ಉಜ್ವಲ ಭವಿಷ್ಯದತ್ತ ದಾಪುಗಾಲಿಡುತ್ತಿದೆ.

Advertisements

One thought on “ಜನಪರ-ಅಭಿವೃದ್ಧಿಪರ ಕರ್ನಾಟಕ ಸರ್ಕಾರ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s