ಕೇಂದ್ರದಿಂದ ‘ಅನ್ನದಾತ’ನಿಗೆ ಅನ್ಯಾಯ

farmer_trek

‘ಕೃಷಿ ಆದಾಯವನ್ನು ದ್ವಿಗುಣಗೊಳಿಸುತ್ತೇವೆ’ ಎಂದ ಪ್ರಧಾನಿಮೋದಿಯವರ ಮಾತು ಪ್ರಚಾರಕ್ಕಷ್ಟೇ ಸೀಮಿತವಾಗಿರಬಹುದು ಎನ್ನುವ ಅನುಮಾನ ಕಾಡತೊಡಗಿದೆ. ಯಾಕೆಂದರೆ ಅವರ ಮಾತಿಗೂ, ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ. ರೈತರ ಆದಾಯ ದ್ವಿಗುಣಗೊಳಿಸುವ ಮಾತು ಬದಿಗಿರಲಿ, ರೈತರ ಆದಾಯಕ್ಕೇ ಕತ್ತರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ರೈತರ ನಡುಮುರಿಯುವ ಕೆಲಸವಾಗುತ್ತಿದೆ ಎಂದರೆ ತಪ್ಪಾಗಲಾರದು.

   ಬೆಂಬಲ ಬೆಲೆ ಕಾಟಾಚಾರಕ್ಕೆ ಘೋಷಣೆ ಮಾಡುವುದಲ್ಲ. ಅದರ ಹಿಂದೆ ರೈತನ/ಕೃಷಿಕನ ಭವಿಷ್ಯದ ಪ್ರಶ್ನೆಯಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷ ಕನಿಷ್ಠ ಇಂತಿಷ್ಟು ಬೆಂಬಲ ಬೆಲೆ ಹೆಚ್ಚಾದರೆ ಮಾತ್ರ ರೈತನ ಮೊಗದಲ್ಲಿ ನಗು ನೋಡಬಹುದು ಎನ್ನುವ ಲೆಕ್ಕಾಚಾರವಿರುತ್ತದೆ. ಕಳೆದ ವರ್ಷಕ್ಕಿಂತ ಕನಿಷ್ಠ ಶೇ.15ರಷ್ಟು ಬೆಂಬಲ ಬೆಲೆ ಹೆಚ್ಚಾದರೆ ಮಾತ್ರ ಕೃಷಿ ಲಾಭದಾಯಕವಾಗುತ್ತದೆ. ಆದರೆ ಕೇಂದ್ರ ಸರ್ಕಾರ ಸರಾಸರಿ ಶೇ.4.18ರಷ್ಟು ಬೆಂಬಲ ಬೆಲೆ ಹೆಚ್ಚು ಮಾಡಿದೆ. ಹೀಗಿರುವಾಗ ಆದಾಯ ‘ದ್ವಿಗುಣ’ಗೊಳಿಸುವ ಮಾತು ಎಲ್ಲಿಂದ ಬಂತು. ಕಳೆದ ಒಂದು ವರ್ಷದಲ್ಲಿ ಒಟ್ಟೂ ಹಣದುಬ್ಬರ (ಒಟ್ಟೂ ವೆಚ್ಚಗಳ ಏರಿಕೆ) ಶೇ.5.5ರಷ್ಟು ಹೆಚ್ಚಾಗಿದೆ. ಆದರೂ ಸಹ ರೈತನ ಪಾಡು ‘ಅದೇ ರಾಗ, ಅದೇ ಹಾಡು’.

   ಕೇಂದ್ರ ಸರ್ಕಾರ ನಿಗದಿ ಮಾಡುವ ಬೆಂಬಲ ಬೆಲೆಯ ಜೊತೆ ರಾಜ್ಯ ಸರ್ಕಾರವೂ ಪ್ರೋತ್ಸಾಹಧನ ನೀಡುತ್ತದೆ. ಕೇಂದ್ರ ಸರ್ಕಾರ ಕಳೆದ ವರ್ಷ ರಾಗಿಗೆ ರೂ.1,650 ಮತ್ತು ಬಿಳಿಜೋಳಕ್ಕೆ ರೂ.1,600 ಬೆಂಬಲ ಬೆಲೆ ನಿಗದಿ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಸೇರಿಸಿ ರೂ.2,100 ಮೊತ್ತವನ್ನು ರೈತರಿಗೆ ನೀಡಿದೆ. ರಾಜ್ಯ ಸರ್ಕಾರ ಪ್ರೋತ್ಸಾಹಧನ ಸೇರಿಸಿ ಕೊಡುತ್ತಿರುವುದು ರೈತರ ಪಾಲಿಗೆ ಸಮಾಧಾನದ ಸಂಗತಿ.

   ರೈತರ ಶ್ರೇಯೋಭಿವೃದ್ಧಿಯ ಮಾತನ್ನಾಡಿದರಷ್ಟೇ ಸಾಲದು, ಅದಕ್ಕೆ ಪೂರಕವಾಗಿ ಸರ್ಕಾರ ಸ್ಪಂದಿಸುವುದನ್ನೂ ಕಲಿಯಬೇಕು. ರೈತ ಮಾತಿನಲ್ಲಿ ಬೆಳೆ ಬೆಳೆಯುವುದಿಲ್ಲ, ಕೆಲಸ ಮಾಡಿ ಭೂಮಿಯಲ್ಲಿ ಬೆಳೆ ಬೆಳೆದು ತೋರಿಸುತ್ತಾನೆ. ಮಾನ್ಯ ಪ್ರಧಾನಿಯವರು ಇದರಿಂದ ಕಲಿಯುವಂತದ್ದಿದೆ ಎಂದರೆ ಅತಿಶಯೋಕ್ತಿಯಾಗಲಾರದೇನೋ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s