ವಿಶನ್ ಗ್ರೂಪ್‍ನ ಅವಶ್ಯಕತೆ

Credits-Young-Indian-Website

ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಬೆಂಗಳೂರು ಪ್ರಮುಖವಾದದ್ದು. ನಗರದ ಬೆಳವಣಿಗೆ ವೇಗ ಪಡೆದುಕೊಂಡಂತೆಲ್ಲ, ಸಮಸ್ಯೆಗಳೂ ಬೆಟ್ಟದಂತೆ ಏರುತ್ತಾ ಹೋಗುತ್ತವೆ. ತ್ಯಾಜ್ಯ ನಿರ್ವಹಣೆ, ಟ್ರಾಫಿಕ್ ಜಾಮ್, ನೀರಿನ ಅಭಾವ, ವಿದ್ಯುತ್ ಸಮಸ್ಯೆ, ಮಾಲಿನ್ಯ ಹೀಗೆ ತರಹೇವಾರಿ ಸಮಸ್ಯೆಗಳು ಎದುರಾಗುತ್ತಾ ಹೋಗುತ್ತವೆ. “ಏನ್ರಿ ಇದು, ಇಷ್ಟೊಂದು ಸಮಸ್ಯೆ ಇದೆ, ಸರ್ಕಾರ ಗಮನಾನೇ ಕೊಡ್ತಾ ಇಲ್ವಲ್ರೀ” ಎಂದು ರಾಗ ಎಳೆಯುವವರಿಗೇನೂ ಕಡಿಮೆಯಿಲ್ಲ. ಆದರೆ ಆಡಳಿತಾರೂಢ ಸರ್ಕಾರಕ್ಕೆ ಹಲವು ಜವಾಬ್ದಾರಿಗಳ ನಡುವೆ ಇದೂ ಒಂದು ಎಂಬ ಅರಿವು ರಾಗ ಎಳೆಯುವವರಿಗಿರುವುದಿಲ್ಲ, ಬದಲಿಗೆ ಬರೀ ಅವರ ಕಾಲಬುಡದಲ್ಲಿರುವ ಸಮಸ್ಯೆಯನ್ನು ನೋಡುತ್ತಾ ಕೂರುವುದು ಸರ್ಕಾರದ ಕೆಲಸ ಎಂಬಂತೆ ಮಾತಿನ ಧಾಟಿಯಿರುತ್ತದೆ.

   ಬೆಂಗಳೂರು ಬೆಳವಣಿಗೆಯ ದಾಪುಗಾಲಿಡುತ್ತಿರುವಂತೆಯೇ ದೂರಗಾಮಿ ಯೋಜನೆಗೆ ಸಾಂಸ್ಥಿಕ ಸ್ವರೂಪದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ), ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (ಬಿ.ಎಂ.ಆರ್.ಡಿ.ಎ), ಮತ್ತು ಮಹಾನಗರ ಯೋಜನಾ ಸಮಿತಿ (ಎಂ.ಪಿ.ಸಿ) ಎನ್ನುವ ಮೂರು ಪ್ರಾಧಿಕಾರಗಳು ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಬಿ.ಎಂ.ಪಿ.ಸಿ ಇತ್ತೀಚೆಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಆದರೆ ಅದರ ಕೆಲಸವನ್ನು ಪರಿಣಾಮಕಾರಿಯಾಗಿಸಲು ಎಲ್ಲ ರೀತಿಯ ತಯಾರಿ ಮಾಡಲಾಗಿದೆ. ಅದರಲ್ಲಿ ಪ್ರಮುಖವಾದದ್ದು ‘ಬೆಂಗಳೂರು ನೀಲನಕ್ಷಾ ಕ್ರಿಯಾ ತಂಡ’ (ಬಿಬಿಪಿಎಜಿ).

   ವಿಶನ್ ಗ್ರೂಪ್ ಎಂದು ಕರೆಯಲ್ಪಡುವ ಬಿಬಿಪಿಎಜಿ, ಬೆಂಗಳೂರಿನ ಸಮಗ್ರ ಅಭಿವೃದ್ಧಿ ಯೋಜನೆ ತಯಾರಿಸುವಂತಹ ಮಹತ್ತರ ಜವಾಬ್ದಾರಿ ಹೊಂದಿದೆ. ಬಿ.ಎಂ.ಪಿ.ಸಿಗೆ ಅಗತ್ಯವಾದ ಸಲಹೆಗಳನ್ನು ನೀಡಲು ಕಟಿಬದ್ಧವಾಗಿರುವ ವಿಶನ್ ಗ್ರೂಪ್, ಖ್ಯಾತ ಉದ್ಯಮಿಗಳನ್ನು ಹಾಗೂ ಅಭಿವೃದ್ಧಿಗೆ ಪೂರಕವಾಗಿ ಯೋಚಿಸುವವರನ್ನು ತಂಡದಲ್ಲಿ ಹೊಂದಿದೆ. ಬೆಂಗಳೂರು ಅಭಿವೃದ್ಧಿ ಪಥದಲ್ಲಿ ಯಶಸ್ವಿಯಾಗಿ ಸಾಗಲು, ಸಮಗ್ರ ಬೆಳವಣಿಗೆ ಹೊಂದಲು ಸರಿಯಾದ ಯೋಜನೆ ಬೇಕಾಗುತ್ತದೆ. ಅದನ್ನು ಸಿದ್ಧಪಡಿಸಲು ವಿಶನ್‍ಗ್ರೂಪ್ ಅತ್ಯಂತ ಸಹಾಯಕವಾಗಿದೆ. ವಿಶನ್ ಗ್ರೂಪ್ ನೀಡುವ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಬಿ.ಎಂ.ಪಿ.ಸಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಅಂಗೀಕರಿಸುತ್ತದೆ. ಆದ್ದರಿಂದ ವಿಶನ್ ಗ್ರೂಪ್‍ನ ಅಸ್ತಿತ್ವ ಅತ್ಯಂತ ಮಹತ್ವವಾದದ್ದು.

   ವಿಶನ್ ಗ್ರೂಪ್‍ನ ಅವಶ್ಯಕತೆ ಇಂತಿದ್ದರೂ, ಕೆಲವರು ವಿರೋಧಿಸುತ್ತಿದ್ದಾರೆ. ಆದರೆ ಇದರ ಕಾರ್ಯನಿರ್ವಹಣೆ ಬೆಂಗಳೂರಿನ ಅಭಿವೃದ್ಧಿಗೆ-ಪ್ರಗತಿಗೆ ಸಹಾಯಕವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s