‘ಅಚ್ಛೆ ದಿನ್’ ಎಂಬ ಹೊರಳಾಟ-ನರಳಾಟ

cess‘ಅಚ್ಛೆ ದಿನ್ ಅಚ್ಛೆ ದಿನ್’ ಎಂದು ಆಸೆಕಂಗಳಿಂದ ನೋಡುತ್ತಿದ್ದ ಮುಗ್ಧ ಜನರನ್ನು ನಿರಾಸೆಗೊಳಿಸಿದ್ದಾರಾ ಮೋದಿ? ಕೇಂದ್ರ ಸರ್ಕಾರದ ಇತ್ತೀಚಿನ ನಡೆಗಳನ್ನು ನೋಡಿದರೆ ‘ಹೌದು’ ಎಂದೇ ಉತ್ತರಿಸಬೇಕಾಗುತ್ತದೆ. ‘ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲವೂ ಬದಲಾಗುತ್ತದೆ, ಸ್ವರ್ಗವೇ ಧರೆಗಿಳಿದು ಬರುತ್ತದೆ’ ಎನ್ನುವಂತಹ ಅತಿರೇಕದ ಅರ್ಥ ಕೊಡುವಂತಹ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ಮೋದಿ ಎನ್ನುವ ಪಕ್ಕಾ ವ್ಯಾಪಾರಿ ಮುಗ್ಧ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಭರವಸೆ-ವಿಶ್ವಾಸಗಳಿಗೆ ಕೊಳ್ಳಿ ಇಟ್ಟಿದ್ದಾನೆ. ಆದರೆ ಹೊತ್ತಿ ಉರಿಯುವ ಜ್ವಾಲೆ ತನ್ನನ್ನೇ ಸುಡಲಿದೆ ಎಂದು ಮೋದಿಗೆ ಅರಿವಾಗದಿರುವುದು ವಿಷಾದಕರ.

   ‘ಭಾರತದ ಜಿಡಿಪಿ ಪ್ರಗತಿದಾಯಕವಾಗಿದೆ’ ಎಂದು ಹೇಳುತ್ತಾ ಜನರ ತಲೆಯ ಮೇಲೆ ತೆರಿಗೆಯ ಭಾರ ಹೊರಿಸಿದ್ದನ್ನು ಮರೆಸಲು ಹೊರಟಿದೆ ಕೇಂದ್ರ ಸರ್ಕಾರ. ಜಿಡಿಪಿ ಕುರಿತಂತೆ ‘ಡಿಜಿಟಲ್ ಕನ್ನಡ’ ಜಾಲತಾಣದಲ್ಲಿ ಪ್ರಕಟವಾದ ಬರಹವೊಂದರಲ್ಲಿ ಉತ್ತಮ ಉದಾಹರಣೆ ನೀಡಲಾಗಿದೆ ಮತ್ತು ಅದರ ಯಥಾವತ್ತು ಇಲ್ಲಿದೆ –

“ಇಪ್ಪತ್ತು ಸಾವಿರ ಸಂಬಳ ಪಡೆಯುವವ ನಂಗೆ ಈ ಬಾರಿ 10 ಪರ್ಸೆಂಟ್ ಹೈಕ್ ಆಗಿದೆ, ಆದ್ರೆ ಒಂದೂವರೆ ಲಕ್ಷ ರೂಪಾಯಿ ಸಂಬಳ ಪಡೆಯುವ ಬಾಸಿಗೆ ಎಂಟೇ ಪರ್ಸೆಂಟ್ ಹೆಚ್ಚಳವಾಗಿದೆಯಂತೆ.. ಹಂಗಾಗಿ ನಾನೇ ಗೆದ್ದೆ ಎಂದು ಸಂಭ್ರಮಿಸಿದರೆ ಎಷ್ಟು ಅರ್ಥಪೂರ್ಣ ಎನಿಸುತ್ತದೆಯೋ ಅಷ್ಟೇ ಈ ಸಡಗರಕ್ಕೂ ಇದೆ.”

   ಈ ಒಂದು ಉದಾಹರಣೆ ಜಿಡಿಪಿ ಎಂಬ ಅರ್ಥವಾಗದ ಅಂಕಿಅಂಶಗಳ ವಾಸ್ತವತೆಯನ್ನು ನಮ್ಮೆದುರು ತೆರೆದಿಡುತ್ತದೆ. ಜಿಡಿಪಿ ಪ್ರಗತಿಯಾಗಲಿ ಬಿಡಲಿ, ಜನಸಾಮಾನ್ಯನ ಬದುಕನ್ನು, ಆತನ ಸ್ಥಿತಿಗತಿಯನ್ನು ಅಳೆಯುವುದು ದಿನನಿತ್ಯದ ಅನುಭವಗಳಲ್ಲೇ ಹೊರತು ಜಿಡಿಪಿಯಿಂದಲ್ಲ. ಇದೀಗ ಸೇವಾ ತೆರಿಗೆಯನ್ನು ಶೇ.15ಕ್ಕೆ ತಂದು ನಿಲ್ಲಿಸಲಾಗಿದೆ. ಅದರಲ್ಲಿ ಕೃಷಿ ಕಲ್ಯಾಣ ಸೆಸ್ ಎಂದು ಶೇ.0.5ರಷ್ಟು ವಸೂಲಿಗಿಳಿದಿದೆ ಮೋದಿ ಸರ್ಕಾರ. ಸ್ವಚ್ಛ ಭಾರತ ಸೆಸ್ ಎಂದು ಕಳೆದ ವರ್ಷ ಶೇ.0.5ರಷ್ಟು ಹೆಚ್ಚಳ ಮಾಡಲಾಗಿತ್ತು.

   ಮೋದಿ ಅನುಯಾಯಿಗಳು (ಭಕ್ತರು ಎನ್ನುವುದು ವ್ಯಾಪಕ ಬಳಕೆ) ಅದೆಷ್ಟು ಅಂಧರಾಗಿದ್ದಾರೆಂದರೆ, ತಮ್ಮ ಹಣವನ್ನೇ ಕೇಂದ್ರ ಏಳೆದೆಳೆದು ತೆಗೆದುಕೊಳ್ಳುತ್ತಿದೆ, ಈ ಮೂಲಕ ದಿನನಿತ್ಯದ ಅನೇಕ ಸೇವೆಗಳ ಮೇಲೆ ಹೆಚ್ಚುವರಿ ಹಣ ನೀಡಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಕಣ್ಣುಮುಚ್ಚಿಬಿಟ್ಟಿದೆ. ರೈಲು ಪ್ರಯಾಣ, ವಿಮೆ, ಆರೋಗ್ಯ ಚೆಕ್‍ಅಪ್, ಮೊಬೈಲ್ ಬಿಲ್, ಎಟಿಎಂ ಶುಲ್ಕ..ಹೀಗೆ ಮಧ್ಯಮವರ್ಗದ ಜನರು ಏನೆಲ್ಲಾ ಸೌಲಭ್ಯ ಪಡೆಯುತ್ತಾರೋ ಅಂತಹ ಗರಿಷ್ಠ ಸೇವೆಗಳ ಮೇಲೆ ತೆರಿಗೆ ಎನ್ನುವ ಭೂತವನ್ನು ತಂದು ಕೂರಿಸಿದ್ದಾರೆ ಮೋದಿ.

   ಮೋದಿ ಬೆಂಬಲಿಗರು ನೆನಪಿನಲ್ಲಿಡಬೇಕಾದ ಒಂದು ಅಂಶವಿದೆ. ತೆರಿಗೆ ಏರಿಕೆಯು ನಿಮ್ಮ ವಿರೋಧಿಗಳಿಗೆ ಮಾತ್ರ ಅನ್ವಯಿಸುವುದಲ್ಲ, ಅದರಲ್ಲಿ ನೀವೂ ಒಳಗೊಳ್ಳುತ್ತೀರಿ. ಇದು ಮೋದಿ ನಿಧಾನವಾಗಿ ವಿಷ ಕಕ್ಕುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆ. ದಿನನಿತ್ಯದ ಸೇವೆಗಳು ದುಬಾರಿಯಾಗಿ ಕುತ್ತಿಗೆಗೆ ಬರುವ ಹೊತ್ತಿಗೆ ನಿಮ್ಮ ಸಹಾಯಕ್ಕೆ ಮೋದಿ ಬರಲಾರ. ‘ಅಚ್ಛೆ ದಿನ್’ ಎನ್ನುವ ಕಲ್ಪನೆಯ ಲೋಕವನ್ನು ಮೋದಿ ನಿಮ್ಮಲ್ಲಿ ಚೆನ್ನಾಗೇ ಬಿತ್ತಿದ್ದಾರೆ ಬಿಡಿ.

Advertisements

2 thoughts on “‘ಅಚ್ಛೆ ದಿನ್’ ಎಂಬ ಹೊರಳಾಟ-ನರಳಾಟ

  1. Pingback: ‘ಅಚ್ಛೆ ದಿನ್’ ಎಂಬ ಹೊರಳಾಟ-ನರಳಾಟ | deepaksingh759

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s