ಹಸಿವು ಮುಕ್ತ, ಭ್ರಷ್ಟಾಚಾರ ಮುಕ್ತ ಕರ್ನಾಟಕ ನಮ್ಮ ಗುರಿ

ರಾಜಕಾರಣಿ ಎಂದು ಕರೆಸಿಕೊಂಡರಷ್ಟೇ ಸಾಲದು, ಒಬ್ಬ ಸಮರ್ಥ ನಾಯಕನ ಗುಣಗಳು ಆತನಲ್ಲಿರಬೇಕು. ಎದುರಾಳಿಯನ್ನು ಶತಾಯಗತಾಯ ಸೋಲಿಸಿ ತಾನು ಮುಂದೆ ಬರುತ್ತೇನೆ ಎನ್ನುವ ಮನಃಸ್ಥಿತಿಗಿಂತ ತನ್ನ ಕೆಲಸದ ಮೂಲಕವೇ ಜನರ ವಿಶ್ವಾಸಗಳಿಸಿ ಜನರಿಂದಲೇ ಗೆದ್ದುಬರುತ್ತೇನೆ ಎನ್ನುವವ ನಿಜವಾದ ನಾಯಕ. ಇಲ್ಲಿ ನಾಯಕತ್ವದ ಬಗ್ಗೆ ಯಾಕೆ ಚರ್ಚಿಸುತ್ತಿದ್ದೇನೆಂದರೆ, ಇತ್ತೀಚೆಗೆ ಯಡಿಯೂರಪ್ಪ ಹಾಗೂ ಕೋಲಾರ ಸಮೀಪದ ನರಸಾಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಬಹುಚರ್ಚಿತವಾಗುತ್ತಿದೆ.

   “ರೈತರೇ, ಬನ್ನಿ ಹೋರಾಟ ಮಾಡೋಣ. ಕಾಂಗ್ರೆಸ್ ಅನ್ನು ಕಿತ್ತಿ ಎಸೆಯೋಣ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೋಣ” ಎಂದು ಗಂಟಲು ಹರಿಯುವಂತೆ ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ಕಿರುಚಿ ಕಿರುಚಿ ಧ್ವನಿ ಕಳೆದುಕೊಂಡಿದ್ದರು. “ಕಾಂಗ್ರೆಸ್ ಅನ್ನು ತೊಲಗಿಸಿ ನಾವು ಅಧಿಕಾರಕ್ಕೆ ಬರುತ್ತೇವೆ” ಎಂಬ ಸಣ್ಣಬುದ್ಧಿಯ ಮಾತುಗಳು ಬಿಎಸ್‍ವೈ ಬಾಯಿಂದ ಹೊರಬಂದಿತ್ತು. ಆದರೆ ಯಾವಾಗ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಕ ಉತ್ತರ ಕೊಟ್ಟರೋ, ಬಿಎಸ್‍ವೈ ಬಾಯಿ ಬೀಗ ಜಡಿದ ಬಾಗಿಲಂತಾಗಿದೆ.

   “ನಮ್ಮ ಗುರಿ ಹಸಿವುಮುಕ್ತ ಕರ್ನಾಟಕ, ಭ್ರಷ್ಟಾಚಾರ ಮುಕ್ತ ಕರ್ನಾಟಕ, ಅಪೌಷ್ಠಿಕತೆ ಮುಕ್ತ ಕರ್ನಾಟಕ. ನಾನು ಯಾವತ್ತೂ ಬಿಜೆಪಿ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳಿಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವನು ನಾನು. ಬಿಜೆಪಿಯವರೂ ವಿರೋಧ ಪಕ್ಷದಲ್ಲಿ ಇರಬೇಕು. ಪ್ರಜಾಪ್ರಭುತ್ವದಲ್ಲಿ ಒಂದೇ ಪಕ್ಷ ಇರುವುದು ಅಪಾಯಕರ” ಎಂದು ತಮ್ಮ ದೃಷ್ಟಿಕೋನವನ್ನು ಮುಂದಿಟ್ಟವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಮಾತುಗಳಲ್ಲಿನ ವ್ಯತ್ಯಾಸ ಗಮನಿಸಿ. ಒಬ್ಬರದು ಕೀಳುಮಟ್ಟದ ರಾಜಕೀಯ ಹೇಳಿಕೆಯಾದರೆ, ಇನ್ನೊಬ್ಬರದು ಜನಪರ-ಅಭಿವೃದ್ಧಿಪರ ಮಾತಾಗಿದೆ.

e0e0f483-4c57-4486-b0ee-7f0f4ec20fac   ಬಿಜೆಪಿ ಅದೆಷ್ಟು ಹತಾಶೆಗೆ ಒಳಗಾಗಿದೆಯೆಂದರೆ, ಕಾಂಗ್ರೆಸ್ ತೊಲಗಿಸಿದರೆ ಮಾತ್ರ ತಮಗೆ ಉಳಿಗಾಲ ಎನ್ನುವಷ್ಟು. ಅಂದರೆ ಕಾಂಗ್ರೆಸ್‍ನ ಜನಪರ ಆಡಳಿತ ಬಿಜೆಪಿಗೆ ನಡುಕ ಹುಟ್ಟಿಸಿದೆ. ಆದ್ದರಿಂದ ಬಿಜೆಪಿ ಕಾಂಗ್ರೆಸ್‍ಮುಕ್ತ ಮಾಡುವಂತಹ ಅನಾಗರಿಕ ಮಾತನಾಡುತ್ತಿದೆ. ಸಿದ್ದರಾಮಯ್ಯನವರ ಮಾತನ್ನು ಗಮನಿಸಿದರೆ ಕಾಂಗ್ರೆಸ್‍ನ ವೈಶಾಲ್ಯತೆ ಅರ್ಥವಾಗುತ್ತದೆ. ಸಿದ್ದರಾಮಯ್ಯನವರು ಬಿಜೆಪಿಮುಕ್ತ ಎನ್ನುವಂತಹ ಮಾತನ್ನಾಡಿಲ್ಲ. ಬದಲಿಗೆ ಪ್ರಸ್ತುತ ಕಾಡುತ್ತಿರುವ ಸಮಸ್ಯೆಗಳಿಂದ ರಾಜ್ಯವನ್ನು ಮುಕ್ತ ಮಾಡುವ ಮಾತನ್ನಾಡಿದ್ದಾರೆ. ಜನಪರವಾಗಿ ಯೋಚಿಸುತ್ತಾ, ಜನರ ಒಳಿತಿಗಾಗಿ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯನವರಿಗೆ ಯಾರದೇ ಭಯವಿಲ್ಲ. ಏಕೆಂದರೆ, ಜನರೇ ಕಾಂಗ್ರೆಸ್ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ. ಜನರಿಗಾಗಿ ಕೆಲಸ ಮಾಡುತ್ತಿರುವಾಗ ಬೇರೆ ಯಾವುದೇ ವ್ಯಕ್ತಿ ಅಥವಾ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ಬಿಜೆಪಿಯದು ಇದಕ್ಕೆ ತದ್ವಿರುದ್ಧವಾದ ನಡೆಯಾದ್ದರಿಂದ ಕಾಂಗ್ರೆಸ್‍ಗೆ ಹೆದರಿ ಕೂತಿದೆ.

   ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮಾತು ಅವರ ಹೆದರಿಕೆ ಹಾಗೂ ಸಂಕುಚಿತತೆಯನ್ನು ತೋರಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಜನರಲ್ಲಿ ಭರವಸೆ ಮೂಡಿಸಿದೆ. ಅದಕ್ಕೇ ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪ ಹಿಗ್ಗಾಮುಗ್ಗಾ ಉಗಿಸಿಕೊಳ್ಳುತ್ತಿದ್ದಾರೆ, ಸಿದ್ದರಾಮಯ್ಯನವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisements

2 thoughts on “ಹಸಿವು ಮುಕ್ತ, ಭ್ರಷ್ಟಾಚಾರ ಮುಕ್ತ ಕರ್ನಾಟಕ ನಮ್ಮ ಗುರಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s