ಬಿಎಸ್‍ವೈ ವ್ಯರ್ಥಾಲಾಪ, ಕುಮಾರಣ್ಣನ ಪ್ರಲಾಪ..

jds_savitha_2866591f

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿವಿಧ ಜನಪರ ಯೋಜನೆಗಳ ಮೂಲಕ ‘ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನೆಮ್ಮದಿಯಿಂರಬೇಕು’ ಎನ್ನುವ ತಮ್ಮ ಆಶಯವನ್ನು ಕೃತಿಯ ಮೂಲಕ ಮಾಡಿ ತೋರಿಸುತ್ತಿದ್ದಾರೆ. ಅವರು ಕೈಗೊಳ್ಳುತ್ತಿರುವ ಜನಪರ ಕಾರ್ಯಗಳು ವಿರೋಧಿ ಪಡೆಯಲ್ಲಿ ಭಯ ಮೂಡಿಸುತ್ತಿದೆಯೇ? ಎನ್ನುವ ಪ್ರಶ್ನೆ ಇತ್ತೀಚಿನ ಕೆಲದಿನಗಳ ವಾರ್ತಾಪತ್ರಿಕೆಗಳನ್ನು ಗಮನಿಸಿದರೆ ಮೂಡತೊಡಗಿದೆ.

   ಒಳ್ಳೆಯ ಕಾರ್ಯ ಮಾಡುವ ವ್ಯಕ್ತಿಯನ್ನು ಅಥವಾ ಸಂಘಟನೆಯನ್ನು ವಿರೋಧಿಸಲು, ಟೀಕಿಸಲು ಕೆಲ ಸಂಕುಚಿತ ಮನೋಭಾವದ ವ್ಯಕ್ತಿಗಳು ಕಾಯುತ್ತಾ ಇರುತ್ತಾರೆ ಎನ್ನುವ ಸಂಗತಿ ಕಾಂಗ್ರೆಸ್ ಸರ್ಕಾರದ ಪಾಲಿಗೆ ಸತ್ಯವಾಗಿದೆ. ಯಾವುದೇ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಿ, ಅಲ್ಲಿ ಅರ್ಥಹೀನ ಟೀಕೆಗಳು ಇದ್ದೇ ಇರುತ್ತವೆ. ಯಾವಾಗ ಟೀಕಿಸಲೂ ವಿಷಯಗಳು ಸಿಗುವುದಿಲ್ಲವೋ ಆಗ ವೈಯಕ್ತಿಕ ಸಂಗತಿಗಳ ಬಗ್ಗೆ ಮಾತಿಗಿಳಿಯುತ್ತಾರೆ. ಯಡಿಯೂರಪ್ಪನವರನ್ನೇ ಗಮನಿಸಿ, ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ‘ತಲೆತಿರುಕ’ ಎಂದು ಕರೆಯುತ್ತಾರೆ! ಯಡಿಯೂರಪ್ಪನವರ ಕೀಳುಮನಃಸ್ಥಿತಿಯನ್ನು ಬಿಂಬಿಸಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ? ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿರುವವರ ಬಾಯಿಂದ ಬರುವಂತಹ ಮಾತೇ ಇದು?

   ಇನ್ನು ಎಚ್.ಡಿ ಕುಮಾರಸ್ವಾಮಿಯವರದ್ದು ಸಮಯಸಾಧಕತನ. ಮೇ 17ರಂದು ಮಹಿಳೆಯೊಬ್ಬಳಿಗೆ ಜನತಾದರ್ಶನದಲ್ಲಿ ಅವಕಾಶ ಸಿಗಲಿಲ್ಲ. ಆ ದಿನ ರಾತ್ರಿಯವರೆಗೂ ಆಕೆ ಕಾದಿದ್ದಾಳೆ. ರಾತ್ರಿಯ ಸಮಯವಾದ್ದರಿಂದ ಆಕೆಯ ಹಿತದೃಷ್ಟಿಯಿಂದ ಪೊಲೀಸರು ಮಡಿವಾಳದ ‘ಮಹಿಳಾ ನಿಲಯ’ದಲ್ಲಿರಿಸಿದ್ದಾರೆ. ಆಕೆ ದಲಿತ ಸಮುದಾಯದವಳು ಎಂದು ತಿಳಿಯುತ್ತಿದ್ದಂತೆಯೇ ಕುಮಾರಸ್ವಾಮಿಯವರ ಪೌರುಷ ಮಿತಿಮೀರಿಬಿಟ್ಟಿತು. ಸರ್ಕಾರದ ವಿರುದ್ಧ, ಮುಖ್ಯಮಂತ್ರಿಯವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದರು. ಕೊನೆಗೆ ಬಹಿರಂಗವಾದ ವೀಡಿಯೋದಲ್ಲಿ ಪೊಲೀಸರು ಆಕೆಗೇನೂ ತೊಂದರೆ ಮಾಡದೇ ಇರುವುದು ಕಂಡುಬಂತು, ಜೊತೆಗೆ ಕುಮಾರಸ್ವಾಮಿ ಪಟಾಲಂ ಬಾಯಿಮುಚ್ಚಿತು.

   ಸಿದ್ದರಾಮಯ್ಯನವರ ಕೃತಿಗಳೇ ವಿರೋಧಿಗಳಿಗೆ ಉತ್ತರ ಕೊಡುತ್ತವೆ. ಅವರ ನಡೆಯನ್ನು ಸಹಿಸಿಕೊಳ್ಳಲಾಗದ ವಿರೋಧಿಗಳ ಪರದಾಟ ನಿಜಕ್ಕೂ ಅರ್ಥಹೀನವಾದದ್ದು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s