ದೇಶಕ್ಕೇ ಮಾದರಿಯಾದ ಆನ್‍ಲೈನ್ ಮಾರಾಟ ವ್ಯವಸ್ಥೆ!

national-agriculture-market-creating-unified-online-trading-platform

ಸಿದ್ದರಾಮಯ್ಯನವರು ಕೃಷಿಗೆ ನೀಡುತ್ತಿರುವ ಆದ್ಯತೆ ರಾಜ್ಯದ ರೈತರ ಸಂತಸದ ದಿನಗಳಿಗೆ ಕಾರಣವಾಗಿದೆ. ಸಾವಿರಾರು ರೈತರು ಕಾಂಗ್ರೆಸ್ ಸರ್ಕಾರದ ವಿವಿಧ ಕೃಷಿ ಯೋಜನೆಗಳಿಂದ ಸಂಕಷ್ಟದ ಭಾರವನ್ನು ಕಳೆದುಕೊಂಡಿದ್ದಾರೆ. ರೈತರ ಉತ್ಪನ್ನಗಳಿಗೆ ಪಾರದರ್ಶಕ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಕೈಗೊಂಡ ಕ್ರಮಗಳು ಇಡೀ ದೇಶಕ್ಕೇ ಮಾದರಿಯಾಗಿರುವುದು ಸಿದ್ದರಾಮಯ್ಯನವರ ಪರಿಣಾಮಕಾರಿ ಆಡಳಿತದ ಹೊಳಹನ್ನು ತೋರಿಸುತ್ತದೆ.

   ರಾಜ್ಯದ ಅರ್ಥ ವ್ಯವಸ್ಥೆ ಕೃಷಿಯ ಮೇಲೆ ಅವಲಂಬಿತವಾಗಿದೆ. ‘ರೈತನೇ ರಾಜ್ಯದ ಬೆನ್ನೆಲುಬು’ ಎನ್ನುವ ಮಾತನ್ನು ನಮ್ಮ ಸರ್ಕಾರ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ರೈತರ ಕಷ್ಟಗಳಿಗೆ ಹೆಗಲಾಗುವ, ಕಣ್ಣೀರನ್ನು ಒರೆಸುವ, ರೈತರ ಜೀವನದಲ್ಲಿ ಸಂತಸದ ಸಮಯ ತರುವ ಕಾರ್ಯವನ್ನು ಸಿದ್ದರಾಮಯ್ಯನವರು ಕಳೆದ ಮೂರು ವರ್ಷಗಳಲ್ಲಿ ಮಾಡಿದ್ದಾರೆ. ರೈತರ ಸಂಕಷ್ಟಗಳಿಗೆ ಮೂಲಕಾರಣ ಮಧ್ಯವರ್ತಿಗಳು ಎಂಬುದನ್ನು ಕಂಡುಕೊಂಡ ಸರ್ಕಾರ, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಕ್ರಾಂತಿಕಾರಕ ಹೆಜ್ಜೆಯನ್ನಿಟಿದೆ. ಕೃಷಿ ಮಾರಾಟ ನೀತಿ-2013ನ್ನು ಜಾರಿಗೆ ತಂದು, ಕಾಯ್ದೆ ಹಾಗೂ ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಮೂಲಕ ಸರ್ಕಾರ ಆನ್‍ಲೈನ್ ಮಾರಾಟ ವ್ಯವಸ್ಥೆಗೆ ಚಾಲನೆ ನೀಡಿದೆ. ಈ ವ್ಯವಸ್ಥೆಯ ಹೆಚ್ಚುಗಾರಿಕೆಯಿರುವುದು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದರಲ್ಲಿ. ರೈತರಿಗೆ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗದೇ ಇರುವುದಕ್ಕೆ ಮುಖ್ಯ ಕಾರಣವೇ ಈ ಮಧ್ಯವರ್ತಿಗಳು. ಅವರನ್ನೇ ವ್ಯವಸ್ಥೆಯಿಂದ ಹೊರಗಿರುವಂತೆ ಮಾಡುವುದರಿಂದ ರೈತರು ಉತ್ತಮ ಮಾರುಕಟ್ಟೆ ಕಂಡುಕೊಳ್ಳಬಹುದು. ಇದೀಗ ಅಂತಹ ರೈತಸ್ನೇಹಿ ವ್ಯವಸ್ಥೆ ಆನ್‍ಲೈನ್ ಮಾರಾಟದಿಂದ ಅಸ್ಥಿತ್ವಕ್ಕೆ ಬಂದಿದೆ.

   ಆನ್‍ಲೈನ್ ಮಾರಾಟದಿಂದ ಪಾರದರ್ಶಕತೆ ಹೆಚ್ಚುತ್ತದೆ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರೆಯುತ್ತದೆ. ಖರೀದಿ ವ್ಯವಹಾರ ಮುಗಿದ 24 ಗಂಟೆಗಳ ಒಳಗೆ ರೈತರ ಖಾತೆಗಳಿಗೇ ನೇರವಾಗಿ ಹಣ ಪಾವತಿಯಾಗುತ್ತದೆ. ಇನ್ನೊಂದು ವಿಶೇಷವೆಂದರೆ, ರೈತರು ಮಾರುಕಟ್ಟೆಗೆ ಬರದೇ ಇದ್ದೆಡೆಯಿಂದಲೇ ಆನ್‍ಲೈನ್ ಮೂಲಕ ವಹಿವಾಟು ನಡೆಸಬಹುದು. ಪ್ರಸ್ತುತ ಈ ವ್ಯವಸ್ಥೆಯ ಉಪಯೋಗವನ್ನು ಸರಿಸುಮಾರು 14 ಲಕ್ಷ ರೈತರು ಪಡೆದುಕೊಳ್ಳುತ್ತಿದ್ದಾರೆ ಮತ್ತು ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚುತ್ತಲೇ ಇದೆ.

   ಕೃಷಿ ಮಾರುಕಟ್ಟೆ ಮಂಡಳಿಯಲ್ಲಿ ಜಾರಿಗೊಂಡಿರುವ ಆನ್‍ಲೈನ್ ಹರಾಜು ಪದ್ಧತಿಯು ರಾಷ್ಟ್ರೀಯ ಮನ್ನಣೆ ಗಳಿಸಿದೆ. ಕೇಂದ್ರ ಸರ್ಕಾರವು ಇದನ್ನು ತನ್ನ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಅಳವಡಿಸಿಕೊಂಡಿದೆ. ಈ ಮೂಲಕ ಇಡೀ ದೇಶಕ್ಕೇ ಕರ್ನಾಟಕವು ಮಾದರಿಯಾಗಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s