ನುಡಿದಂತೆ ನಡೆಯುತ್ತಿರುವ ಸಿದ್ದರಾಮಯ್ಯ ಸರ್ಕಾರ

CM_Siddaramaiah_DC_21march_0_0_0

‘ನುಡಿದಂತೆ ನಡೆದಿದ್ದೇವೆ’.. ಕರ್ನಾಟಕ ಸರ್ಕಾರ ಹೆಮ್ಮೆಯಿಂದ ಹೇಳುತ್ತಿರುವ ಮಾತಿದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ, ಕೊಟ್ಟ ಮಾತುಗಳನ್ನು ಉಳಿಸಿಕೊಂಡು, ಜನಮನ್ನಣೆ ಗಳಿಸಿ ಮೂರು ವರ್ಷ ಪೂರೈಸಿದೆ. ನಾಡಿನ ಸಮಸ್ತ ಜನತೆಯ ಆಶೋತ್ತರಕ್ಕೆ ಕಿವಿಯಾಗಿ, ಶೋಷಿತರ-ಸಮಾಜದ ಕೆಳಸ್ತರದ ಸಮುದಾಯಗಳ ದನಿಯಾಗಿ ಪರಿಣಾಮಕಾರಿ ಆಡಳಿತ ನೀಡುವಲ್ಲಿ ನಮ್ಮ ಹೆಮ್ಮೆಯ ಸಿದ್ದರಾಮಯ್ಯನವರ ಸರ್ಕಾರ ಯಶಸ್ವಿಯಾಗಿದೆ.

   ಸಮಾಜದ ಸ್ಥಿತಿಗತಿಗಳನ್ನು ಚೆನ್ನಾಗಿ ಅರಿತಿರುವ ಸಿದ್ದರಾಮಯ್ಯನವರ ಅನುಭವದ ಹಿನ್ನೆಲೆಯಲ್ಲಿ ಜನಪರ ಯೋಜನೆಗಳೇ ಜಾರಿಗೆ ಬಂದಿವೆ. ಜನತಂತ್ರ ವ್ಯವಸ್ಥೆಯಲ್ಲಿ ಸರ್ವರಿಗೂ ಕಲ್ಯಾಣವನ್ನು ಬಯಸುವ ಮಾದರಿ ಸರ್ಕಾರ ನಮ್ಮ ರಾಜ್ಯದಲ್ಲಿದೆ ಎಂದು ಹೇಳಲು ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ. ಒಂದು ಸರ್ಕಾರದ ಸಾರ್ಥಕತೆಗೆ ಇದಕ್ಕಿಂತ ಮಾನದಂಡ ಇನ್ನೊಂದಿರಲಾರದು. ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ತಕ್ಷಣದಲ್ಲಿ ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆಯು ಹಸಿವುಮುಕ್ತ ಕರ್ನಾಟಕದೆಡೆಗೊಂದು ಮಹತ್ವದ ಹೆಜ್ಜೆ. “ಅನ್ನಭಾಗ್ಯದಿಂದಾಗಿ ನನ್ನ ಮಕ್ಕಳು ಮೂರುಹೊತ್ತು ಊಟ ಮಾಡುವಂತಾಗಿದೆ” ಎಂದು ಮನದುಂಬಿ ಫಲಾನುಭವಿಯೊಬ್ಬರು ಮಾತನಾಡುತ್ತಿದ್ದರೆ ಸಿದ್ದರಾಮಯ್ಯನವರ ದೂರದರ್ಶಿತ್ವದ ಅರಿವಾಗುತ್ತದೆ.

   ‘ಕ್ಷೀರಭಾಗ್ಯ’ದಿಂದಾಗಿ ಅಪೌಷ್ಠಿಕತೆಯ ಪ್ರಮಾಣ ಕಡಿಮೆಯಾಗಿ, ಶಾಲೆಗಳಲ್ಲಿ ಹಾಜರಾತಿ ಹೆಚ್ಚಳವಾಗಿದೆ ಎಂದು ಅಂಕಿ-ಅಂಶ ಹೇಳುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಯೇ ಸರಿ. ವಿದ್ಯಾಸಿರಿಯೂ ಸಹ ವಿದ್ಯಾರ್ಥಿಗಳ ಮೊಗದಲ್ಲಿ ನಗು ತಂದಿದೆ ಎನ್ನುವುದನ್ನು ಯಾರೂ ಕೂಡ ಅಲ್ಲಗಳೆಯಲು ಸಾಧ್ಯವಿಲ್ಲ. ಅದೇ ರೀತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿರುವ ‘ಕ್ಷೀರಧಾರೆ’, ‘ಕೃಷಿ ಭಾಗ್ಯ’, ‘ಶುದ್ಧ ನೀರು’, ‘ಋಣಮುಕ್ತ’, ‘ಮನಸ್ವಿನಿ’, ‘ಮೈತ್ರಿ’, ‘ನಿರ್ಮಲ ಭಾಗ್ಯ’ ಹೀಗೆ ಹಲವಾರು ಯೋಜನೆಗಳು ನಾಡಿನ ಕೋಟ್ಯಂತರ ಜನರ ಅಭ್ಯುದಯಕ್ಕೆ ಕಾರಣವಾಗಿದೆ. ಕೃಷಿಕರಿರಲಿ, ಮಹಿಳೆಯರಿರಲಿ, ಲಿಂಗಅಲ್ಪಸಂಖ್ಯಾತರಿರಲಿ ಹೀಗೆ ಪ್ರತಿಯೊಂದು ವರ್ಗದ ಜನರೂ ಸಹ ಸರ್ಕಾರದ ಜನಪರ ಯೋಜನೆಗಳನ್ನು ಶ್ಲಾಘಿಸುತ್ತಿದ್ದಾರೆ.

   ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಆಧುನಿಕ ಮುನ್ನೋಟದ ಕಾರ್ಯಶೈಲಿ ಕಾಂಗ್ರೆಸ್ ಸರ್ಕಾರದ ಹೆಚ್ಚುಗಾರಿಕೆ. ಇವೆರಡನ್ನೂ ಸಮನ್ವಯಗೊಳಿಸಿ ರಾಜ್ಯವನ್ನು ಪ್ರಗತಿಪಥದಲ್ಲಿ ಮುನ್ನಡೆಸುತ್ತಿರುವುದು ಜನಮಾನಸದಲ್ಲಿ ಭದ್ರತೆಯ ಭಾವ ಮೂಡಿಸಿದೆ. ಅಧಿಕಾರಾವಧಿಯ ಮೂರು ವರ್ಷದಲ್ಲೇ ಸಾಧನೆಯ ಮಹಾಪೂರವನ್ನೇ ಎದುರಿಟ್ಟಿರುವ ಸರ್ಕಾರ ಇನ್ನೂ ಹೆಚ್ಚಿನ ಜನಪರ ಆಡಳಿತವನ್ನು ನೀಡಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s