ಬಾಯಿಬಡುಕ ಬಿಜೆಪಿ, ಕಾಯಕನಿರತ ಕಾಂಗ್ರೆಸ್!

yeddyurappa - PTI_0

ಬಿಜೆಪಿಯವರು ಗಮನವಿಟ್ಟು ಓದಬೇಕಾದ ಸುದ್ದಿಯಿದು. ಯಾವ ಒಂದು ಕಾರ್ಯವನ್ನು ನಿಮ್ಮವರು ಮಾಡಿದಾಗ ‘ಬಹಳ ಒಳ್ಳೆಯ ಕೆಲಸ’ ಎಂದು ಕೊಂಡಾಡಿ, ಎಲ್ಲೆಡೆ ಕೂಗಿ ಕೂಗಿ ಹೇಳಿದ್ದಿರೊ, ಅದೇ ಕಾರ್ಯವನ್ನು ನಮ್ಮ ರಾಜ್ಯ ಸರ್ಕಾರ ಮಾಡಿದಾಗ ಮೌನವಹಿಸಿ ಕೂತಿದ್ದೀರಿ. ನಮ್ಮವರು ಒಳ್ಳೆಯ ಕಾರ್ಯ ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂದು ಬಾಯಿಮಾತಿಗೂ ಹೇಳುವ ಸೌಜನ್ಯ ಇಲ್ಲದಂತಾಗಿದೆ ನಿಮಗೆ. ಎಲ್ಲದರಲ್ಲೂ ರಾಜಕಾರಣವನ್ನೇ ಮಾಡುವ ನಿಮಗೆಲ್ಲಿ ತಿಳಿಯಬೇಕು ಮಾನವೀಯತೆಯ ಬೆಲೆ!

   ರಾಜ್ಯವು ನೀರಿನ ಅಭಾವವನ್ನು ಅನುಭವಿಸುತ್ತಿರುವಾಗ ಮಹಾರಾಷ್ಟ್ರ ಸರ್ಕಾರಕ್ಕೆ ನೀರು ಬಿಡಲು ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ಅಲ್ಲಿನ ಸರ್ಕಾರ ಕೋಯ್ನಾ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ನೀರು ಹರಿಸಿತ್ತು. ಅದಕ್ಕೆ ಸಿದ್ದರಾಮಯ್ಯನವರು ಕೃತಜ್ಞತೆ ತೋರಿದ್ದರು. ಮಹಾರಾಷ್ಟ್ರ ಸರ್ಕಾರ ನೀರು ಬಿಟ್ಟಿದ್ದನ್ನು ಕರ್ನಾಟಕ ಬಿಜೆಪಿಯು ಹೊಗಳಿದ್ದೇನು, ಕೊಂಡಾಡಿದ್ದೇನು! ಅದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅದೇ ರೀತಿಯಲ್ಲಿ ಮಾನವೀಯತೆ ಮೆರೆದ ನಮ್ಮದೇ ರಾಜ್ಯ ಸರ್ಕಾರವನ್ನೇಕೆ ಅವರು ಅಭಿನಂದಿಸುತ್ತಿಲ್ಲ?

   ತೆಲಂಗಾಣವೂ ಸಹ ತೀವ್ರ ಬರಗಾಲದಲ್ಲಿದೆ. ನೀರಿನ ಸಮಸ್ಯೆ ಅವರನ್ನೂ ಕಾಡುತ್ತಿದೆ. ಅದಕ್ಕಾಗಿ ತೆಲಂಗಾಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ್‍ಕುಮಾರ್ ರೆಡ್ಡಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಮಯ್ಯನವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಅರಿಕೆ ಮಾಡಿಕೊಂಡಿತು. ಅವರ ಮಾತನ್ನಾಲಿಸಿದ ಸಿದ್ದರಾಮಯ್ಯನವರು ತಕ್ಷಣ 1 ಟಿಎಂಸಿ ನೀರು ಹರಿಬಿಡಲು ಒಪ್ಪಿದರು. ನಮ್ಮ ರಾಜ್ಯದಲ್ಲಿ ನೀರಿನ ಕೊರತೆ ತೀವ್ರವಾಗಿದ್ದರೂ ಸಹ ಮಾನವೀಯತೆಯ ನೆಲೆಗಟ್ಟಿನಲ್ಲಿ ನೆರೆರಾಜ್ಯಕ್ಕೆ ನೀರು ಕೊಟ್ಟಿರುವುದು ಶ್ಲಾಘನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿನಂದನಾರ್ಹರು. ತೆಲಂಗಾಣ ಸಮಿತಿ ಕೂಡ ರಾಜ್ಯ ಸರ್ಕಾರಕ್ಕೆ ಮನಸಾರೆ ಕೃತಜ್ಞತೆ ಸಲ್ಲಿಸಿದೆ. ಬಿಜೆಪಿಯ ಸಂಕುಚಿತ ಮನೋಭಾವದ ಪರಿಚಯವಾಗುವುದೇ ಇಲ್ಲಿ.

   ಯಾವಾಗ ಮಹಾರಾಷ್ಟ್ರ ಸರ್ಕಾರ ನೀರು ಬಿಟ್ಟಿತೊ, ಬಿಜೆಪಿಯವರ ಕುಣಿತವನ್ನು ತಡೆಯಲಾಗುತ್ತಿರಲಿಲ್ಲ. ಮಹಾರಾಷ್ಟ್ರವನ್ನು ಕೊಂಡಾಡಿ ಹಾಡಿ ಹೊಗಳಿತ್ತು. ಅದೆಲ್ಲವೂ ಸರಿ, ಇದೀಗ ನಮ್ಮ ರಾಜ್ಯವೇ ಅಂತಹುದೊಂದು ಮಹತ್ತರ ಕಾರ್ಯ ಮಾಡಿದೆಯಲ್ಲ. ಆಗ ಇದ್ದ ಧ್ವನಿ ಈಗೆಲ್ಲಿ ಹೋಯಿತು? ಜಾಣತನದ ಮೌನವೇಕೆ? ಒಳ್ಳೆಯ ಕೆಲಸ ಮಾಡಿದಾಗ ಅಭಿನಂದನೆ ಸಲ್ಲಿಸುವ ಕನಿಷ್ಠ ಪ್ರಜ್ಞೆಯೂ ನಿಮ್ಮಲ್ಲಿಲ್ಲವಾಯಿತೇ?

   ಇದರರ್ಥ ನಿಮ್ಮ ಶಹಬ್ಬಾಸ್‍ಗಿರಿಗೆ ಸರ್ಕಾರ ಕಾದುಕುಳಿತಿದೆ ಎಂದಲ್ಲ. ಈ ನಿಮ್ಮ ನಡೆ ನಿಮ್ಮದೇ ಹುಳುಕನ್ನು ಎತ್ತಿ ತೋರಿಸುತ್ತಿದೆ. ಎಲ್ಲವನ್ನೂ “ತಪ್ಪು ತಪ್ಪು” ಎಂದು ಬೊಟ್ಟುಮಾಡಿತೋರಿಸುವ ನೀವು, ಇಂತಹ ಒಳ್ಳೆಯ ಕಾರ್ಯಗಳನ್ನು ನೋಡಿ ಅಧಿರರಾಗುವುದು ಸಹಜ. ಪ್ರಚಾರದ ಹುಚ್ಚಿಲ್ಲದೇ ಕೇವಲ ಜನಪರವಾಗಿ ಯೋಚಿಸುವ ಕಾಂಗ್ರೆಸ್ ಸರ್ಕಾರ ಹಾಗೂ ಪ್ರತಿ ಹೆಜ್ಜೆಗೂ ಪ್ರಚಾರ ಮಾಡುತ್ತ, ಬಾಯಿ ಮಾತಿನಲ್ಲೇ ಅರಮನೆ ಕಟ್ಟುವ ಬಿಜೆಪಿಯವರ ಯೋಗ್ಯತೆ ಜನರಿಗೆ ತಿಳಿದಿದೆ ಬಿಡಿ.

Advertisements

One thought on “ಬಾಯಿಬಡುಕ ಬಿಜೆಪಿ, ಕಾಯಕನಿರತ ಕಾಂಗ್ರೆಸ್!

  1. The people of the state knows who is doing work, the present government is doing good work n will continue to do so.. In all department the government has done good work under the leadership of siddaramaiah sir..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s