ವೃಥಾ ಆರೋಪ ಮಾಡುತ್ತಿರುವ ಬಿಸಿಸಿಐ

sc-or-bcci

ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ), ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಮನೆಯಂತಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ. ಎನ್‍ಸಿಎ ಕರ್ನಾಟಕದಲ್ಲಿದೆ ಎಂಬುದು ರಾಜ್ಯದ ಹೆಮ್ಮೆ. ರಾಜ್ಯ ಸರ್ಕಾರವೂ ಸಹ ಎನ್‍ಸಿಎಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಸಹಕಾರ ನೀಡುತ್ತಾ ಬಂದಿದೆ. ಇದೀಗ ಎನ್‍ಸಿಎ ಸದ್ದು ಮಾಡತೊಡಗಿದೆ. ಆದರದು ವಿವಾದಾತ್ಮಕ ರೂಪದಲ್ಲಿ.

   2000ನೇ ಇಸವಿಯಲ್ಲಿ ಎನ್‍ಸಿಎ ಪ್ರಾರಂಭವಾಯಿತು. 2010ರಲ್ಲಿ 49 ಎಕರೆ ಭೂಮಿಯನ್ನು 50 ಕೋಟಿ ಹಣ ನೀಡಿ ಬಿಸಿಸಿಐ ಕೆಐಎಡಿಬಿಯಿಂದ ಖರೀದಿ ಮಾಡಿತು. ಆದರೆ ಈ ಖರೀದಿಯ ಬಗ್ಗೆ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದೂರು ದಾಖಲಿಸಿದವು. 2013ರಲ್ಲಿ ಕರ್ನಾಟಕದ ಹೈಕೋರ್ಟ್ ಈ ಖರೀದಿ ಪ್ರಕ್ರಿಯೆಯನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತು. ಇದು ಎನ್‍ಸಿಎ, ಬಿಸಿಸಿಐನ ಕುರಿತಾದ ಹಿನ್ನೆಲೆಗಳು. ಇದೀಗ ಬಿಸಿಸಿಐ ಜಂಟಿ ಕಾರ್ಯದರ್ಶಿಯಾದ ಅಮಿತಾಬ್ ಚೌಧರಿ ಅವರು ಹೊಸ ವರಾತ ತೆಗೆದಿದ್ದಾರೆ. ಎನ್‍ಸಿಎನ ಸಂಚಾಲಕರೂ ಆಗಿರುವ ಅವರು ಹೇಳುವುದೇನೆಂದರೆ, “ನಮಗೆ ಬೆಂಗಳೂರಿನಲ್ಲಿ ವ್ಯವಸ್ಥಿತವಾದ ಕೇಂದ್ರವನ್ನು ಹೊಂದುವ ಆಲೋಚನೆಯಿದೆ. ಆದರೆ ಕಳೆದ ಆರು ವರ್ಷಗಳಿಂದ ನಮಗೆ ಭೂಮಿ ನೀಡಿ ಎಂದು ಸರ್ಕಾರದ ಬಾಗಿಲು ಬಡಿಯುತ್ತಲೇ ಇದ್ದೇವೆ. ಇದುವರೆಗೆ ನಮಗೆ ಭೂಮಿ ಸಿಕ್ಕಿಲ್ಲ. ಆದ್ದರಿಂದ ಎನ್‍ಸಿಎಯನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸುವ ಕುರಿತಂತೆಯೂ ಯೋಚಿಸಿದ್ದೇವೆ”.

   ಬಿಸಿಸಿಐ ಈ ರೀತಿ ಹೇಳುತ್ತ ರಾಜ್ಯ ಸರ್ಕಾರವನ್ನು ಹೆದರಿಸುವ ಕೆಲಸ ಮಾಡುತ್ತಿದೆಯೇ ಎನ್ನುವ ಅನುಮಾನ ಕಾಡದೇ ಇರದು. ಯಾಕೆಂದರೆ ರಾಜ್ಯ ಸರ್ಕಾರ ಅವರ ಬೇಡಿಕೆಗೆ ಒಪ್ಪಿ ಅವರು ಬಯಸಿದಲ್ಲಿಯೇ ಭೂಮಿ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಚೌಧರಿಯವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎರಡು ಜಾಗಗಳನ್ನು ನೋಡಿದ್ದರು. ಆ ಕುರಿತಂತೆ ಬಿಸಿಸಿಐ ಮುಖ್ಯಮಂತ್ರಿಗಳಿಗೆ 26.12.2015ರಂದು ಪತ್ರ ಬರೆದಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ನಗರಾಭಿವೃದ್ಧಿ ಇಲಾಖೆಯು 23.01.2016ರಂದು ಬಿಸಿಸಿಐಗೆ ಪತ್ರ ಬರೆದು ಸಭೆಗೆ ಆಹ್ವಾನಿಸಿತ್ತು. ಆದರೆ ಪತ್ರವು ತಮಗೆ ತಡವಾಗಿ ತಲುಪಿತು ಎಂದು ಕಾರಣ ನೀಡಿ ಬಿಸಿಸಿಐ ಸಭೆಯಲ್ಲಿ ಭಾಗವಹಿಸಿರಲಿಲ್ಲ.

   ಆ ನಂತರ 28.01.2016ರಂದು ಪ್ರಾಮುಖ್ಯತೆಯ ಮೇರೆಗೆ ಬಿಸಿಸಿಐಗೆ ಭೂಮಿ ನೀಡುವಂತೆ ಕಂದಾಯ ಇಲಾಖೆಗೆ ಸೂಚಿಲಾಯಿತು. 13.04.2016ರಂದು ಕಂದಾಯ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಗಮನ ಹರಿಸುವಂತೆ ಪತ್ರ ಬರೆಯಿತು. 21.04.2016ರಂದು ದೇವನಹಳ್ಳಿಯ ತಹಶೀಲ್ದಾರರಿಗೆ ಪತ್ರ ಬರೆದ ಜಿಲ್ಲಾಧಿಕಾರಿಗಳು, ಎನ್‍ಸಿಗೆ ನೀಡಲು ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಭೂಮಿಯನ್ನು ಗುರುತಿಸುವಂತೆ ಸೂಚಿಸಿದರು. ಇಷ್ಟೆಲ್ಲ ಕೆಲಸಗಳು ಆಗಿದ್ದರೂ, ಭೂಮಿಯನ್ನು ನೀಡಲು ರಾಜ್ಯ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಹ ಬಿಸಿಸಿಐ ರಾಜ್ಯ ಸರ್ಕಾರ ಏನೂ ಮಾಡುತ್ತಿಲ್ಲ ಎನ್ನುವ ರೀತಿಯಲ್ಲಿ ಮಾತನಾಡುತ್ತಿದೆ. ಅದೆಲ್ಲ ಏನೇ ಇದ್ದರೂ ಸಹ, ಕಾಂಗ್ರೆಸ್ ಸರ್ಕಾರ ಬಿಸಿಸಿಐಗೆ ಬೇಕಾದ ಅನುಕೂಲಗಳನ್ನು ಕಾನೂನು ಮಿತಿಯಲ್ಲಿ ಮಾಡಿಕೊಡುತ್ತಿದೆ. ಇದನ್ನು ಅರ್ಥೈಸಿಕೊಳ್ಳುವಲ್ಲಿ ಬಿಸಿಸಿಐ ಹಾಗೂ ಎನ್‍ಸಿಎ ವಿಫಲವಾದಲ್ಲಿ ಯಾರೂ ಹೊಣೆಗಾರರಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s