ಅದೆಷ್ಟು ಅಳ್ತೀರಿ ಯಡಿಯೂರಪ್ಪನೋರೇ?

Yeddyu

ಬಿಜೆಪಿಯ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ಪಕ್ಷದ ಮುಖಂಡತ್ವ ವಹಿಸಿಕೊಂಡು ಇಷ್ಟಗಲ ನಕ್ಕಿದ್ದ ಕೆಲವೇ ದಿನಗಳಲ್ಲಿ ಗಳಗಳನೆ ಅತ್ತುಬಿಟ್ಟಿದ್ದಾರೆ ಪಾಪ! ಅದೂ ಕೋರ್ಟ್‍ನ ಕಟಕಟೆಯಲ್ಲಿ ನಿಂತು. ಅವರಿಗೆ ಗೊತ್ತಿರಲಿಕ್ಕಿಲ್ಲ, ಕಣ್ಣೀರು ಹಾಕುವ ಯೋಗ್ಯತೆಯನ್ನೂ ಅವರು ಕಳೆದುಕೊಂಡಿದ್ದಾರೆಂದು. ತಮ್ಮ ಕಣ್ಣೀರಿನಿಂದ ರಾಜ್ಯದ ಜನರನ್ನು ಮೂರ್ಖರನ್ನಾಗಿಸಬಹುದು ಎಂದು ಭಾವಿಸಿದಂತಿದೆ ಮಾನ್ಯ ಯಡಿಯೂರಪ್ಪನವರು.

   ಯಡಿಯೂರಪ್ಪನವರ ‘ಕಣ್ಣೀರ ಧಾರೆ’ಗೆ ಬಹುದೊಡ್ಡ ಇತಿಹಾಸವಿದೆ. ಮಜವಾದ ಸಂಗತಿಯೆಂದರೆ ಬೇಕು ಬೇಕೆಂದಾಗಲೆಲ್ಲಾ ಅವರ ಕಣ್ಣಿನಿಂದ ಕಂಬನಿ ಪಟಪಟನೆ ಉದುರಲಾರಂಭಿಸುತ್ತವೆ. ಇನ್ನೇನು ತನ್ನ ಕುತ್ತಿಗೆಗೇ ಬಂತು ಎನ್ನುವಂತಹ ಪ್ರಸಂಗಗಳಲ್ಲಂತೂ ಕೇಳಲೇಬೇಡಿ, ಕಣ್ಣೀರು ಧಾರಾಕಾರವಾಗಿ ಹರಿದುಬಿಡುತ್ತದೆ. ಇದು ವ್ಯಂಗ್ಯೋಕ್ತಿಯಲ್ಲ, ಅದಕ್ಕೆ ಪುಷ್ಠಿ ನೀಡುವ ಅದೆಷ್ಟೋ ಪ್ರಸಂಗಗಳಿವೆ. ಬನ್ನಿ ಕೆಲವೊಂದು ‘ಕಣ್ಣೀರ ಧಾರೆ’ಯ ಪ್ರಸಂಗಗಳನ್ನು ಮೆಲುಕು ಹಾಕೋಣ.

   ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಭಯಂಕರ ಆಡಳಿತಕ್ಕೆ ಕರ್ನಾಟಕ ಸಾಕ್ಷಿಯಾದ ದಿನಗಳವು. ಮುಖ್ಯಮಂತ್ರಿ ಗಾದಿಯ ಮೇಲೆ ಕುಳಿತಿದ್ದ ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ ಕುರ್ಚಿ ಬಿಟ್ಟುಕೊಡುವ ಆಸೆ ತೋರಿಸುತ್ತಲೇ ಇದ್ದರು. ಆದರೆ ಅದೊಂದು ದಿನ ‘ನಿಂಗೆ ಕುರ್ಚಿ ಕೊಡಲ್ಲಾ’ ಅಂದಿದ್ದೇ ತಡ, ಯಡಿಯೂರಪ್ಪ ಗೋಳೋ ಎಂದು ಅತ್ತುಬಿಟ್ಟರು. ಆಗ ಇಡೀ ಕರ್ನಾಟಕ ಅಚ್ಚರಿಯಿಂದ ‘ಕಣ್ಣೀರ ಧಾರೆ’ ನೋಡಿತ್ತು. ಆ ನಂತರ 2008ರಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆದು ಒಬ್ಬ ರೈತ ಮೃತಪಟ್ಟಾಗ ಎಲ್ಲಿ ತನ್ನ ಸರ್ಕಾರದ ಮೇಲೆ ಪ್ರಕರಣ ಹೆಗಲೇರುತ್ತದೆಯೋ ಎಂದು ನೆನೆಸಿಯೇ ಯಡಿಯೂರಪ್ಪ ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದರು. ಆ ನಂತರ ಮತ್ತೊಮ್ಮೆ ಅವರು ಕಣ್ಣೀರು ಹರಿಸಿದ್ದು ಕುರ್ಚಿ ವಿಷಯಕ್ಕಾಗಿಯೇ. 2009ರಲ್ಲಿ ಯಾವಾಗ ರೆಡ್ಡಿ ಸಹೋದರರು ನಾಯಕತ್ವ ಬದಲಾವಣೆಗೆ ತಯಾರಿ ನಡೆಸಿದರೋ, ಯಡಿಯೂರಪ್ಪನವರ ಕಣ್ಣಲ್ಲಿ ಹೇಳದೇ ಕೇಳದೇ ಕಂಬನಿ ಸುರಿದಿತ್ತು.

   ಸರಿ, ಯಡಿಯೂರಪ್ಪನವರ ಕಣ್ಣೀರಿನಿಂದ ಕರ್ನಾಟಕವೊಮ್ಮೆ ಚೊಕ್ಕಟವಾದಾಗ ಇನ್ನೆಂದೂ ನಾನು ಅಳುವುದಿಲ್ಲ ಎನ್ನುವ ಭಯಾನಕ ಹಾಸ್ಯ ಮಾಡಿದ್ದರು ಅವರು. ಅದನ್ನು ಗಂಭೀರವಾಗಿ ಪರಿಗಣಿಸಿದ ಹಿಂಬಾಲಕರು ‘ಅಬ್ಬಾ ಇನ್ನಾದರೂ ನಮ್ಮ ನಾಯಕ ಅಳುವುದಿಲ್ಲವಲ್ಲ’ ಎಂದು ಸಮಾಧಾನಪಟ್ಟಿದ್ದರು. ಆದರೆ ಯಾವಾಗ ಸಿಬಿಐ ವಿಶೇಷ ನ್ಯಾಯಾಲಯ ರಾಚೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿತೋ, ಮತ್ತೆ ಯಡಿಯೂರಪ್ಪನವರ ಕೊಳದಂತಹ ಕಣ್ಣಿಂದ ನೀರು ಹರಿಯಿತು. ಅಲ್ಲಿಗೆ ‘ನಾನು ಇನ್ನೆಂದೂ ಅಳಲಾರೆ’ ಎನ್ನುವ ಮಾತಿಗೆ ಎಳ್ಳು ನೀರು ಬಿಟ್ಟಂತಾಯಿತು.

   ಯಡಿಯೂರಪ್ಪನವರೇ, ಅದೆಷ್ಟು ಅಳ್ತೀರಿ? ನಿಮ್ಮ ಮೊಸಳೆ ಕಣ್ಣೀರು ನೋಡಿ ನೋಡಿ ರಾಜ್ಯದ ಜನರೆಲ್ಲ ರೋಸಿಹೋಗಿದ್ದಾರೆ. ಮಾತೆತ್ತಿದರೆ ಕಣ್ಣೀರು! ಸಾಕು ಮಾಡಿ ಅಥವಾ ಉಳಿದ ಕಣ್ಣೀರನ್ನು ಉಳಿಸಿಕೊಂಡಿರಿ, ಮುಂದಿನ ಚುನಾವಣೆಯಲ್ಲಿ ಸೋತಾಗ ಮತ್ತೆ ಸುರಿಸಲು ಬೇಕಾದೀತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s