ಎಲ್ಲೆಲ್ಲೂ ‘ಶುದ್ಧನೀರು’

cleanwater

ರಾಜ್ಯದ ಹಲವಡೆ ಬರ ಪರಿಸ್ಥಿತಿ ಉಂಟಾಗಿದೆ. ಪ್ರಕೃತಿಯ ಮುನಿಸಿನ ಮುಂದೆ ಮಾನವನ ಲೆಕ್ಕಾಚಾರಗಳು ನಡೆಯವುದಿಲ್ಲ. ಅತಿಯಾಗುತ್ತಿರುವ ಕೈಗಾರೀಕರಣ, ಮಾನವನ ಕೆಲವು ಪ್ರಕೃತಿವಿರೋಧಿ ಚಟುವಟಿಕೆಗಳು ಸುತ್ತಲಿನ ಪರಿಸರವನ್ನು ಅತಿಯಾಗಿ ಕಲುಷಿತಗೊಳಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವಜಲಕ್ಕೇ ಕುತ್ತು ಬಂದಿದೆ. ಎಲ್ಲಿ ನೋಡಿದರೂ ಕಲುಷಿತ ನೀರು. ಕಲುಷಿತ ನೀರನ್ನು ಸೇವಿಸಿ ಅನಾರೋಗ್ಯಕ್ಕೀಡಾಗುತ್ತಿರುವ ಜನರು. ಇಂತಹ ದುಸ್ಥಿತಿಗೆ ತಾತ್ಕಾಲಿಕ ಪರಿಹಾರ ನೀಡಿದರೆ ಸಾಕಾಗಲಾರದು. ಆದ್ದರಿಂದಲೇ ಜನರ-ಸಮಾಜದ ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಯೋಜನೆಯೇ ‘ಶುದ್ಧನೀರು’!

   ನೀರಿಲ್ಲದೇ ಜೀವರಾಶಿಗೆ ಉಳಿವಿಲ್ಲ. ನೀರೇ ಜೀವದ ಮೂಲ ಎಂದರೂ ತಪ್ಪಿಲ್ಲ. ಆದರೆ ಕುಡಿಯಲು ಶುದ್ಧ ನೀರು ಸಿಗದೇ ಹೋದರೆ ಏನು ಗತಿ? ಕಲುಷಿತ ನೀರಿನ ಸೇವನೆ ಜೀವಕ್ಕೆ ಅಪಾಯಕಾರಿಯಾದದ್ದು. ಒಂದು ಸಮೀಕ್ಷೆಯ ಪ್ರಕಾರ ಕಲುಷಿತ ನೀರಿನ ಸೇವನೆಯಿಂದ ಪ್ರತಿ 20 ಸೆಕೆಂಡ್‍ಗೆ ಒಂದು ಮಗು ಸಾಯುತ್ತಿದೆ! ಇನ್ನು ಕಲುಷಿತ ನೀರನ್ನು ಸೇವಿಸಿಯೂ ಬದುಕುಳಿದವರು ಬಗೆಬಗೆಯ ರೋಗರುಜಿನಗಳಿಂದ ಬಳಲುತ್ತಿದ್ದಾರೆ. ಇವೆಲ್ಲವನ್ನು ಕಂಡು, ಜನರಿಗೆ ಶುದ್ಧವಾದ ಕುಡಿಯುವ ನೀರನ್ನು ಒದಗಿಸಬೇಕೆಂದು ಸಿದ್ದರಾಮಯ್ಯ ಸರ್ಕಾರ ‘ಶುದ್ಧನೀರು’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. 2018ರ ವೇಳೆಗೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ಪಣತೊಟ್ಟಿದೆ.

   ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 7000 ಶುದ್ದನೀರು ಘಟಕಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. 1000 ಘಟಕಗಳಿಗೆ 2013-14ನೇ ಸಾಲಿನಲ್ಲಿ, 2000 ಘಟಕಗಳಿಗೆ 2014-15ನೇ ಸಾಲಿನಲ್ಲಿ ಮತ್ತು 4000 ಘಟಕಗಳಿಗೆ 2015-16ನೇ ಸಾಲಿನಲ್ಲಿ ಅನುಮೋದನೆ ನೀಡಲಾಗಿದೆ. ಜನಪರವಾಗಿ, ಜನರ ಹಿತಕ್ಕಾಗಿ ಸದಾ ತುಡಿಯುವ ಸಿದ್ದರಾಮಯ್ಯನವರ ಇಂತಹ ನಡೆ ನಿಜಕ್ಕೂ ಮಾದರಿಯೇ ಸರಿ. ಈ ಯೋಜನೆ ಕೇವಲ ರಾಜ್ಯ ಮಟ್ಟದಲ್ಲಷ್ಟೇ ಅಲ್ಲದೆ, ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿದೆ. ಕೇಂದ್ರ ಸರ್ಕಾರ ಕೂಡ ‘ಶುದ್ಧನೀರು’ ಯೋಜನೆಗೆ ಮೆಚ್ಚುಗೆ ಸೂಚಿಸಿದೆ.

   ಇನ್ನು ಈ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ವೆಬ್‍ಸೈಟ್ ಅನ್ನು ಲಾಂಚ್ ಮಾಡಲಾಗಿದೆ (www.shuddhaneeru7000.com). ಇದರಲ್ಲಿ ‘ಶುದ್ಧನೀರು’ ಯೋಜನೆಯ ಪ್ರತಿ ಮಾಹಿತಿಯೂ ದೊರೆಯುತ್ತದೆ. ಈ ಯೋಜನೆಗಾಗಿ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಂದು ತಂಡದ ಸದಸ್ಯರ ವಿವರಗಳನ್ನೂ ಈ ವೆಬ್‍ಸೈಟ್ ಒಳಗೊಂಡಿದೆ. ಜೊತೆಗೆ ಇದುವರೆಗೆ ಎಷ್ಟು ಘಟಕಗಳನ್ನು ಸ್ಥಾಪಿಸಲಾಗಿದೆ, ಬಾಕಿ ಕೆಲಸಗಳು ಯಾವ ಹಂತದಲ್ಲಿವೆ ಹೀಗೆ ಪ್ರತಿಯೊಂದು ಅಂಶಗಳನ್ನೂ ಸಹ ಪಾರದರ್ಶಕತೆಗೆ ಒತ್ತು ನೀಡಿ ವೆಬ್‍ಸೈಟ್‍ನಲ್ಲಿ ನೀಡಲಾಗಿದೆ.

   ‘ಶುದ್ಧನೀರು’ ಯೋಜನೆ ಗ್ರಾಮೀಣಾಭಿವೃದ್ಧಿಯೆಡೆಗೊಂದು ಮಹತ್ವದ ಹೆಜ್ಜೆಯಾಗಿದೆ. ಜನಸಾಮಾನ್ಯರ ಆರೋಗ್ಯದೆಡೆಗಿನ ಕಾಳಜಿ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡುವ ಗುರಿ ಹೊಂದಿದೆ. ಸಿದ್ದರಾಮಯ್ಯನವರು ಕೈಗೊಂಡಿರುವ ಯೋಜನೆಗಳು ಪರಿಣಾಮಕಾರಿಯಾಗಿದ್ದು, ದೂರದರ್ಶಿತ್ವ ಹೊಂದಿರುವುದಾಗಿವೆ. ಪೊಳ್ಳು ಭರವಸೆ ನೀಡಿ ಜನರಿಗೆ ಮಂಕುಬೂದಿ ಎರಚುವ ಸತ್ವಹೀನ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷ ವಿಭಿನ್ನವಾಗಿರುವುದು ಇದೇ ಕಾರಣಗಳಿಗಾಗಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s