ಗ್ರಾಮೀಣಾಭಿವೃದ್ಧಿಯೆಡೆಗೆ ಕರ್ನಾಟಕದ ದಿಟ್ಟ ಹೆಜ್ಜೆ!

village

ಕಳೆದ ಕೆಲ ವರ್ಷಗಳಿಂದ ಕರ್ನಾಟಕ ರಾಜ್ಯ ಒಂದಲ್ಲ ಒಂದು ವಿಷಯಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಲೇ ಇದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯವು ಹಲವು ವಿಷಯಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಎನಿಸಿಕೊಂಡಿದೆ. ರಾಜ್ಯದ ಕೆಲ ಸಾಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಜನಪರವಾಗಿ, ಪ್ರಚಾರಪ್ರಿಯತೆಯಿಲ್ಲದೆ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ. ಅದರಲ್ಲೂ ಪ್ರತಿಯೊಂದು ಯೋಜನೆಗಳೂ ಪಾರದರ್ಶಕ ಹಾಗೂ ಜನಸ್ನೇಹಿಯಾಗಿರಬೇಕೆಂಬ ದೃಷ್ಟಿಕೋನದಿಂದ ತೆಗೆದುಕೊಳ್ಳುತ್ತಿರುವ ಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿವೆ.

   ಗ್ರಾಮೀಣ ಪ್ರದೇಶಗಳು ನಮ್ಮ ನಾಡಿನ ಉಸಿರು. ಕೋಟ್ಯಾಂತರ ಮಂದಿ ತಮ್ಮ ಬದುಕು ಕಟ್ಟಿಕೊಂಡಿರುವುದೇ ಗ್ರಾಮೀಣ ಪ್ರದೇಶದಲ್ಲಿ. ಗ್ರಾಮೀಣಾಭಿವೃದ್ಧಿಯಿಂದ ನಾಡಿನ ಉನ್ನತಿ ಸಾಧ್ಯ ಎನ್ನುವುದನ್ನು ಸ್ಪಷ್ಟವಾಗಿ ಅರಿತಿರುವ ಸಿದ್ದರಾಮಯ್ಯ ಸರ್ಕಾರ ಅನೇಕ ಹೊ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ’ಯಲ್ಲಿ ಪಾರದರ್ಶಕ ನಡೆಗಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಇದು ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ.

   ‘ಒಉಓಖಇಉಂ ಒ-ಠಿಟಚಿಣಜಿoಡಿm’ ಹೆಸರಿನ ಈ ಅಪ್ಲಿಕೇಶನ್, ಯೋಜನೆಯಲ್ಲಿ ಹೆಚ್ಚು ಪಾರದರ್ಶಕತೆ ತರುವುದಲ್ಲದೇ, ಅನುದಾನದ ಚದುರುವಿಕೆ ಹಾಗೂ ಮಧ್ಯವರ್ತಿಗಳ ತೊಡಗಿಸಿಕೊಳ್ಳುವಿಕೆಯನ್ನು ತಡೆಗಟ್ಟುತ್ತದೆ. ವೇತನವನ್ನು ಸರಿಯಾದ ರೀತಿಯಲ್ಲಿ ತಲುಪಿಸುವಲ್ಲಿಯೂ ಈ ಆ್ಯಪ್ ಪರಿಣಾಮಕಾರಿಯಾಗಿರಲಿದೆ. ಕರ್ನಾಟಕ ಸರ್ಕಾರದ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಸಮಗ್ರ ವರದಿ ನೀಡುವಂತೆ ಕೇಳಿಕೊಂಡಿದ್ದಾರೆ. ದೇಶದೆಲ್ಲೆಡೆ ಇದನ್ನು ವಿಸ್ತರಿಸಿ ದಕ್ಷ ಆಡಳಿತ ನೀಡುವತ್ತ ಯೋಜನೆ ರೂಪಿಸುತ್ತಿದ್ದಾರೆ.

   ಗ್ರಾಮೀಣಾಭಿವೃದ್ಧಿಯೆಡೆಗೆ ಮತ್ತೊಂದು ಮಹತ್ವದ ಹೆಜ್ಜೆಯೆಂದರೆ ‘ಗ್ರಾಮೀಣಾಭಿವೃದ್ಧಿ-ಪಂಚಾಯತ್‍ರಾಜ್ ವಿವಿ’. ಗ್ರಾಮೀಣ ಬದುಕಿನ ಪುನಃಶ್ಚೇತನ, ಹಳ್ಳಿವಾಸಿಗರಿಗೆ ನೆಮ್ಮದಿಯ ಬದುಕು ಕಲ್ಪಿಸಲು ಪೂರಕವಾಗುವಂತಹ ಕಾರ್ಯ ಚಟುವಟಿಕೆಗಳನ್ನು ಹೊಂದಿರುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ವಿವಿ ರೂಪಿಸಲಾಗುವುದು ಎಂದು ವಿಧಾನಸಭೆಯಲ್ಲಿ ಸಚಿವ ಎಚ್.ಕೆ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಸಮಾಜ ವಿಜ್ಞಾನ ಮತ್ತು ಗ್ರಾಮೀಣ ಕ್ಷೇತ್ರದ ಪುನರ್‍ನಿರ್ಮಾಣದ ಶಾಲೆ ಕೂಡ ವಿಶ್ವವಿದ್ಯಾಲಯದ ಭಾಗವಾಗಿರಲಿದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲಿರುವಂತೆ ಕುಲಪತಿ, ಕುಲಸಚಿವ, ನಿಕಾಯಗಳನ್ನೂ ರಚಿಸಲಾಗುವುದು.

   ನಮ್ಮ ಬಾಷೆ, ಸಂಸ್ಕøತಿ, ಇತಿಹಾಸ, ಸಾಹಿತ್ಯ ಇವೆಲ್ಲವೂ ಸಹ ಚಿಗುರೊಡೆದದ್ದು ಗ್ರಾಮೀಣಭಾಗದಲ್ಲಿಯೆ. ಆದರೆ ಇಂದಿನ ನವನಾಗರೀಕತೆಯ ಅಬ್ಬರದಲ್ಲಿ ಗ್ರಾಮಚಿಂತನೆ ಮೂಲೆಗುಂಪಾಗಿದೆ. ಗ್ರಾಮಚಿಂತನೆ ನಾಶವಾದಲ್ಲಿ ಅದು ದೇಶದ ಅವನತಿಗೆ ಹೆಬ್ಬಾಗಿಲು ತೆರೆದಂತೆಯೆ. ಆದ್ದರಿಂದ ಇಂತಹ ವಿಶಿಷ್ಟ ಕಲ್ಪನೆಯ ವಿಶ್ವವಿದ್ಯಾಲಯದ ಅವಶ್ಯಕತೆ ಇಂದಿನ ದಿನಗಳಲ್ಲಿ ಅತ್ಯಾವಶ್ಯಕ. ಇದರಿಂದಾಗಿ ಗ್ರಾಮೀಣ ಸಮಾಜದ ಸಮಗ್ರ ಅಭಿವೃದ್ಧಿಯಾಗುವುದಲ್ಲದೇ, ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಇಂತಹ ನಡೆಗಳು ಶ್ಲಾಘನೀಯ ಹಾಗೂ ಸ್ವಾಗತಾರ್ಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s