ನಾನು ಜನರ ಆಯ್ಕೆ!

sid poj

ತುಂಬು ಕುಟುಂಬದಲ್ಲಿ ಹಿರಿಯರು ಏನೋ ಕೋಪದಲ್ಲಿ ಮಾತನಾಡಿದರೆ ಅದು ಸಾರ್ವಜನಿಕ ಸುದ್ದಿಯಾಗುತ್ತದೆಯೆ? ಕಿರಿಯರು ಬಾಯ್ತಪ್ಪಿ ನುಡಿದ ಮಾತು ಮನೆಗೆ ಬೆಂಕಿ ಹಚ್ಚುವಷ್ಟರ ಮಟ್ಟಿಗೆ ಕಾರಣವಾಗುತ್ತದೆಯೆ? ಈ ಪ್ರಶ್ನೆ ಕೇಳಿ ನೀವು ನಗುತ್ತಿರಬಹುದು. ಹೌದು, ಇದು ನಗು ಬರುವಂತಹ ಪ್ರಶ್ನೆಯೇ. ಆದರೆ ಇಂತಹುದೇ ಪ್ರಸಂಗವನ್ನು ಉಪ್ಪಿನಕಾಯಿ ರೀತಿ ಚಪ್ಪರಿಸುತ್ತಿರುವವರಿಗೆ ಏನನ್ನೋಣ?

   ಕಾಂಗ್ರೆಸ್ ದೇಶದ ಅತ್ಯಂತ ಹಿರಿಯ ಪಕ್ಷ. ದೇಶಕ್ಕೆ ಅನೇಕ ಸುಪ್ರಸಿದ್ಧ ನಾಯಕರನ್ನು ಕಾಂಗ್ರೆಸ್ ನೀಡಿದೆ. ಉತ್ತಮ ಆಡಳಿತ, ಜನಹಿತ ಕಾಯುವಲ್ಲಿ ಕಾಂಗ್ರೆಸ್ ಪಕ್ಷದ್ದು ಎತ್ತಿದ ಕೈ. ಸಮರ್ಥ ನಾಯಕತ್ವ ಪಕ್ಷದ ಬೆನ್ನೆಲುಬು. ದೇಶಾದ್ಯಂತ ಅದೆಷ್ಟೋ ಲಕ್ಷ ಜನ ಕಾಂಗ್ರೆಸ್ಸಿಗರಿದ್ದಾರೆ. ಒಂದು ಸಣ್ಣ ಕುಟುಂಬದಲ್ಲೇ ಒಂದೆರಡು ಮಾತು ಬಂದುಹೋಗುವಾಗ, ಇಷ್ಟು ದೊಡ್ಡ ಪಕ್ಷದಲ್ಲಿ ಮಾತುಗಳು ಬರದೇ ಇರುತ್ತವೆಯೇ? ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಮಾತು ಬಂದು ಹೋದಲ್ಲಿ ತೊಂದರೆಯಿಲ್ಲ, ಆದರೆ ಮನಸ್ತಾಪಗಳು ಉಂಟಾಗಬಾರದು. ಅದೆಷ್ಟೋ ಪಕ್ಷಗಳಲ್ಲಿ ಮನಸ್ತಾಪಗಳು ಹೊಗೆಯಾಡುತ್ತಿವೆ. ಆದರೆ ಕಾಂಗ್ರೆಸ್‍ನಲ್ಲಿ ನಾವು ಕಾಣುವುದು ಶುದ್ಧ ಅಭಿಪ್ರಾಯ ಮಂಡನೆ. ಇಲ್ಲಿ ಎಲ್ಲರಿಗೂ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯವಿದೆ. ತಮಗನ್ನಿಸಿದ್ದನ್ನು ಚರ್ಚೆ ಮಾಡುವಷ್ಟು ಮುಕ್ತ ವಾತಾವರಣವಿದೆ. ಇದೇ ರೀತಿಯಲ್ಲಿ ಬಂದುಹೋದ ಯಾವುದೋ ಮಾತನ್ನು ವಿರೋಧಪಕ್ಷದವರು, ಮಾಧ್ಯಮದವರು ಹಿಡಿದೆಳೆದು ಜಗ್ಗಾಡುತ್ತಿರುವಾಗ ಯಾರೇನು ಮಾಡಲು ಬರುತ್ತದೆ ಹೇಳಿ. ಕೆಸರಿನ ಮೇಲೆ ಕಲ್ಲೆಸೆಯುವ ಕಾಯಕವನ್ನು ಬುದ್ಧಿ ಇರುವವ ಮಾಡಲಾರ.

   ಕಾಂಗ್ರೆಸ್ ಪಕ್ಷದ ಹಿರಿಯರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ, ಸಾರ್ವಜನಿಕವಾಗಿ ಹೇಳಿದ್ದಾರೆ. ಆದರೆ ಅವರ ಮುಕ್ತ ವ್ಯಕ್ತಿತ್ವವನ್ನು ಅಸಮಾಧಾನದ ಕಿಡಿ ಎಂಬ ರೀತಿ ಚಿತ್ರಿಸಿರುವ ಮಾಧ್ಯಮಗಳು ತಮ್ಮ ಟಿಆರ್‍ಪಿಗಾಗಿ ಪೈಪೋಟಿಗಿಳಿದಿವೆ. ಎಸಿಬಿ ಕುರಿತು ಪಕ್ಷದಲ್ಲೇ ಅಸಮಾಧಾನ ಎನ್ನುವ ಹುರುಳಿಲ್ಲದ ವಾದ ಮಾಡಲಾಯಿತು, ಆ ವಾದವೇ ಮಕಾಡೆ ಮಲಗಿತು. ಮುಖ್ಯಮಂತ್ರಿ ಬದಲಾವಣೆ ಎಂಬ ಬೆಂಕಿ ಹಾಕಲಾಗಿತ್ತು, ಅದೀಗ ತಣ್ಣಗಾಗಿದೆ. ಎಲ್ಲ ತಣ್ಣಗಾದರೆ ಸುದ್ದಿಮಾಡಲು ವಿಷಯ ಬೇಕಲ್ಲ, ಅದಕ್ಕೇ ಇದೀಗ ಜನಾರ್ದನ ಪೂಜಾರಿ ಮತ್ತು ಸಿಎಂ ನಡುವಿನ ಸಂಬಂಧ ಹಾಳುಮಾಡುವ ಪ್ರಯತ್ನ ನಡೆಯುತ್ತಿದೆ. ಪಕ್ಷದ ಹಿರಿಯರಾಗಿ, ಅನುಭವಿಗಳಾಗಿ ಜನಾರ್ದನ ಪೂಜಾರಿಯವರು ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ. ಆದರೆ ಅದನ್ನೇ ದೊಡ್ಡ ಸುದ್ದಿ ಮಾಡ ಹೊರಟವರಿಗೆ ಇದೀಗ ಮುಖಭಂಗವಾದಂತಾಗಿದೆ. ಯಾಕೆಂದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷದವರ್ಯಾರೂ ತಲೆಯೇ ಕೆಡಿಸಿಕೊಂಡಿಲ್ಲ.

   ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ‘ನಾನು ಜನರ ಆಯ್ಕೆ’ ಎಂದು ಹೇಳುವ ಮೂಲಕ ಎಲ್ಲ ವಿವಾದಕ್ಕೂ ತೆರೆ ಎಳೆದಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳ ಮಾತನ್ನೇ, ಜನಾರ್ದನ ಪೂಜಾರಿಯವರ ಮಾತಿಗೆ ತಿರುಗೇಟು ಎಂದು ಮತ್ತೆ ಬಿಂಬಿಸಲಾಗುತ್ತಿದೆ. ಇದು ಇವತ್ತಿಗಷ್ಟೇ ಉರಿಯುವ ಬೆಂಕಿ. ತುಪ್ಪ ಹಾಕುವವರು ಯಾರೂ ಇಲ್ಲದೇ ಇರುವಾಗ ಟೀಕಾಕಾರರು ನಾಳೆಗೆ ಮತ್ತೆ ತಣ್ಣಗಾಗಿ, ಹೊಸ ವಿಷಯಕ್ಕಾಗಿ ಎದುರುನೋಡುತ್ತಿರುತ್ತಾರೆ, ವಿವಾದ ಉಂಟುಮಾಡಲು!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s