ಅಭಿಪ್ರಾಯ ಮಂಡನೆಯೇ ಹೊರತು ಮನಃಸ್ತಾಪವಲ್ಲ

siddaramaiah1 - Copy 5

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರ ಪರಿಹಾರಕ್ಕಾಗಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಕೆಲ ಪೂರ್ವಾಗ್ರಹಪೀಡಿತ ಗುಂಪುಗಳು ಸರ್ಕಾರದ, ಸಿದ್ದರಾಮಯ್ಯನವರ ಕಾಲೆಳೆಯುವುದನ್ನೇ ಕಾಯಕವನ್ನಾಗಿಸಿಕೊಂಡು ಹೊರಳಾಡುತ್ತಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿಗಳು ಬರ ಪೀಡಿತ ಪ್ರದೇಶಗಳಿಗೆ ಎರಡನೇ ಹಂತದ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡುತ್ತಿದ್ದಾರೆ.

   ಬರದ ಪರಿಸ್ಥಿತಿ ಕರ್ನಾಟಕಕ್ಕೆ ಬರಸಿಡಿಲಿನಂತೆ ಬಡಿದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಚಲಿತವಾಗಲಿಲ್ಲ. ಬರಪೀಡಿತ ಸ್ಥಳಗಳ ಅಧಿಕಾರಿಗಳ ಜೊತೆ ಸಿದ್ದರಾಮಯ್ಯನವರು ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಪ್ರಾಥಮಿಕ ವರದಿಯನ್ನು ಪಡೆದರು. ಬರ ಪರಿಹಾರದ ಕ್ರಮಗಳನ್ನು ತಕ್ಷಣದಲ್ಲಿ ಜಾರಿಗೊಳಿಸಿದರು. ಅಧಿಕಾರಿಗಳಿಂದ ಪಡೆದ ವರದಿಯನ್ನು ಅಧ್ಯಯನ ನಡೆಸಿ ನಂತರ ತಾವೇ ಸ್ವತಃ ಬರ ಪೀಡಿತ ಪ್ರದೇಶಗಳಿಗೆ ಹೊರಟುನಿಂತರು. ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಖುದ್ದು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡು, ಪ್ರವಾಸ ನಡೆಸಿದರೂ ಸಹ ಟೀಕಾಕಾರರು ತಮ್ಮ ನಾಲಿಗೆ ಹರಿಬಿಟ್ಟರು. ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಬರ ಪ್ರವಾಸ ಮಾಡಿದರು ಎಂದರು.

   ಮುಖ್ಯಮಂತ್ರಿಗಳು ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು 100 ಕೋಟಿಗೂ ಹೆಚ್ಚಿನ ಹಣ ಬಿಡುಗಡೆ ಮಾಡಿದರು. ಖಾಸಗಿ ಬಾವಿಗಳಿಂದ ನೀರನ್ನು ಸರಬರಾಜು ಮಾಡುವ ಕಾರ್ಯ ಪ್ರಾರಂಭಿಸಲಾಯಿತು. ಟ್ಯಾಂಕರ್ ಮೂಲಕ ನೀರು ತರಿಸಲಾಯಿತು. ಒಟ್ಟಿನಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವಲ್ಲಿ ಸರ್ಕಾರ ಸಫಲವಾಗಿದೆ. ಇದಿಷ್ಟೇ ಅಲ್ಲದೆ, ಜಾನುವಾರುಗಳಿಗೆ ನೆರಳು, ಆಹಾರ, ಔಷಧ, ನೀರು ಇದ್ಯಾವುದಕ್ಕೂ ತೊಂದರೆ ಆಗದಂತೆ ಎಲ್ಲೆಲ್ಲಿ ಅವಶ್ಯಕತೆಯಿದೆಯೋ ಅಲ್ಲೆಲ್ಲ ಮೇವು ಬ್ಯಾಂಕ್ ಮತ್ತು ಗೋಶಾಲೆಗಳನ್ನು ನಿರ್ಮಿಸಲಾಗಿದೆ. ಇನ್ನು ಬರಪೀಡಿತ ನಾಡಿನಲ್ಲಿ ಸಚಿವರ ತಂಡಗಳನ್ನು ಅಧ್ಯಯನಕ್ಕೆಂದು ಕಳುಹಿಸಲಾಗಿದೆ. ಅಲ್ಲಿನ ವಸ್ತುಸ್ಥಿತಿ ಅರಿತು, ಸೂಕ್ತ ವ್ಯವಸ್ಥೆ ಮಾಡಲು ತಾಕೀತು ಮಾಡಲಾಗಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡನೇ ಹಂತದ ಬರ ಪೀಡಿತ ಪ್ರದೇಶದ ಪ್ರವಾಸ ಮಾಡುತ್ತಿದ್ದಾರೆ. ಜನಸಾಮಾನ್ಯರ ಅಳಲಿಗೆ ಕಿವಿಯಾಗುತ್ತಿದ್ದಾರೆ.

   ಜನಪರ ಕಾಳಜಿಯಿಂದ ಸಿದ್ದರಾಮಯ್ಯನವರು ಕೆಲಸಕಾರ್ಯದಲ್ಲಿ ನಿರತರಾಗಿರುವಾಗ ಅವರ ಹಾಗೂ ಪಕ್ಷದ ಹೆಸರಿಗೆ ಕಳಂಕ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮೊದಲಿಗೆ ಮುಖ್ಯಮಂತ್ರಿಗಳು ಬದಲಾಗಲಿದ್ದಾರೆ ಎಂಬ ಪುಕಾರು ಹಬ್ಬಿಸಲಾಯಿತು. ಆದರೆ ಅದಕ್ಕೆ ಯಾರಿದಂಲೂ ಮನ್ನಣೆಯೇ ದೊರೆಯದಿದ್ದಾಗ ಟೀಕಾಕಾರರು ಬಾಲಸುಟ್ಟ ಬೆಕ್ಕಿನಂತಾದರು. ಇದೀಗ ಪಕ್ಷದ ಹಿರಿಯರು ಸಿದ್ದರಾಮಯ್ಯನವರ ಮೇಲೆ ಹರಿಹಾಯುತ್ತಿದ್ದಾರೆ ಎನ್ನುವ ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹಬ್ಬಿಸಲಾಗುತ್ತಿದೆ. ಪಕ್ಷವೆಂದರೆ ಒಂದು ತುಂಬು ಕುಟುಂಬವಿದ್ದಂತೆ. ಅಲ್ಲಿ ಒಂದು ಮಾತು ಬಂದುಹೋಗುವುದು ದೊಡ್ಡ ವಿಷಯವೇನಲ್ಲ. ಆದರೆ ಅದನ್ನೇ ದೊಡ್ಡದು ಮಾಡಿ ಮೂರನೆಯ ವ್ಯಕ್ತಿ ಬಾಯಿ ಬಡಿದುಕೊಳ್ಳುವುದಿದೆಯಲ್ಲ, ಅದು ಬುದ್ಧಿಹೀನರು ಮಾಡುವ ಕೆಲಸ. ಪಕ್ಷದಲ್ಲಿ ಅವರವರ ಅಭಿಪ್ರಾಯ ಮಂಡನೆಯಾಗುತ್ತಿದೆಯಷ್ಟೆ. ಅದನ್ನೇ ಮನಃಸ್ತಾಪ ಎನ್ನುವುದು ಎಷ್ಟು ಸರಿ? ಅಪಪ್ರಚಾರ ಮಾಡುವವರನ್ನು ನೋಡಿದರೆ ಗಾದೆಯೊಂದು ನೆನಪಿಗೆ ಬರುತ್ತದೆ, ‘ನಾಯಿ ಬೊಗಳಿದರೆ ಸ್ವರ್ಗ ಲೋಕ ಹಾಳಾಗುವುದೆ?’

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s