ಗ್ರಾಮೀಣಾಭಿವೃದ್ಧಿ – ಸಿದ್ದರಾಮಯ್ಯ ಸರ್ಕಾರದ ಸಾಧನೆ

03_big

‘ಸ್ವಚ್ಛ ಗ್ರಾಮ – ದಕ್ಷ ಆಡಳಿತ’ ಎನ್ನುವ ಪರಿಕಲ್ಪನೆಯನ್ನು ನೀಡುತ್ತಲೇ ಅಧಿಕಾರಕ್ಕೆ ಬಂದ ಪಕ್ಷ ಕಾಂಗ್ರೆಸ್. ಮಾತಿಗೆ ತಪ್ಪದೆ, ಅಭಿವೃದ್ಧಿಯೆಡೆಗೆ ದಾಪುಗಾಲಿಟ್ಟು ನಡೆದ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಜನತೆಯ ಅದರಲ್ಲೂ ಗ್ರಾಮೀಣರ ಕನಸಿಗೆ ಯಾವತ್ತೂ ತಣ್ಣಿರೆರಚಿಲ್ಲ. ಬದಲಿಗೆ ಸಮಗ್ರ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತ ಇದೀಗ ಸತತ ಮೂರನೇ ಬಾರಿಗೆ ರಾಷ್ಟ್ರೀಯ ಪಂಚಾಯತ್ ದಿವಸ್ ಪುರಸ್ಕಾರಕ್ಕೆ ಭಾಜನವಾಗಿದೆ. ಈ ಬಾರಿ ಎರಡು ರಾಷ್ಟ್ರೀಯ ಪುರಸ್ಕಾರಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಗಾಂಧೀಜಿಯವರ ಕನಸನ್ನು ನನಸು ಮಾಡುವತ್ತ ಉಳಿದೆಲ್ಲರಿಗಿಂತ ಮುಂದಿದೆ.

ರಾಜ್ಯದ 11 ಗ್ರಾಮ ಪಂಚಾಯಿತಿಗಳಿಗೆ ‘ರಾಷ್ಟ್ರೀಯ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರ ದೊರೆತರೆ, ಒಂದು ಗ್ರಾಮ ಪಂಚಾಯಿತಿಗೆ ‘ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರ’ ಲಭಿಸಿದೆ. ಇಷ್ಟೇ ಅಲ್ಲದೆ, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಹಣಕಾಸು ಹಂಚಿಕೆ ವ್ಯವಸ್ಥೆಗಾಗಿ ಇಲಾಖೆಗೆ 3ನೇ ಪ್ರಶಸ್ತಿ ದೊರಕಿದ್ದು, ಗ್ರಾಮ ಪಂಚಾಯಿತಿಗಳಿಗೆ ವಿದ್ಯುನ್ಮಾನ ಸಂಪರ್ಕ ಮತ್ತು ಸಂವಹನ ವಿಭಾಗದಲ್ಲಿ ಮೊದಲ ಸ್ಥಾನ ಲಭಿಸಿದೆ! ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಳ್ಳಿಗಳ ಉನ್ನತಿಗೆ ಒತ್ತು ನೀಡಿ ಗ್ರಾಮೀಣಾಭಿವೃದ್ಧಿಯಲ್ಲಿ ದಾಖಲಾರ್ಹ ಸಾಧನೆ ಮಾಡಿದೆ.

ಪಂಚಾಯತ್ ರಾಜ್‍ಗೂ ಸಹ ಭವ್ಯ ಇತಿಹಾಸವಿದೆ. ಪ್ರಥಮ ಮಹಾಯುದ್ಧದ ನಂತರದ ದಿನಗಳಲ್ಲಿ ‘ಗ್ರಾಮ ಪಂಚಾಯತ್ ಇಡೀ ದೇಶದ ಆಡಳಿತಕ್ಕೆ ಅತಿ ಮುಖ್ಯ’ ಎಂದು ಮಹಾತ್ಮಾ ಗಾಂಧಿಯವರು ಪ್ರತಿಪಾದನೆ ಮಾಡಿದ್ದರು. ಅದಕ್ಕೆ ಪೂರಕವಾಗಿ ಸ್ವಾತಂತ್ರ್ಯಾನಂತರ ನಾವು ರಚಿಸಿಕೊಂಡ ನಮ್ಮದೇ ಆದ ಸಂವಿಧಾನದಲ್ಲಿ ಇರುವ ಅಧಿನಿಯಮ 40 ‘ರಾಜ್ಯ ಸರ್ಕಾರಗಳು ಸ್ಥಳೀಯ ಸರ್ಕಾರಗಳನ್ನು ಸದೃಢಗೊಳಿಸಬೇಕು’ ಎಂದು ಅತ್ಯಂತ ಸ್ಪಷ್ಟವಾಗಿ ಹೇಳುತ್ತವೆ. 1983ರಲ್ಲಿ ಪಂಚಾಯತ್ ವ್ಯವಸ್ಥೆ ಕಾನೂನನ್ನು ಜಾರಿಗೆ ತರಲಾಯಿತು.

1987ರಲ್ಲಿ ಮೂರು ಸ್ತರದ ಪಂಚಾಯತ್‍ಗಳು ಅಂದರೆ – ಮಂಡಲ ಪಂಚಾಯತ್, ತಾಲೂಕು ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್‍ಗಳು ಅಸ್ತಿತ್ವಕ್ಕೆ ಬಂದವು. ಸಂಪೂರ್ಣ ಅಧಿಕಾರ ವಿಕೇಂದ್ರಿಕರಣಕ್ಕಾಗಿ ಎಲ್ಲಾ ಹಂತಗಳಲ್ಲಿಯೂ ಮೀಸಲಾತಿ ವ್ಯವಸ್ಥೆ ಮಾಡಲಾಯಿತು. ಆ ನಂತರ 1993 ಏಪ್ರಿಲ್ 24ರಂದು ಅಂಗೀಕಾರವಾದ ಸಂವಿಧಾನದ 73ನೇ ತಿದ್ದುಪಡಿಯು ಇತಿಹಾಸ ಸೃಷ್ಟಿಸಿತು. 73ನೇ ಸಂವಿಧಾನ ತಿದ್ದುಪಡಿಯಾದ ನಂತರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ-1993 ಅನ್ನು ಜಾರಿಗೆ ತಂದ ಮೊದಲ ರಾಜ್ಯ ನಮ್ಮದು ಎನ್ನುವುದು ಹೆಮ್ಮೆಯ ವಿಷಯ.

ಇತಿಹಾಸ ಕಂಡ ಏರಿಳಿತಗಳ ನಡುವೆಯೇ ಪಂಚಾಯತ್ ರಾಜ್ ವ್ಯವಸ್ಥೆ ರಾಜ್ಯದಲ್ಲಿ ಮಹತ್ತರ ಸ್ಥಾನ ಪಡೆದುಕೊಂಡಿದೆ. ಸಿದ್ದರಾಮಯ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಗ್ರಾಮೀಣ ಭಾಗಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಹಳ್ಳಿಯ ಪ್ರಗತಿಯೇ ನಾಡಿನ ಪ್ರಗತಿ ಎನ್ನುವ ಮಾತನ್ನು ಸಾಬೀತುಪಡಿಸಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s